AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವು, ಇದು ಕೊಲೆ ಎಂದು ಕುಟುಂಬದ ಆರೋಪ

ವಿಚಾರಣಾಧೀನ ಕೈದಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು (ಜೂ.14) ಉತ್ತರ ಪ್ರದೇಶದ ಪ್ರತಾಪಗಢದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Uttar Pradesh: ವಿಚಾರಣಾಧೀನ ಕೈದಿ ಹೃದಯಾಘಾತದಿಂದ ಸಾವು, ಇದು ಕೊಲೆ ಎಂದು ಕುಟುಂಬದ ಆರೋಪ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jun 14, 2023 | 10:42 AM

Share

ಪ್ರತಾಪಗಢ: ವಿಚಾರಣಾಧೀನ ಕೈದಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು (ಜೂ.14) ಉತ್ತರ ಪ್ರದೇಶದ ಪ್ರತಾಪಗಢದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಕೊಲೆ ಆರೋಪಿ ಉಮೇಶ್ ಸಿಂಗ್ (37) ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಜಿಲ್ಲಾ ಕಾರಾಗೃಹದ ಅಧೀಕ್ಷಕ ರಮಾಕಾಂತ್ ದೋಹ್ರೆ ಅವರ ಪ್ರಕಾರ, ಪ್ರತಾಪಗಢದ ಬಾಘರೈ ಪ್ರದೇಶದ ನಿವಾಸಿ ಉಮೇಶ್ ಮಂಗಳವಾರ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೈದಿಯನ್ನು 2022ರ ಮಾರ್ಚ್‌ನಲ್ಲಿ ನೈನಿ ಜೈಲಿನಿಂದ ಇಲ್ಲಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Uttar Pradesh Accident: ಉತ್ತರಪ್ರದೇಶದಲ್ಲಿ ಬಸ್​ ಪಲ್ಟಿ, 5 ಮಂದಿ ಸಾವು, 15 ಜನರಿಗೆ ಗಾಯ

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಪೂರ್ವ) ವಿದ್ಯಾಸಾಗರ್ ಮಿಶ್ರಾ ಮಾತನಾಡಿ, ಉಮೇಶ್ ಅವರ ಕುಟುಂಬ ಸದಸ್ಯರು ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ