ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ಪೂರ್ತಿಯಾಗಲಿದೆ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ

T49 ದೇಶದ ಅತಿ ಉದ್ದದ ರೈಲ್ವೆ ಸುರಂಗವಾಗಿದೆ. ಈ ಸುರಂಗವು 12.75 ಕಿಮೀ ಉದ್ದವಾಗಿದೆ. ಹಲವಾರು ಸವಾಲುಗಳ ಹೊರತಾಗಿಯೂ ಈ ವರ್ಷದ ಫೆಬ್ರವರಿಯಲ್ಲಿ ಸುರಂಗದ ಕೆಲಸವನ್ನು ಆರಂಭಿಸಲಾಯಿತು.

ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ಪೂರ್ತಿಯಾಗಲಿದೆ ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ
ಜಮ್ಮು ಕಾಶ್ಮೀರದ ಟನೆಲ್
TV9kannada Web Team

| Edited By: Sushma Chakre

Nov 25, 2022 | 12:35 PM

ಶ್ರೀನಗರ: ಭಾರತೀಯ ರೈಲ್ವೆ (Indian Railways) ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದೆ. ಇದೀಗ ಜಮ್ಮು ಕಾಶ್ಮೀರದಲ್ಲಿ (Jammu Kashmir) ವಿಶ್ವದ ಅತಿ ಉದ್ದದ ರೈಲ್ವೆ ನೆಟ್‌ವರ್ಕ್‌ ಸಿದ್ಧವಾಗುತ್ತಿದೆ. ಇದು ದೇಶದ ಉತ್ತರದ ಭಾಗವನ್ನು ಅಂದರೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಇದಕ್ಕಾಗಿ ಕೆಳ ಹಿಮಾಲಯದ ಕಡಿದಾದ ಪರ್ವತ ಪ್ರದೇಶವನ್ನು ನ್ಯಾವಿಗೇಟ್ ಮಾಡಲು ಸುರಂಗಗಳು ಮತ್ತು ಸೇತುವೆಗಳನ್ನು ನಿರ್ಮಿಸುತ್ತಿದೆ. ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯು ಮುಖ್ಯ ಭೂಭಾಗದೊಂದಿಗೆ ಜಮ್ಮು ಕಾಶ್ಮೀರಕ್ಕೆ ಸೇರ್ಪಡೆಯಾಗಲು ಈ ಕಾರ್ಯಾಚರಣೆಯನ್ನು ಕೈಗೊಳ್ಳುತ್ತದೆ.

ಯುಎಸ್‌ಬಿಆರ್‌ಎಲ್ ಯೋಜನೆಗಾಗಿ ಹಲವಾರು ಸುರಂಗಗಳು ಮತ್ತು ಸೇತುವೆಗಳ ಮೇಲೆ 1 ದಶಕಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವ ಅಫ್ಕಾನ್ಸ್ ಭಾರತೀಯ ರೈಲ್ವೇಗಾಗಿ ಅತಿ ಉದ್ದದ ಈ ರೈಲ್ವೆ ಸುರಂಗವನ್ನು ಪೂರ್ಣಗೊಳಿಸುತ್ತಿದೆ. T49 ಎಂದು ಹೆಸರಿಸಲಾದ ಈ ಸುರಂಗವು 12.75 ಕಿಮೀ ಉದ್ದವಾಗಿದೆ. ಇದು ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯ ಸುಂಬರ್ ಮತ್ತು ಅರ್ಪಿಂಚಲಾ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಅಫ್ಕಾನ್ಸ್ ಒಟ್ಟು ಸುರಂಗದ 7.32 ಕಿಮೀಗಳನ್ನು ನಿರ್ಮಿಸಿದೆ. ಮುಖ್ಯ ಸುರಂಗದ ಜೊತೆಗೆ ಅಫ್ಕಾನ್ಸ್ 2 ಅಡಿಟ್‌ಗಳು, 20 ಅಡ್ಡ ಮಾರ್ಗಗಳು, 2 ಸೇತುವೆಗಳು ಮತ್ತು ಇತರ ನಿಲ್ದಾಣಗಳ ಅಂಗಳವನ್ನು ಸಹ ನಿರ್ಮಿಸಿದೆ.

ಇದನ್ನೂ ಓದಿ: Bengaluru Metro: 2025ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಲಿದೆ

ಹಿಮಾಲಯದಲ್ಲಿ ಸುರಂಗ ಮಾರ್ಗವೇ ನಿಜವಾದ ಸವಾಲಾಗಿದೆ. ಹಲವಾರು ಸವಾಲುಗಳ ಹೊರತಾಗಿಯೂ ಈ ವರ್ಷದ ಫೆಬ್ರವರಿಯಲ್ಲಿ ಸುರಂಗದ ಕೆಲಸವನ್ನು ಆರಂಭಿಸಲಾಯಿತು. T49 ಶೀಘ್ರದಲ್ಲೇ ರಾಷ್ಟ್ರ ಮತ್ತು ಭಾರತೀಯ ರೈಲ್ವೆಗೆ ಹೆಮ್ಮೆಯ ವಿಷಯವಾಗಲಿದೆ.

ಏನಿದರ ವಿಶೇಷತೆ?: T49 ದೇಶದ ಅತಿ ಉದ್ದದ ರೈಲ್ವೆ ಸುರಂಗವಾಗಿದೆ. ಈ ಸುರಂಗವು 12.75 ಕಿಮೀ ಉದ್ದವಾಗಿದೆ ಮತ್ತು ಪೀರ್ ಪಂಜಾಲ್ ಸುರಂಗವನ್ನು (11.2 ಕಿಮೀ) ಮೀರಿಸುತ್ತದೆ. ಇದು USBRL ಯೋಜನೆಯ ಭಾಗವಾಗಿದೆ. ಈ ಸುರಂಗವನ್ನು ಫೆಬ್ರವರಿ 15ರಂದು ಆರಂಭಿಸಲಾಯಿತು. ಅಫ್ಕಾನ್ಸ್ ಒಟ್ಟು ಸುರಂಗದ 7.32 ಕಿಮೀ (ಸುಮಾರು 60%) ನಿರ್ಮಿಸಿದೆ. ಆಫ್ಕಾನ್ಸ್ 1,600 ಮೀ ಎತ್ತರದಲ್ಲಿರುವ ಉತ್ತರ ಪೋರ್ಟಲ್‌ನಿಂದ ಸುರಂಗವನ್ನು ನಿರ್ಮಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada