ಬಾಲಸೋರ್ ರೈಲು ಅಪಘಾತದ ನಂತರ ಸಿಬ್ಬಂದಿ ಪರಾರಿಯಾಗಿರುವ ವರದಿಗಳನ್ನು ತಳ್ಳಿ ಹಾಕಿದ ರೈಲ್ವೇ ಅಧಿಕಾರಿ
ಅಮೀರ್ ಖಾನ್ ಎಂಬ ಜೂನಿಯರ್ ಇಂಜಿನಿಯರ್ (ಜೆಇ) ತಲೆಮರೆಸಿಕೊಂಡ ನಂತರ ಅವರ ಬಾಡಿಗೆ ಮನೆಗೆ ಕೇಂದ್ರೀಯ ತನಿಖಾ ದಳವು ಸೀಲ್ ಮಾಡಿದೆ . ಜೆಇಯನ್ನು ಏಜೆನ್ಸಿಯಿಂದ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿದ್ದವು.
ಬಹನಾಗಾ ಬಜಾರ್ (Bahanaga Bazar) ರೈಲು ನಿಲ್ದಾಣದ ಬಳಿ ರೈಲು ಅಪಘಾತದ ನಂತರ ರೈಲ್ವೆ ಸಿಬ್ಬಂದಿ ಪರಾರಿಯಾಗಿರುವ ಬಗ್ಗೆ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಆಗ್ನೇಯ ರೈಲ್ವೆಯ (South Eastern Railway) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ, ಇದು ಸುಳ್ಳು. ಎಲ್ಲ ಸಿಬ್ಬಂದಿ ಹಾಜರಾಗಿದ್ದಾರೆ ಮತ್ತು ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಅವರು ಏಜೆನ್ಸಿಯ ಮುಂದೆ ಹಾಜರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅಮೀರ್ ಖಾನ್ ಎಂಬ ಜೂನಿಯರ್ ಇಂಜಿನಿಯರ್ (JE) ತಲೆಮರೆಸಿಕೊಂಡ ನಂತರ ಅವರ ಬಾಡಿಗೆ ಮನೆಗೆ ಕೇಂದ್ರೀಯ ತನಿಖಾ ದಳವು ಸೀಲ್ ಮಾಡಿದೆ . ಜೆಇಯನ್ನು ಏಜೆನ್ಸಿಯಿಂದ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿದ್ದವು.
ಸಿಗ್ನಲ್ ಜೆಇಗಳು ಭಾರತೀಯ ರೈಲ್ವೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ ಮತ್ತು ಸಿಗ್ನಲಿಂಗ್ ಉಪಕರಣಗಳ ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿಗೆ ಜವಾಬ್ದಾರರಾಗಿರುತ್ತಾರೆ. ಎಲ್ಲಾ ಸಮಯದಲ್ಲೂ ಸುರಕ್ಷಿತ ರೈಲು ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ವ್ಯವಸ್ಥೆಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಅವರ ಜವಾಬ್ದಾರಿ ಆಗಿದೆ.
#WATCH | Balasore train accident | “A few media reports are coming in that a Bahanaga staff is absconding and missing. This is factually incorrect. The entire staff is present & a part of inquiry. They are appearing before agency,” says Aditya Kumar Chaudhary, CPRO South Eastern… pic.twitter.com/Htc538cIFp
— ANI (@ANI) June 20, 2023
ಬಾಲಸೋರ್ ರೈಲು ಅಪಘಾತದ ತನಿಖೆ ಸಿಬಿಐಗೆ
ಜೂನ್ 6 ರಂದು ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್ ಅನ್ನು ಟ್ಯಾಂಪರಿಂಗ್ ಮಾಡುವ ಶಂಕೆಗಳು ಹೆಚ್ಚಾಗುತ್ತಿದ್ದಂತೆ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು.
ಬಾಲಸೋರ್ ರೈಲು ಅಪಘಾತ
ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ತ ಕೋಚ್‌ಗಳನ್ನು ಹಳಿತಪ್ಪಿ ನಿಂತ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 292 ಜನರು ಸಾವನ್ನಪ್ಪಿದ್ದವು. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಆ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಬೋಗಿಗಳಿಗೆ ಗುದ್ದಿದ್ದು, ಗಂಭೀರ ಅಪಘಾತ ನಡೆದಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ