ಉಮೇಶ್ ಪಾಲ್ ಹತ್ಯೆ(Umesh Pal) ಪ್ರಕರಣದ ಆರೋಪಿ ಅತೀಕ್ ಅಹ್ಮದ್ ಪುತ್ರ ಅಸದ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಉತ್ತರಪ್ರದೇಶದ ಝಾನ್ಸಿಯಲ್ಲಿ ಪೊಲೀಸರಿಂದ ಎನ್ಕೌಂಟರ್ ನಡೆದಿದ್ದು, ಎನ್ಕೌಂಟರ್ನಲ್ಲಿ ಗುಲಾಮ್ ಮೊಹಮ್ಮದ್ನನ್ನು ಕೂಡ ಹತ್ಯೆಗೈಯಲಾಗಿದೆ.
ಅತೀಕ್ ಅಹ್ಮದ್ ಸೇರಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ, ಪ್ರಯಾಗರಾಜ್ ವಿಶೇಷ ಕೋರ್ಟ್ನಿಂದ ಜೀವಾವಧಿ ಶಿಕ್ಷೆ ಇತ್ತೀಚೆಗೆ ಪ್ರಕಟವಾಗಿತ್ತು.
ಅತೀಕ್ ಅಹ್ಮದ್, ಹನೀಫ್, ದಿನೇಶ್ ಪಾಸಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕೋರ್ಟ್ ಅಪರಾಧಿಗಳಿಗೆ ತಲಾ 1 ಲಕ್ಷ ದಂಡ ವಿಧಿಸಿತ್ತು.
ಅತೀಕ್ ಸುಪಾರಿ ನೀಡಿ ಬಿಎಸ್ಪಿ ಶಾಸಕ ರಾಜು ಪಾಲ್ರನ್ನು ಹತ್ಯೆ ಮಾಡಿದ್ದರು. 2005ರಲ್ಲಿ BSP ಶಾಸಕ ರಾಜು ಪಾಲ್ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ರಾಜು ಪಾಲ್ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದ ಉಮೇಶ್ ಪಾಲ್ರನ್ನು ಹಾಡಹಗಲೇ ಪೊಲೀಸರ ಎದುರೇ ಹತ್ಯೆ ಮಾಡಲಾಗಿತ್ತು. ಅಸದ್ನ ಸುಳಿವು ಕೊಟ್ಟವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Thu, 13 April 23