ಅಹಮದಾಬಾದ್‌ನಲ್ಲಿ ರಥಯಾತ್ರೆ ವೀಕ್ಷಿಸುತ್ತಿದ್ದವರ ಮೇಲೆ ಕುಸಿದ ಬಾಲ್ಕನಿ; 8 ಮಂದಿಗೆ ಗಾಯ

|

Updated on: Jun 20, 2023 | 6:56 PM

ಭಗವಾನ್ ಜಗನ್ನಾಥನ 146 ನೇ ರಥಯಾತ್ರೆಯು ಮಂಗಳವಾರ ಅಹಮದಾಬಾದ್‌ನಲ್ಲಿ ಪ್ರಾರಂಭವಾಗುತ್ತಿದ್ದಂತೆ, ದೇವರ ದರ್ಶನಕ್ಕಾಗಿ ಭವ್ಯವಾದ ಮೆರವಣಿಗೆಯ 18 ಕಿಮೀ ಮಾರ್ಗದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು.

ಅಹಮದಾಬಾದ್‌ನಲ್ಲಿ ರಥಯಾತ್ರೆ ವೀಕ್ಷಿಸುತ್ತಿದ್ದವರ ಮೇಲೆ ಕುಸಿದ ಬಾಲ್ಕನಿ; 8 ಮಂದಿಗೆ ಗಾಯ
ಕಟ್ಟಡ ಕುಸಿತ
Follow us on

ಗುಜರಾತ್‌ನಲ್ಲಿ (Gujarat) ಮಂಗಳವಾರ ಎರಡು ಅಂತಸ್ತಿನ ಕಟ್ಟಡದ ಬಾಲ್ಕನಿ ಕುಸಿದು (building collapses) ಎಂಟು ಜನರು ಗಾಯಗೊಂಡಿದ್ದಾರೆ. ಅಹಮದಾಬಾದ್‌ನ (Ahmedabad) ದರಿಯಾಪುರದಲ್ಲಿ ಜಗನ್ನಾಥ ದೇವರ ರಥಯಾತ್ರೆ ವೇಳೆ ಈ ಘಟನೆ ನಡೆದಿದೆ. ರಥಯಾತ್ರೆಯ ಮೆರವಣಿಗೆಯನ್ನು ನೋಡುತ್ತಿದ್ದಂತೆ ಕಟ್ಟಡದ ಒಂದು ಭಾಗ ಕುಸಿದಿದೆ. ಭಗವಾನ್ ಜಗನ್ನಾಥನ 146 ನೇ ರಥಯಾತ್ರೆಯು ಮಂಗಳವಾರ ಅಹಮದಾಬಾದ್‌ನಲ್ಲಿ ಪ್ರಾರಂಭವಾಗುತ್ತಿದ್ದಂತೆ, ದೇವರ ದರ್ಶನಕ್ಕಾಗಿ ಭವ್ಯವಾದ ಮೆರವಣಿಗೆಯ 18 ಕಿಮೀ ಮಾರ್ಗದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಬೆಳಿಗ್ಗೆ ಚಿನ್ನದ ಪೊರಕೆಯನ್ನು ಬಳಸಿ ರಥಗಳ ಮಾರ್ಗವನ್ನು ಸ್ವಚ್ಛಗೊಳಿಸುವ ಸಾಂಕೇತಿಕ ಆಚರಣೆಯಾದ ‘ಪಹಿಂದ್ ವಿಧಿ’ ಮಾಡಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬೆಳಗ್ಗೆ ದೇವಸ್ಥಾನದಲ್ಲಿ ನಡೆದ ಮಂಗಳ ಆರತಿಯಲ್ಲಿ ಪಾಲ್ಗೊಂಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ ಅವರು ರಥಯಾತ್ರೆಯನ್ನು “ನಂಬಿಕೆ ಮತ್ತು ಭಕ್ತಿಯ ಸಂಗಮ” ಎಂದು ಕರೆದಿದ್ದು, ಭಗವಂತನ ದರ್ಶನ ಅನುಭವವನ್ನು ದೈವಿಕ ಮತ್ತು ಮರೆಯಲಾಗದ್ದು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ