Sign In

By signing in or creating an account, you agree with Associated Broadcasting Company's Terms & Conditions and Privacy Policy.

Atal Bihari Vajpayee Birthday: ನಾನು ಅವಿವಾಹಿತ, ಬ್ರಹ್ಮಚಾರಿಯಲ್ಲ ಎಂದಿದ್ದ ವಾಜಪೇಯಿ

ನಾನು ಅವಿವಾಹಿತ, ಬ್ರಹ್ಮಚಾರಿಯಲ್ಲ ಎಂದು ಮಾಜಿ ಪ್ರಧಾನಿ ಅಟಲ್​ಬಿಹಾರಿ ವಾಜಪೇಯಿ ಹೇಳಿದ್ದರು. ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ. ಇಡೀ ದೇಶವೇ ಅವರನ್ನು ಸ್ಮರಿಸುತ್ತಿದೆ. ಇಂದು ನಾವು ವಾಕ್ಚಾತುರ್ಯದಲ್ಲಿ ಪರಿಣತರಾದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳನ್ನು ವಿವರಿಸಲಿದ್ದೇವೆ.

Atal Bihari Vajpayee Birthday: ನಾನು ಅವಿವಾಹಿತ, ಬ್ರಹ್ಮಚಾರಿಯಲ್ಲ ಎಂದಿದ್ದ ವಾಜಪೇಯಿ
ವಾಜಪೇಯಿ
Follow us
ನಯನಾ ರಾಜೀವ್
|

Updated on: Dec 25, 2023 | 10:19 AM

ನಾನು ಅವಿವಾಹಿತ, ಬ್ರಹ್ಮಚಾರಿಯಲ್ಲ ಎಂದು ಮಾಜಿ ಪ್ರಧಾನಿ ಅಟಲ್​ಬಿಹಾರಿ ವಾಜಪೇಯಿ( Atal Bihari Vajpayee)ಹೇಳಿದ್ದರು. ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ. ಇಡೀ ದೇಶವೇ ಅವರನ್ನು ಸ್ಮರಿಸುತ್ತಿದೆ. ಇಂದು ನಾವು ವಾಕ್ಚಾತುರ್ಯದಲ್ಲಿ ಪರಿಣತರಾದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳನ್ನು ವಿವರಿಸಲಿದ್ದೇವೆ.

ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಮದುವೆಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಲಾಗಿತ್ತು, ಆಗ ನಾನು ಅವಿವಾಹಿತ ಆದರೆ ಬ್ರಹ್ಮಚಾರಿಯಲ್ಲ ಎನ್ನುವ ಉತ್ತರವನ್ನು ನೀಡಿದ್ದರು.

ಒಮ್ಮೆ ಪಾರ್ಟಿಯೊಂದರಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು ವಾಜಪೇಯಿ ಜಿ ನೀವು ಯಾಕೆ ಒಂಟಿಯಾಗಿದ್ದೀರಿ ಎಂದು ಕೇಳಿದ್ದರು ಆಗ ಆದರ್ಶ ಪತ್ನಿಯ ಹುಡುಕಾಟದಲ್ಲಿದ್ದೇನೆ ಎಂದಿದ್ದರು.

ಅಟಲ್ ಬಿಹಾರಿ ವಾಜಪೇಯಿ ಮದುವೆಯಾಗಿಲ್ಲ ಎಂಬುದು ಬಹುತೇಕರಿಗೆ ಗೊತ್ತು. ಆದರೆ ಶ್ರೀಮತಿ ಕೌಲ್ ಅವರೊಂದಿಗೆ ಪ್ರಧಾನಿ ನಿವಾಸದಲ್ಲಿ ವಾಸಿಸುತ್ತಿದ್ದರು, ಆದರೆ ಅವರ ಪತ್ನಿಯಾಗಿ ಅಲ್ಲ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಈ ಪ್ರೇಮಕಥೆಗೆ ಯಾವ ಹೆಸರೂ ಸಿಗಲಿಲ್ಲ ಎನ್ನಲಾಗಿದೆ. 1978ರಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಚೀನಾ ಮತ್ತು ಪಾಕಿಸ್ತಾನದಿಂದ ವಾಪಸಾದ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು.

ಕೌಲ್ ಬಗ್ಗೆ ಕೇಳಿದ ಪ್ರಶ್ನೆ ಕೇಳಿ ಎಲ್ಲರೂ ಸುಮ್ಮನಾದರು. ಎಲ್ಲರ ದೃಷ್ಟಿ ಈಗ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ನೆಟ್ಟಿತ್ತು. ವಾಜಪೇಯಿ ಜೀ, ಪಾಕಿಸ್ತಾನ, ಕಾಶ್ಮೀರ, ಚೀನಾದ ಮಾತು ಬಿಟ್ಟು ಮಿಸೆಸ್ ಕೌಲ್ ವಿಷಯ ಏನಾಗಿದೆ ಹೇಳಿ ಎಂದು ಪ್ರಶ್ನೆ ಕೇಳಿದ್ದರು. ಸ್ವಲ್ಪ ಸಮಯ ಮೌನವಾಗಿದ್ದ ಅಟಲ್ ಬಿಹಾರಿ, ‘ಇದು ಕಾಶ್ಮೀರದಂತಹ ಸಮಸ್ಯೆ’ ಎಂದು ನಗುತ್ತಲೇ ಉತ್ತರಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ