
ನವದೆಹಲಿ, ಮೇ 26: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಭಾನುವಾರ ಬಾಂಗ್ಲಾದೇಶವು “ತನ್ನದೇ ಆದ 2 ಚಿಕನ್ ನೆಕ್ಗಳನ್ನು ಹೊಂದಿದೆ” ಎಂದು ಎಚ್ಚರಿಸಿದ್ದಾರೆ. ಬಾಂಗ್ಲಾದೇಶದ 2 ಚಿಕನ್ ನೆಕ್ ಕಾರಿಡಾರ್ ನಕ್ಷೆಗಳನ್ನು ಹಂಚಿಕೊಂಡಿರುವ ಸಿಎಂ ಹಿಮಂತ ಬಿಸ್ವ ಶರ್ಮ ಈ 2 ಕಾರಿಡಾರ್ ಬಗ್ಗೆ ಬಾಂಗ್ಲಾದೇಶ (Bangladesh) ಮೊದಲು ಯೋಚಿಸುವುದು ಉತ್ತಮ ಎಂದಿದ್ದಾರೆ. “ಬಾಂಗ್ಲಾದೇಶದ ಈ 2 ಚಿಕನ್ ನೆಕ್‌ಗಳು” ಭಾರತದ ಈಶಾನ್ಯ ಪ್ರದೇಶವನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ “ಚಿಕನ್ ನೆಕ್” ಕಾರಿಡಾರ್‌ಗಿಂತ ಹೆಚ್ಚು ದುರ್ಬಲವಾಗಿವೆ ಎಂದು ಹೇಳಿದ್ದಾರೆ. 2025ರ ಮಾರ್ಚ್ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾದೇಶವೇ “ಸಾಗರದ ಏಕೈಕ ರಕ್ಷಕ” ಎಂದು ಯೂನಸ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಬಾಂಗ್ಲಾದೇಶ ಕೂಡ 2 ಕಿರಿದಾದ ಭೂಪ್ರದೇಶಗಳನ್ನು ಹೊಂದಿದೆ. ಅವು ಭಾರತದ ಸಿಲಿಗುರಿ ಕಾರಿಡಾರ್‌ಗಿಂತ ಹೆಚ್ಚು ದುರ್ಬಲವಾಗಿವೆ. ನಮ್ಮ ದೇಶದ ಕಾರಿಡಾರ್ ಬಗ್ಗೆ ಮಾತನಾಡುವವರು ಇದನ್ನು ಮರೆಯಬಾರದು ಎಂದು ಅಸ್ಸಾಂ ಸಿಎಂ ಬಾಂಗ್ಲಾದೇಶ ಸರ್ಕಾರದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರಿಗೆ ಚಾಟಿ ಬೀಸಿದ್ದಾರೆ.
हमें याद रखना चाहिए कि बांग्लादेश का भी अपना Chicken Neck है: मेघालय से चिट्टागोंग तक।
No country should be under the impression that it can take over the Chicken’s Neck. The World has seen India’s military prowess during #OperationSindooor.#PressConferenceHighlights pic.twitter.com/eqP3iJlA8m
— Himanta Biswa Sarma (@himantabiswa) May 21, 2025
ಇದನ್ನೂ ಓದಿ: ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂಗಳು ಒಟ್ಟಾಗಿ ಬಾಂಗ್ಲಾದೇಶದೊಂದಿಗೆ 1,596 ಕಿ.ಮೀ ಅಂತಾರಾಷ್ಟ್ರೀಯ ಗಡಿಯನ್ನು, ಚೀನಾದೊಂದಿಗೆ 1,395 ಕಿ.ಮೀ ಗಡಿಯನ್ನು, ಮ್ಯಾನ್ಮಾರ್‌ನೊಂದಿಗೆ 1,640 ಕಿ.ಮೀ ಗಡಿಯನ್ನು, ಭೂತಾನ್‌ನೊಂದಿಗೆ 455 ಕಿ.ಮೀ ಗಡಿಯನ್ನು ಮತ್ತು ನೇಪಾಳದೊಂದಿಗೆ 97 ಕಿ.ಮೀ ಗಡಿಯನ್ನು ಹೊಂದಿವೆ. ಈ ರಾಜ್ಯಗಳು “ಚಿಕನ್ ನೆಕ್” ಕಾರಿಡಾರ್ ಎಂದು ಕರೆಯಲ್ಪಡುವ 22 ಕಿಮೀ ಭೂಪ್ರದೇಶದ ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಮಾತ್ರ ಸಂಪರ್ಕ ಹೊಂದಿವೆ.
VIDEO | Assam CM Himanta Biswa Sarma (@himantabiswa) says, “We have been regularly hearing statements from across the border claiming that India is very vulnerable and that the Northeast is connected to the rest of the country only through the ‘chicken neck.’ However, people are… pic.twitter.com/sIkKZmuBrB
— Press Trust of India (@PTI_News) May 26, 2025
ಇದನ್ನೂ ಓದಿ: ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಚಿಕನ್ ನೆಕ್ ಕಾರಿಡಾರ್ ಬಗ್ಗೆ ಹೇಳಿಕೆ ನೀಡಿರುವ ಮುಹಮ್ಮದ್ ಯೂನಸ್ ಬಾಂಗ್ಲಾದೇಶದ 2 ಚಿಕನ್ ನೆಕ್ ಕಾರಿಡಾರ್ಗಳನ್ನು ಮರೆಯಬಾರದು ಎಂದು ಹಿಂತ ಬಿಸ್ವ ಶರ್ಮ ಎಚ್ಚರಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು 80 ಕಿ.ಮೀ. ಉತ್ತರ ಭಾಗದ ಬಾಂಗ್ಲಾದೇಶ ಕಾರಿಡಾರ್. ಇದು ದಖಿನ್ ದಿನಜ್‌ಪುರದಿಂದ ನೈಋತ್ಯ ಗಾರೋ ಬೆಟ್ಟಗಳವರೆಗೆ ಇದೆ. ಇಲ್ಲಿ ಯಾವುದೇ ಅಡಚಣೆ ಉಂಟಾದರ, ಇಡೀ ರಂಗ್‌ಪುರ ವಿಭಾಗವು ಬಾಂಗ್ಲಾದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಡುತ್ತದೆ. ಎರಡನೆಯದು ದಕ್ಷಿಣ ತ್ರಿಪುರದಿಂದ ಬಂಗಾಳ ಕೊಲ್ಲಿಯವರೆಗೆ 28 ಕಿ.ಮೀ. ಚಿತ್ತಗಾಂಗ್ ಕಾರಿಡಾರ್. ಭಾರತದ ಚಿಕ್ ನೆಕ್‌ಗಿಂತ ಚಿಕ್ಕದಾದ ಈ ಕಾರಿಡಾರ್ ಬಾಂಗ್ಲಾದೇಶದ ಆರ್ಥಿಕ ರಾಜಧಾನಿ ಮತ್ತು ರಾಜಕೀಯ ರಾಜಧಾನಿಯ ನಡುವಿನ ಏಕೈಕ ಕೊಂಡಿಯಾಗಿದೆ. ಕೆಲವರು ಮರೆತುಬಿಡುವ ಭೌಗೋಳಿಕ ಸಂಗತಿಗಳನ್ನು ಮಾತ್ರ ನಾನು ಪ್ರಸ್ತುತಪಡಿಸುತ್ತಿದ್ದೇನೆ” ಎಂದು ಅವರ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ