AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ, ಕೋಲ್ಕತ್ತಾ ಆಸ್ಪತ್ರೆ ಆದೇಶ

ಭಾರತದ ಪಕ್ಕದ ರಾಷ್ಟ್ರ ಬಾಂಗ್ಲಾದೇಶ ಭಾರತಕ್ಕೆ ಅವಮಾನ ಮಾಡಿದೆ ಎಂದು ಉತ್ತರ ಕೋಲ್ಕತ್ತಾದ ಮಾಣಿಕ್ತಾಲಾ ಪ್ರದೇಶದ ಆಸ್ಪತ್ರೆ ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಭಾರತ ಧ್ವಜಕ್ಕೆ ಅವಮಾನ ಮಾಡಿದ್ದೀರಾ. ಈ ಕಾರಣಕ್ಕೆ ನಾವು ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ, ಕೋಲ್ಕತ್ತಾ ಆಸ್ಪತ್ರೆ ಆದೇಶ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 30, 2024 | 10:23 AM

Share

ಭಾರತದ ನೆರೆ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಿನದಿಂದ ದಿನಕ್ಕೆ ಒಂದಲ್ಲ ಒಂದು ಹಿಂಸೆ, ದೌರ್ಜನ್ಯಗಳು ನಡೆಯುತ್ತಲೇ ಇದೆ. ಈ ಬಗ್ಗೆ ಭಾರತ ವಿರೋಧಿಸುತ್ತ ಬಂದಿದೆ. ಇದೀಗ ಉತ್ತರ ಕೋಲ್ಕತ್ತಾದ ಮಾಣಿಕ್ತಾಲಾ ಪ್ರದೇಶದ ಆಸ್ಪತ್ರೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಜೆಎನ್ ರೇ ಆಸ್ಪತ್ರೆಯ ಅಧಿಕಾರಿಯೊಬ್ಬರು ಈ ನಿರ್ಧಾರ ಯಾಕೆ? ಎಂಬ ಬಗ್ಗೆ ಹೇಳಿದ್ದಾರೆ. ಬಾಂಗ್ಲಾದೇಶಿ ಪ್ರಜೆಗಳು ಭಾರತೀಯ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಕಾರಣಕ್ಕಾಗಿ ಬಾಂಗ್ಲಾದೇಶದ ಪ್ರಜೆಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ನಾವು ಇಂದಿನಿಂದ ಅನಿರ್ದಿಷ್ಟ ಸಮಯದವರೆಗೆ ಯಾವುದೇ ಬಾಂಗ್ಲಾದೇಶದ ರೋಗಿಗೆ ಚಿಕಿತ್ಸೆ ನೀಡುವುದಿಲ್ಲ, ಹಾಗೂ ಈ ಬಗ್ಗೆ ನಮ್ಮ ಸಿಬ್ಬಂದಿಗಳಿಗೆ ಅಧಿಸೂಚನೆಯನ್ನು ನೀಡಿದ್ದೇನೆ. ಭಾರತಕ್ಕೆ ಬಾಂಗ್ಲಾದೇಶ ಮಾಡಿದ ಅವಮಾನಕ್ಕೆ ಈ ಉತ್ತರ ಎಂದು ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ್ ಹೇಳಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಇದು ಸರಿಯಾದ ಉತ್ತರ. ಇನ್ನು ಈ ಕ್ರಮ ಉಳಿದ ಆಸ್ಪತ್ರೆಗಳು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಹಿಂಸಾಚಾರದ ನಡುವೆ ಪಾಕ್​ನಿಂದ ಶಸ್ತ್ರಾಸ್ತ್ರಗಳ ಖರೀದಿಸಿದ ಬಾಂಗ್ಲಾದೇಶ

ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸಿರುವುದನ್ನು ನೋಡಿ, ನಾವು ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ. ಅಂದು ಬಾಂಗ್ಲಾ ವಿಭಜನೆ ಹಾಗೂ ಅವರಿಗೆ ಸ್ವಾತಂತ್ರ್ಯ ನೀಡಲು ನಮ್ಮ ಭಾರತದ ಸಹಾಯ ಬೇಕಿತ್ತು, ಇಂದು ಭಾರತವನ್ನು ವಿರೋಧಿಸುತ್ತಿದೆ, ಅದಕ್ಕಾಗಿ ನಾವು ಈ ಕ್ರಮವನ್ನು ಅನುಸರಿಸಿದ್ದೇವೆ, ಇತರ ಆಸ್ಪತ್ರೆಗಳು ಕೂಡ ಈ ಕ್ರಮವನ್ನು ಅನುಸರಿಸುತ್ತದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ