ದೆಹಲಿ: 2018 ರಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಕಡಲತೀರದಲ್ಲಿ ಆಸ್ಟ್ರೇಲಿಯ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ರಾಜ್ವಿಂದರ್ ಸಿಂಗ್ನ್ನು ಬಂಧಿಸಿದ್ದಾರೆ. ಕೊಲೆ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ 2018ರಲ್ಲಿ ಕಡಲತೀರದಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು ಕೊಂದು ಭಾರತದಲ್ಲಿ ಬಂದು ತಲೆಮರೆಸಿಕೊಂಡಿರುವ ಭಾರತೀಯ ಮೂಲದ ನರ್ಸ್ ಅನ್ನು ಪತ್ತೆ ಹಚ್ಚಿಕೊಟ್ಟವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಘೋಷಿಸಿದ್ದರು.
ಇನ್ನಿಸ್‌ಫೈಲ್‌ನಲ್ಲಿ ದಾದಿಯಾಗಿ ಕೆಲಸ ಮಾಡಿದ 38 ವರ್ಷದ ರಾಜ್‌ವಿಂದರ್ ಸಿಂಗ್, ಪ್ರಕರಣದ ಪ್ರಮುಖ ವ್ಯಕ್ತಿಯಾಗಿದ್ದಾನೆ. ಆದರೆ ಇತನು ಕಾರ್ಡಿಂಗ್ಲಿಯನ್ನು ಕೊಲೆ ಮಾಡಿದ ಆಸ್ಟ್ರೇಲಿಯಾದಲ್ಲಿ ಕೆಲಸವನ್ನು ತೊರೆದು ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ದೇಶವನ್ನು ಬಿಟ್ಟು ಭಾರತಕ್ಕೆ ಬಂದಿದ್ದಾರೆ.
ಆತನನ್ನು ಹುಡುಕಿ ಕೊಟ್ಟವರಿಗೆ ಕ್ವೀನ್ಸ್‌ಲ್ಯಾಂಡ್ ಪೋಲಿಸರು 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡುತ್ತೇವೆ, ಇದು ಕ್ವೀನ್ಸ್‌ಲ್ಯಾಂಡ್ ಪೋಲಿಸ್ ನೀಡಿದ ಅತಿದೊಡ್ಡ ಮೊತ್ತವಾಗಿತ್ತು.
ಇದನ್ನು ಓದಿ: ಆಸ್ಟ್ರೇಲಿಯಾದಲ್ಲಿ ಕೊಲೆ ಮಾಡಿ ಭಾರತದಲ್ಲಿ ತಲೆಮರೆಸಿಕೊಂಡಿರುವ ನರ್ಸ್ ಸುಳಿವು ಕೊಟ್ಟರೆ 8 ಕೋಟಿ ಬಹುಮಾನ
ತೊಯಾಹ್ ಹತ್ಯೆಯಾದ ಮರುದಿನ ಅಕ್ಟೋಬರ್ 22 ರಂದು ಸಿಂಗ್ ಕೇರ್ನ್ಸ್‌ನಿಂದ ತೊರೆದಿದ್ದಾನೆ, ನಂತರ 23ರಂದು ಸಿಡ್ನಿಯಿಂದ ಭಾರತಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆತ ಭಾರತದ ಯಾವ ಪ್ರದೇಶದ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದಿಲ್ಲ, ಹಾಗಾಗಿ ಭಾರತದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಬಗ್ಗೆ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಆ ವ್ಯಕ್ತಿ ಕಂಡರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರ ಜೊತೆಗೆ ಬಹುಮಾನ ನೀಡುವುದಾಗಿ ಹೇಳಿದ್ದರು, ಇದೀಗ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Published On - 11:05 am, Fri, 25 November 22