ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರದಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತನ್ನ ಕೋಳಿಯನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ದೂರುದಾರ ಮಹಿಳೆ ಗಾಯಗೊಂಡ ತನ್ನ ಕೋಳಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾರೆ. ಪಕ್ಕದ ಮನೆಯವರು ಕದ್ದು ಕೊಯ್ದು ಸಾಯಿಸಲು ಪಯತ್ನ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಈ ದೂರು ಕೇಳಿ ಪೊಲೀಸರೂ ಅಚ್ಚರಿಗೊಂಡಿದ್ದಾರೆ. ಅಕ್ಕಪಕ್ಕದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ರತನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ದಾಹ ಗ್ರಾಮದ ನಿವಾಸಿ ಜಾಂಕಿಬಾಯಿ ಬಿಂಜ್ವಾರ್ ಅವರು ಕೋಳಿಗಳನ್ನು ಸಾಕುತ್ತಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವರ ಮನೆಯ ಕೋಳಿಗಳು ಅಲ್ಲಿ ಇಲ್ಲಿ ಓಡಾಡುತ್ತವೆ. ಮಹಿಳೆಯ ಪ್ರಕಾರ, ನಮ್ಮ ಮನೆಯಲ್ಲಿ ಸಾಕಲಾದ ಕೋಳಿಗಳಲ್ಲಿ ಈ ಒಮದು ಕೋಳಿಯನ್ನು ಕೊಲ್ಲಲು ಪ್ರಯತ್ನ ಮಾಡಿದ್ದಾರೆ ಎಮದು ಅದಕ್ಕೆ ಆಗಿರುವ ಗಾಯದಿಮದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಕ ಮನೆಯವರು ಕೊಂದು ಕೋಳಿ ತಿನ್ನುವ ಮನಃಸ್ಥಿತಿಯವರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯೊಂದಿಗೆ ಆಕೆಯ ಪತಿ ಮಲಿಕ್ರಂ ಕೂಡ ಪೊಲೀಸ್ ಠಾಣೆಗೆ ಬಂದಿದ್ದಾರೆ. ಹುಂಜವನ್ನು ಕದ್ದು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ದಂಪತಿ ಆಗ್ರಹಿಸಿದ್ದಾರೆ. ಪೊಲೀಸರು ಮಹಿಳೆ ಮತ್ತು ಆಕೆಯ ಪತಿಗೆ ಈ ಬಗ್ಗೆ ಅರ್ಥ ಮಾಡಿಕೊಳ್ಳವಂತೆ ಹೇಳಿದ್ದಾರೆ. ಅರ್ಥ ಇದ್ದರು. ಆದರೆ ಇದನ್ನು ಕೇಳದ ಒಬ್ಬರಿಗೂ ಪೊಲೀಸರು ಕೋಪದಲ್ಲಿ ಉತ್ತರಿಸಿ ಮನೆಯಲ್ಲಿ ಕಳುಹಿಸಿದ್ದಾರೆ.
ಇದನ್ನೂ ಓದಿ: Viral News: ಕೋಳಿ ಲೆಗ್ ಪೀಸ್ಗಾಗಿ ಶಿಕ್ಷಕರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ, ಕೊನೆಗೆ ಶಿಕ್ಷಕರಿಗೆ ಜನರು ಮಾಡಿದ್ದೇನೆ?
ಮಹಿಳೆಯ ಪ್ರಕಾರ, ಇದಕ್ಕೂ ಮೊದಲು ಪಕ್ಕದ ಮನೆಯವರು ಅದೇ ರೀತಿಯಲ್ಲಿ ಕೋಳಿಯನ್ನು ಕದ್ದಿದ್ದಾರೆ. ಈ ವಿಚಾರವಾಗಿ ಎರಡು ಮನೆಗೂ ಜಗಳ ಉಂಟಾಗಿದೆ. ಜತೆಗೆ ಇಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಗಾಯಗೊಂಡಿದ್ದ ಕೋಳಿಯೊಂದಿಗೆ ಮಹಿಳೆ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಠಾಣೆಯ ಉಸ್ತುವಾರಿ ಪ್ರಸಾದ್ ಸಿನ್ಹಾ ತಿಳಿಸಿದ್ದಾರೆ. ದೂರು ಸ್ವೀಕರಿಸಿ ಮಹಿಳೆಯನ್ನು ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಸದ್ಯ ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ.