ಉತ್ತರ ಪ್ರದೇಶದ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್‌ಗೆ ಜಾಮೀನು

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2022 | 9:59 AM

ಪಿಯೂಷ್ ಜೈನ ಅವರನ್ನು ಡಿಸೆಂಬರ್ 26, 2021 ರಂದು ಸಿಬಿಐಸಿ ಅಧಿಕಾರಿಗಳು ಬಂಧಿಸಲಾಯಿತು, ಅವರ ನಿವಾಸದ ಮೇಲೆ ಸಿಬಿಐಸಿ ದಾಳಿ ನಡೆದು ಭಾರಿ ಹಣವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು.

ಉತ್ತರ ಪ್ರದೇಶದ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್‌ಗೆ ಜಾಮೀನು
Piyush Jain
Follow us on

ಉತ್ತರ ಪ್ರದೇಶ: ಕಳೆದ ವರ್ಷ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರ ಆವರಣದ ಮೇಲೆ ಸಿಬಿಐಸಿ ದಾಳಿ ನಡೆಸಿ ಸುಮಾರು 200 ಕೋಟಿ ರೂಪಾಯಿ ನಗದು ಮತ್ತು 23 ಕೆಜಿ ಚಿನ್ನವನ್ನು ಸಿಬಿಐಸಿ ವಶಪಡಿಸಿಕೊಂಡಿದ್ದು, ಎಂಟು ತಿಂಗಳ ಸೆರೆವಾಸ ಅನುಭವಿಸಿ ಇದೀಗ ಅವರಿಗೆ ಗುರುವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಅವರ ಬಂಧನವು ಗದ್ದಲಕ್ಕೆ ಕಾರಣವಾಗಿತ್ತು, ಕಾನ್ಪುರ ಮೂಲದ ಸುಗಂಧ ದ್ರವ್ಯ ವ್ಯಾಪಾರಿಯನ್ನು ಬಿಜೆಪಿಯು ಸಮಾಜವಾದಿ ಪಕ್ಷದ (ಎಸ್‌ಪಿ) ಸ್ನೇಹಿತ ಎಂದು ಕರೆದಿದೆ. ಆದರೆ ಜೈನ್ ಬಿಜೆಪಿಗೆ ಸೇರಿದವರು ಎಂದು ವಿರೋಧ ಪಕ್ಷ ಆರೋಪಿಸಿತ್ತು.

ವಿಶೇಷ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಬಿಡುಗಡೆ ಮಾಡಿದ ಆದೇಶದ ನಂತರ ಪಿಯೂಷ್ ಜೈನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಕಾನ್ಪುರ ಜೈಲು ಅಧೀಕ್ಷಕ ಬಿಧು ದತ್ ಪಾಂಡೆ ಹೇಳಿದ್ದಾರೆ.

ಕಳೆದ ವಾರ ಅಲಹಾಬಾದ್ ಹೈಕೋರ್ಟ್ ಜೈನ್ ಅವರ ಜಾಮೀನು ಅರ್ಜಿಯನ್ನು ಅಂಗೀಕರಿಸಿದ ನಂತರ ವಿಶೇಷ ಸಿಜೆಎಂ ಬಿಡುಗಡೆ ಪರವಾನಗಿಯನ್ನು ನೀಡಿತು. ಅವರ ಕುಟುಂಬ ಸದಸ್ಯರು ಮಾಡಿದ ತಲಾ 10 ಲಕ್ಷ ರೂ.ಗೆ ಇಬ್ಬರ ಶ್ಯೂರಿಟಿ ಸಲ್ಲಿಸುವಂತೆ ವಿಶೇಷ ಸಿಜೆಎಂ ಸೂಚಿಸಿದರು.

ಡಿಸೆಂಬರ್ 26 ರಂದು ಜೈನ್ ಅವರ ನಿವಾಸದ ಮೇಲೆ ನಡೆದ ದಾಳಿಯ ನಂತರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಭಾರಿ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು.

 

 

Published On - 9:57 am, Fri, 9 September 22