ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರ ಬಳಿಯೇ ಕುಳಿತುಕೊಳ್ಳಬೇಕು: ಡಿಜಿಸಿಎ

|

Updated on: Apr 23, 2024 | 2:17 PM

ಇನ್ನುಮುಂದೆ ವಿಮಾನದಲ್ಲಿ 12ವರ್ಷದೊಳಗಿನ ಮಕ್ಕಳು ಪೋಷಕರ ಬಳಿಯ ಆಸನದಲ್ಲೇ ಕುಳಿತುಕೊಳ್ಳಬೇಕು ಎಂದು ಡಿಜಿಸಿಎ ಆದೇಶಿಸಿದೆ.

ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರ ಬಳಿಯೇ ಕುಳಿತುಕೊಳ್ಳಬೇಕು: ಡಿಜಿಸಿಎ
ಮಕ್ಕಳು, ಪೋಷಕರು
Follow us on

ವಿಮಾನ(Flight)ದಲ್ಲಿ 12 ವರ್ಷದೊಳಗಿನ ಮಕ್ಕಳು(Children) ತಮ್ಮ ಪೋಷಕರ ಬಳಿಯೇ ಕುಳಿತುಕೊಳ್ಳಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚನೆ ನೀಡಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ವಿಮಾನಗಳಲ್ಲಿ ತಮ್ಮ ಪೋಷಕರೊಂದಿಗೆ ಕುಳಿತುಕೊಳ್ಳಲು ಅನುಮತಿಸದ ಘಟನೆಗಳ ನಂತರ ಬಳಿಕ ಈ ನಿರ್ದೇಶನ ನೀಡಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ವಾಯು ಸಾರಿಗೆ ಸುತ್ತೋಲೆಗೆ ತಿದ್ದುಪಡಿ ತಂದಿದೆ.

ಝೀರೋ ಬ್ಯಾಗೇಜ್, ಪ್ರಾಶಸ್ತ್ಯದ ಆಸನ, ಊಟ / ತಿಂಡಿ / ಪಾನೀಯ ಶುಲ್ಕಗಳು, ಸಂಗೀತ ವಾದ್ಯಗಳ ಸಾಗಣೆಗೆ ಶುಲ್ಕಗಳು ಇತ್ಯಾದಿಗಳಂತಹ ಕೆಲವು ಸೇವೆಗಳು. ಇದಕ್ಕೆ ಪ್ರತ್ಯೇಕ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಲಾಗುವುದು. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ದೇಶೀಯ ವಿಮಾನ ಸಂಚಾರ ಹೆಚ್ಚುತ್ತಿದೆ.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ಎಲ್ಲಾ ಏರ್​ಲೈನ್ಸ್​ನಲ್ಲಿ ಅಧಿಕಾರಿಗಳು ಮಕ್ಕಳನ್ನು ಅವರ ಪೋಷಕರ ಜತೆಗೇ ಕೂರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರೂ ಯಾರೂ ಲಿಖಿತವಾಗಿ ಬದ್ಧರಿರಲಿಲ್ಲ. ಹಲವು ಪ್ರಯಾಣಿಕರು ತಮ್ಮೊಟ್ಟಿಗೆ ಮಕ್ಕಳನ್ನು ಕೂರಿಸುತ್ತಿಲ್ಲ ಎಂದು ದೂರಿದ್ದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:11 pm, Tue, 23 April 24