ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಈಗಾಗಲೇ ಹದಗೆಟ್ಟಿದೆ. ಅಂದು ಬಾಂಗ್ಲಾ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅಂದು ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಾಗಲೇ ಸಂಬಂಧ ಅರ್ಧ ಹಳಸಿತ್ತು. ಅದಾದ ಬಳಿಕ ಅಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿತ್ತು. ಇದಾದ ಬಳಿಕ ಹಿಂದೂಗಳ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಿವೆ.
ಇತ್ತೀಚೆಗಷ್ಟೇ ಚಿನ್ಮಯ್ ಕೃಷ್ಣದಾಸ್ ಎಂಬುವವರನ್ನು ಬಂಧಿಸಲಾಗಿತ್ತು. ಅವರ ಪರ ವಾದ ಮಂಡಿಸಲು ಬಂದಿದ್ದ ವಕೀಲರನ್ನೂ ಕೋರ್ಟ್ ಆವರಣದಿಂದಲೇ ವಾಪಸ್ ಕಳುಹಿಸಲಾಗಿತ್ತು. ಅವರ ಬಿಡುಗಡೆಗಾಗಿ ಒತ್ತಾಯಿಸಿ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಇಷ್ಟೆಲ್ಲಾ ಉದ್ವಿಗ್ನತೆ ನಡುವೆ ಬಾಂಗ್ಲಾದೇಶವು ಗಡಿಯಲ್ಲಿ ಟರ್ಕಿ ಡ್ರೋನ್ ನಿಯೋಜಿಸಿದ್ದು, ಭಾರತ ತೀವ್ರ ಕಟ್ಟೆಚ್ಚರವಹಿಸಿದೆ.
ಶೇಖ್ ಹಸೀನಾರ ಅವಾಮಿ ಲೀಗ್ ಸರ್ಕಾರದ ಪತನದ ಬಳಿಕ ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಳವಾಗಿತ್ತು. ಇದೀಗ ಬಾಂಗ್ಲಾದೇಶದ ಬಳಿಕ ಡ್ರೋನ್ಗಳ ಹಾರಾಟ ತೀವ್ರಗೊಂಡಿದ್ದು, ಸೇನೆಯು ಪರಿಶೀಲಿಸುತ್ತಿದೆ.
ಭಯೋತ್ಪಾದಕ ಗುಂಪುಗಳು ಮತ್ತು ಕಳ್ಳಸಾಗಣೆ ಜಾಲಗಳು ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆಯ ಲಾಭ ಪಡೆದು ಭಾರತದೊಳಗೆ ನುಸುಳಲು ಯತ್ನಿಸುತ್ತಿವೆ ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ಹೇಳಿದೆ.
ಮತ್ತಷ್ಟು ಓದಿ: ಬಾಂಗ್ಲಾದೇಶದ ಹತ್ಯಾಕಾಂಡದ ಮಾಸ್ಟರ್ಮೈಂಡ್ ಯೂನಸ್: ಶೇಖ್ ಹಸೀನಾ
ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನಮ್ಮ ಗಡಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶ ಸೇನೆಯು ಲ್ಯಾಂಡ್‌ಮೈನ್ ರಕ್ಷಣಾ ವಾಹನಗಳು, ರಾಕೆಟ್ ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಟರ್ಕಿಯೆಯಿಂದ ಖರೀದಿಸಿದೆ. ಉಕ್ರೇನ್ ಯುದ್ಧದ ನಂತರ, ಈ ಟರ್ಕಿಶ್ ಡ್ರೋನ್‌ಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಿದೆ. ಈ ಡ್ರೋನ್ ಯುದ್ಧದ ನಕ್ಷೆಯನ್ನು ಬದಲಾಯಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ