AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಒಡಿಶಾದ ಸ್ಟೇಷನ್ ಮಾಸ್ಟರ್ ಷರೀಫ್ ತಲೆಮರೆಸಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ; ಅಲ್ಲಿ ಷರೀಫ್ ಎಂಬ ಸಿಬ್ಬಂದಿಯೇ ಇಲ್ಲ

ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬಹನಾಗ ಬಜಾರ್ ಸ್ಟೇಷನ್ ಮಾಸ್ಟರ್ ಹೆಸರು ಎಸ್ ಬಿ ಮೊಹಂತಿ. ಅಪಘಾತದ ನಂತರ ಸ್ವಲ್ಪ ಸಮಯದವರೆಗೆ ಮೊಹಂತಿ ನಾಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿ ಬಂದಿತ್ತು. ಆದರೆ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ

Fact Check: ಒಡಿಶಾದ ಸ್ಟೇಷನ್ ಮಾಸ್ಟರ್ ಷರೀಫ್ ತಲೆಮರೆಸಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ; ಅಲ್ಲಿ ಷರೀಫ್ ಎಂಬ ಸಿಬ್ಬಂದಿಯೇ ಇಲ್ಲ
ಒಡಿಶಾದ ಸ್ಚೇಷನ್ ಮಾಸ್ಟರ್ ಹೆಸರು ಷರೀಫ್ ಎಂದು ಅಲ್ಲ
ರಶ್ಮಿ ಕಲ್ಲಕಟ್ಟ
|

Updated on: Jun 07, 2023 | 9:03 PM

Share

ಶುಕ್ರವಾರ, ಜೂನ್ 2 ರಂದು ಒಡಿಶಾದ (Odisha Train Accident) ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ (Balasore Train Accident) ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಮತ್ತು 800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಗ್ನೇಯ ರೈಲ್ವೆ ವಲಯದ ಖರಗ್‌ಪುರ ರೈಲ್ವೆ ವಿಭಾಗದ ವ್ಯಾಪ್ತಿಯ ಖರಗ್‌ಪುರ–ಪುರಿ ಮಾರ್ಗದ ಬಹನಾಗಾ ಬಜಾರ್ ರೈಲು ನಿಲ್ದಾಣದ (Bahanaga Bazar railway station) ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರದ ದಿನಗಳಲ್ಲಿ, ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲು ರೈಲ್ವೇ ವಿಚಾರಣೆಯನ್ನು ಪ್ರಾರಂಭಿಸಿದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳು ಹರಿದಾಡಿವೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್, ಷರೀಫ್ ಅಪಘಾತದ ನಂತರ ತಲೆಮರೆಸಿಕೊಂಡಿದ್ದಾರೆ ಎಂದು ಪೋಸ್ಟ್ ಶೇರ್ ಮಾಡುತ್ತಿದ್ದಾರೆ.

ಟ್ವೀಟಿಗರೊಬ್ಬರು ಇದು (ಟ್ರಿಪಲ್ ರೈಲು ಡಿಕ್ಕಿ) ಅಪಘಾತವಲ್ಲ, ನಿರ್ಲಕ್ಷ್ಯವಲ್ಲ, ತಲೆಮರೆಸಿಕೊಂಡಿರುವ ಸ್ಟೇಷನ್ ಮಾಸ್ಟರ್ ಷರೀಫ್  ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದ್ದಾರೆ. ಅವರು ಕೋರಮಂಡಲ್ ಎಕ್ಸ್‌ಪ್ರೆಸ್ ಅನ್ನು ಗೂಡ್ಸ್ ರೈಲಿನ ಲೂಪ್ ಲೈನ್‌ಗೆ ಸರಿಸಿದರು. ಸ್ಚೇಷನ್ ಮಾಸ್ಟರ್ ಷರೀಫ್ ಶಾಮೀಲಾಗಿರುವುದು ತನಿಖೆಯಲ್ಲಿ ಬಯಲಾದರೆ ಆತನ ಅಸಲಿ ಮುಖ ಬಯಲಾಗಲಿದೆ ಎಂದಿದ್ದಾರೆ.

ಫ್ಯಾಕ್ಟ್ ಚೆಕ್

ಅಪಘಾತ ಸ್ಥಳದಿಂದ ವರದಿ ಮಾಡಿದ ಪತ್ರಕರ್ತರ ಸಹಾಯದಿಂದ ಆಲ್ಟ್ ನ್ಯೂಸ್ ಬಹನಗಾ ಬಜಾರ್ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಹೆಸರು ಡಿಸ್​​ಪ್ಲೇ ಆಗಿರುವ ಸ್ಟೇಷನ್ ಮಾಸ್ಟರ್‌ನ ಕೋಣೆಯ ಹೊರಗೆ ನೇತುಹಾಕಿದ ಬೋರ್ಡ್‌ನ ಫೋಟೊ ಪರಿಶೀಲಿಸಿದೆ. ಅದರಲ್ಲಿ ಷರೀಫ್ ಎಂದು ಯಾರೂ ಇರಲಿಲ್ಲ.ಈ ಬಗ್ಗೆ ಕೀವರ್ಡ್ ಕೊಟ್ಟು ಹುಡುಕಿದಾಗ ಜೂನ್ 3 ರಂದು ಪ್ರಕಟವಾದ ಒಡಿಯಾ ಭಾಷೆಯ ಕಳಿಂಗ ಟಿವಿಯ ವರದಿ ಸಿಕ್ಕಿದೆ. ಅದರಲ್ಲಿ ಒಡಿಶಾ ರೈಲು ಅಪಘಾತ: ಬಹನಾಗ ಸಹಾಯಕ ಸ್ಟೇಷನ್ ಮಾಸ್ಟರ್ ಪರಾರಿಯಾಗಿದ್ದಾರೆ, ಪ್ರಕರಣ ದಾಖಲಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟವಾಗಿದೆ. ವರದಿ ಪ್ರಕಾರ, ಕರ್ತವ್ಯದಲ್ಲಿದ್ದ ಬಹನಾಗಾ ಸಹಾಯಕ ಸ್ಟೇಷನ್ ಮಾಸ್ಟರ್ ಎಸ್ ಬಿ ಮೊಹಂತಿ ಅವರು ರೈಲು ಅಪಘಾತ ಸಂಭವಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಇದೆ.

ಜೂನ್ 5 ರಂದು ಕಳಿಂಗ ಟಿವಿಯಲ್ಲಿ ಇನ್ನೊಂದು ವರದಿ ಪ್ರಕಟವಾಗಿದೆ. ಒಡಿಶಾ ರೈಲು ಅಪಘಾತ: ಬಹನಾಗಾ ಸ್ಟೇಷನ್ ಮಾಸ್ಟರ್‌ನ ವಿಚಾರಣೆ ನಡೆಯುತ್ತಿದೆ. ಜೂನ್ 2 ರಂದು ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಮೊಹಾಂತಿ ಅವರನ್ನು ರೈಲ್ವೆ ಸುರಕ್ಷತಾ ಆಯುಕ್ತರ ತಂಡವು ವಿಚಾರಣೆ ನಡೆಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಲ್ಟ್ ನ್ಯೂಸ್ ತಂಡ ಒಡಿಶಾದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಿಲ್ದಾಣದ ಸಿಬ್ಬಂದಿ ಯಾರೂ ತಲೆಮರೆಸಿಕೊಂಡಿಲ್ಲ. ಪೊಲೀಸರು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ನಿಲ್ದಾಣದ ಸಿಬ್ಬಂದಿಯಲ್ಲಿ ‘ಷರೀಫ್’ ಎಂಬ ಹೆಸರಿನವರು ಯಾರೂ ಇರಲಿಲ್ಲ ಎಂದು ಹೇಳಿದ್ದಾರೆ. ನಿಲ್ದಾಣದ ಎಲ್ಲ ಸಿಬ್ಬಂದಿ ಇಲ್ಲಿಯೇ ಇದ್ದಾರೆ. ಅವರು ವಿವಿಧ ಹಂತಗಳಲ್ಲಿ/ಸ್ಥಳಗಳಲ್ಲಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Fact Check: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಎಂಎಸ್ ಧೋನಿ; ವೈರಲ್ ಪೋಸ್ಟ್ Fake

ಅಪಘಾತದ ಸುದ್ದಿಯನ್ನು ವರದಿ ಮಾಡಿದ ಇಂಗ್ಲಿಷ್ ದೈನಿಕದ ಭುವನೇಶ್ವರ ಮೂಲದ ಹಿರಿಯ ಪತ್ರಕರ್ತರಲ್ಲಿ ಈ ಬಗ್ಗೆ ಕೇಳಿದಾಗ, ಇದೆಲ್ಲವೂ ವದಂತಿ. ಅವರು ತಲೆಮರೆಸಿಕೊಂಡಿಲ್ಲ. ಅವರೆಲ್ಲರೂ ತನಿಖೆಯಲ್ಲಿ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ಮೊಹಂತಿ ತನಿಖೆಗೆ ಹಾಜರಾಗಲು ನಿನ್ನೆ ತಡರಾತ್ರಿ ಖುರ್ದಾಗೆ ಪ್ರಯಾಣಿಸಿದ್ದಾರೆ. ಎಸ್ ಬಿ ಮೊಹಂತಿ ತಲೆಮರೆಸಿಕೊಂಡಿಲ್ಲ ಎಂದು ರೈಲ್ವೇ ಪಿಆರ್‌ಒ ನಿಹಾರ್ ಮೊಹಂತಿ ಕೂಡ ಆಲ್ಟ್ ನ್ಯೂಸ್‌ಗೆ ಖಚಿತಪಡಿಸಿದ್ದಾರೆ.

@Manv1994 ಎಂಬ ಬಳಕೆದಾರರು ಟ್ವೀಟ್‌ನಲ್ಲಿ ಬಳಸಿದ ಚಿತ್ರದ ಸತ್ಯಾಸತ್ಯತೆ ಪರಿಶೀಲಿಸಲು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ vikaschander.com ಎಂಬ ವೆಬ್‌ಸೈಟ್‌ನಲ್ಲಿ ಮಾರ್ಚ್ 2004 ರಂದು ಪ್ರಕಟವಾದ ಬ್ಲಾಗ್ ಪೋಸ್ಟ್‌ನಲ್ಲಿ ಈ ಚಿತ್ರ ಸಿಕ್ಕಿದೆ. ಅದರಲ್ಲಿ Kottavalasa Kirandul KK Line ಎಂದು ಬರೆಯಲಾಗಿದೆ ಅಂತಹ ಹೆಚ್ಚಿನ ರೈಲ್ವೆ ಬ್ಲಾಗ್ ಪೋಸ್ಟ್‌ಗಳು ಈ ವೆಬ್‌ಸೈಟ್‌ನಲ್ಲಿದೆ. ವೈರಲ್ ಪೋಸ್ಟ್‌ಗಳಲ್ಲಿ ಬಳಸಿರುವ ಈ ವ್ಯಕ್ತಿಯನ್ನು ಬ್ಲಾಗ್‌ನಲ್ಲಿ ಬೊರ್ರಾ ಗುಹಾಲು ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಎಂದು ಗುರುತಿಸಲಾಗಿದೆ.

ಹೀಗಾಗಿ, ಷರೀಫ್ ಎಂಬ ಬಾಲಸೋರ್ ರೈಲ್ವೆ ಸ್ಟೇಷನ್ ಮಾಸ್ಟರ್ ತಲೆಮರೆಸಿಕೊಂಡಿದ್ದಾನೆ ಎಂಬ ಹೇಳಿಕೆಗಳು ಸುಳ್ಳು. ಬಹನಾಗ ಬಜಾರ್ ಸ್ಟೇಷನ್ ಮಾಸ್ಟರ್ ಹೆಸರು ಎಸ್ ಬಿ ಮೊಹಂತಿ. ಅಪಘಾತದ ನಂತರ ಸ್ವಲ್ಪ ಸಮಯದವರೆಗೆ ಮೊಹಂತಿ ನಾಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿ ಬಂದಿತ್ತು. ಆದರೆ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಮೂಲಗಳು ಹೇಳಿವೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ