Atishi Marlena: ಅತಿಶಿ ಮಾರ್ಲೆನಾ ದೆಹಲಿಯ ನೂತನ ಮುಖ್ಯಮಂತ್ರಿ

|

Updated on: Sep 17, 2024 | 12:13 PM

ಅತಿಶಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Atishi Marlena: ಅತಿಶಿ ಮಾರ್ಲೆನಾ ದೆಹಲಿಯ ನೂತನ ಮುಖ್ಯಮಂತ್ರಿ
ಅತಿಶಿ
Follow us on

ಅತಿಶಿ ಮಾರ್ಲೆನಾ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ನೂತನ ಮುಖ್ಯಮಂತ್ರಿ ಯಾರೆಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಅತಿಶಿ ಮರ್ಲೆನಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಬೆಳಗ್ಗೆಯಿಂದ ಕೇಜ್ರಿವಾಲ್ ನಿವಾಸದಲ್ಲಿ ಸಭೆ ನಡೆದಿತ್ತು, ಈ ಅವಧಿಯಲ್ಲಿ ಅನೇಕ ಹೆಸರುಗಳು ಕೇಳಿಬಂದಿದ್ದವು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಅತಿಶಿ ಅವರ ಹೆಸರನ್ನು ಮುಂದಿಡಲಾಗಿತ್ತು. ಆದರೆ ಸಭೆಯಲ್ಲಿ ಅತಿಶಿ ಅವರ ಹೆಸರನ್ನು ಕೇಜ್ರಿವಾಲ್ ಘೋಷಿಸಿದರು ಮತ್ತು ಇತರ ನಾಯಕರು ಅವರನ್ನು ಬೆಂಬಲಿಸಿದರು.

ದೆಹಲಿಯ ಮದ್ಯ ನೀತಿಯ ಪ್ರಕರಣದಲ್ಲಿ ಎಎಪಿ ನಾಯಕರು ಜೈಲಿಗೆ ಹೋಗಬೇಕಾದಾಗ, ಅತಿಶಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಪಕ್ಷಕ್ಕೆ ಅಪಾರ ನಿಷ್ಠೆ ತೋರಿದ್ದಾರೆ.

ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದರು. ಅವರನ್ನು ಸೆಪ್ಟೆಂಬರ್ 13 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದಾದ ಬಳಿಕ ಸೆ.15ರಂದು ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಸಾರ್ವಜನಿಕರು ತೀರ್ಪು ನೀಡುವವರೆಗೂ ಸಿಎಂ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಹೇಳಿದ್ದರು.

ಮತ್ತಷ್ಟು ಓದಿ: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಸಂಭ್ಯಾವ್ಯ ಅಭ್ಯರ್ಥಿಗಳಿವರು

ಕೇಜ್ರಿವಾಲ್ ಅವರು ಹುದ್ದೆ, ಸಂಪತ್ತಿನ ದುರಾಸೆಯಿಲ್ಲ್ಲ ಎಂಬ ಸಂದೇಶ ನೀಡಲು ಬಯಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕಳೆದ ವಾರ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ಕೇಜ್ರಿವಾಲ್ ಅವರು ಸೆಪ್ಟೆಂಬರ್ 15 ರಂದು ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:46 am, Tue, 17 September 24