ಜೈಪುರ: ಭಾರತಕ್ಕೆ 4 ದಿನಗಳ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Sheikh Hasina) ಸೆಪ್ಟೆಂಬರ್ 8ರಂದು ಜೈಪುರಕ್ಕೆ (Jaipur) ಬಂದಿಳಿದಿದ್ದಾರೆ. ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಅವರನ್ನು ಸ್ವಾಗತಿಸಲು ಹಲವಾರು ರಾಜಸ್ಥಾನಿ ಕಲಾವಿದರು ಪ್ರಧಾನಿ ಶೇಖ್ ಹಸೀನಾ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಸ್ಥಳೀಯ ನೃತ್ಯ ಕಲಾವಿದರು ಪ್ರಧಾನಿ ಶೇಖ್ ಹಸೀನಾ ಅವರೆದುರು ನೃತ್ಯ ಪ್ರದರ್ಶನ ನೀಡಿದರು. ಈ ವೇಳೆ ಪ್ರಧಾನಿ ಶೇಖ್ ಹಸೀನಾ ಕೂಡ ನೃತ್ಯ ಕಲಾವಿದರೊಂದಿಗೆ ಸೇರಿಕೊಂಡು ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಜೈಪುರ ಏರ್ಪೋರ್ಟ್ನಲ್ಲಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟ್ಟರ್ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ.
#WATCH | Rajasthan: Upon her arrival at Jaipur airport earlier today, Bangladesh PM Sheikh Hasina grooved with the local artists who had gathered there to welcome her. pic.twitter.com/Mk8qf5xDEG
— ANI (@ANI) September 8, 2022
ಇದನ್ನೂ ಓದಿ: Viral Video: ವೇದಿಕೆಯಲ್ಲಿ ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದ ಕಲಾವಿದ; ವಿಡಿಯೋ ವೈರಲ್
ಭಾರತ ಪ್ರವಾಸಕ್ಕೆಂದು ಬಂದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ವಿಮಾನದಿಂದ ಇಳಿದ ನಂತರ ಅಧಿಕಾರಿಗಳು ಮತ್ತು ಸ್ಥಳೀಯ ಕಲಾವಿದರು ಅವರನ್ನು ಸ್ವಾಗತಿಸಿದರು. ನಂತರ ಪ್ರಧಾನಿ ಶೇಖ್ ಹಸೀನಾ ಕೂಡ ನೃತ್ಯಗಾರರೊಂದಿಗೆ ಸೇರಿಕೊಂಡು ಡ್ಯಾನ್ಸ್ ಮಾಡಿದರು. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೆಪ್ಟೆಂಬರ್ 6, ಮಂಗಳವಾರ ಭಾರತಕ್ಕೆ ಭೇಟಿ ನೀಡಿದರು. ಅವರನ್ನು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದರು.