ಮೆಟ್ರೋ 2ನೇ ಹಂತದ ರೀಚ್ 6 ಸುರಂಗ: ಕಾಮಗಾರಿ ಮುಗಿಸಿ ಯಶಸ್ವಿಯಾಗಿ ಹೊರಬಂದ ಉರ್ಜಾ ಟಿಬಿಎಂ

TV9kannada Web Team

TV9kannada Web Team | Edited By: Rashmi Kallakatta

Updated on: Jun 30, 2022 | 1:55 PM

22.12.2021 ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಮಾರ್ಗವನ್ನು ಪ್ರಾರಂಭಿಸಿರುವ URJA TBM, ಈ 900ಮೀ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದೆ

ಮೆಟ್ರೋ 2ನೇ ಹಂತದ ರೀಚ್ 6 ಸುರಂಗ: ಕಾಮಗಾರಿ ಮುಗಿಸಿ ಯಶಸ್ವಿಯಾಗಿ ಹೊರಬಂದ ಉರ್ಜಾ ಟಿಬಿಎಂ
ಉರ್ಜಾ ಟಿಬಿಎಂ

ಬೆಂಗಳೂರು: 6 ತಿಂಗಳ ನಂತರ ಇಂದು 900 ಮೀಟರ್ ಸುರಂಗ ಕೊರೆದು ಉರ್ಜಾ ಟಿಬಿಎಂ (URJA TBM) ಹೊರಬಂದಿದೆ. 2021ರ ಡಿ.22ರಂದು ಕಂಟೋನ್ಮೆಂಟ್ ನಿಲ್ದಾಣದಿಂದ (Cantonment station)ಆರಂಭಿಸಿ ಪಾಟರಿ ಟೌನ್ (Pottery Town Station) ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿತ್ತು ಉರ್ಜಾ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಸುರಂಗ ಮಾರ್ಗ ಇದಾಗಿದೆ. ಶಿವಾಜಿನಗರದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಸ್ಟೇಷನ್ ಬಳಿ ಬ್ರೇಕ್ ಥ್ರೂ ಆಗಿತ್ತು.ಮೊದಲ ಊರ್ಜಾ ಬ್ರೇಕ್ ಥ್ರೂ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದ್ದರು.

22.12.2021 ರಂದು ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಮಾರ್ಗವನ್ನು ಪ್ರಾರಂಭಿಸಿರುವ URJA TBM, ಈ 900ಮೀ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದೆ ಎಂದು ನಮ್ಮ ಮೆಟ್ರೋದಲ್ಲಿ ಕಾರ್ಯನಿರ್ವಾಹಕ ಸಹಾಯಕ-ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರಿವಸ್ ರಾಜಗೋಪಾಲನ್ ವಿಡಿಯೊ ಟ್ವೀಟ್ ಮಾಡಿದ್ದಾರೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada