Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್​ಗಳಿಗೆ 12 ದಿನದ ತನಕ ರಜಾ

| Updated By: Digi Tech Desk

Updated on: Apr 27, 2021 | 6:32 PM

2021ರ ಮೇ ತಿಂಗಳಲ್ಲಿ 12 ದಿನದ ತನಕ ಬ್ಯಾಂಕ್​ಗಳು​ ರಜಾ ಇರುತ್ತವೆ. ಯಾವ್ಯಾವ ದಿನ ಮತ್ತು ಯಾವ ವಿಶೇಷಕ್ಕೆ ರಜಾ ಇದೆ ಎಂಬ ವಿವರ ಇಲ್ಲಿದೆ.

Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್​ಗಳಿಗೆ 12 ದಿನದ ತನಕ ರಜಾ
ಸಾಂದರ್ಭಿಕ ಚಿತ್ರ
Follow us on

2021ರ ಮೇ ತಿಂಗಳಲ್ಲಿ 12 ದಿನದ ತನಕ ಭಾರತದಲ್ಲಿ ಬ್ಯಾಂಕ್​ಗಳಿಗೆ ರಜಾ ಇರುತ್ತವೆ. ಅದರಲ್ಲಿ ವಾರಾಂತ್ಯಗಳು ಹಾಗೂ ಹಬ್ಬಗಳು ಸೇರಿಕೊಂಡಿವೆ. ಗೆಜೆಟೆಡ್ ರಜಾ ದಿನಗಳನ್ನು ಮಾತ್ರ ದೇಶದಾದ್ಯಂತ ಬ್ಯಾಂಕ್​ಗಳು ಒಂದೇ ರೀತಿಯಾಗಿ ಅನುಸರಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, ಮೇ 14, 2021ರಂದು ಈದ್-ಉಲ್-ಫಿತ್ರ್ ಇರುವುದರಿಂದ ದೇಶದ ಬಹುತೇಕ ರಾಜ್ಯಗಳ ಬ್ಯಾಂಕ್​ಗಳಿಗೆ ರಜಾ ಇರಲಿದೆ. ಸಾರ್ವಜನಿಕ ಬ್ಯಾಂಕ್, ಖಾಸಗಿ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್, ರೀಜನಲ್ ಬ್ಯಾಂಕ್​ಗಳು ಹಾಗೂ ವಿದೇಶೀ ಬ್ಯಾಂಕ್​ಗಳಿಗೂ ಅಂದು ರಜಾ ದಿನ ಆಗಿರಲಿದೆ.

ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ ಆ್ಯಕ್ಟ್ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿರುವ ರಜಾ ದಿನಗಳ ಪಟ್ಟಿ ಈ ಕೆಳಕಂಡಂತೆ ಇದೆ.

ಮೇ 1: ಮಹಾರಾಷ್ಟ್ರ ದಿನ್/ಮೇ ದಿನ (ಕಾರ್ಮಿಕರ ದಿನಾಚರಣೆ)
ಮೇ 7: ಜುಮಾತ್-ಉಲ್-ವಿದಾ
ಮೇ 13: ಈದ್-ಉಲ್-ಫಿತ್ರ್ (ರಮ್ಜಾನ್)
ಮೇ 14: ಭಗವಾನ್ ಶ್ರೀ ಪರಶುರಾಮ್ ಜಯಂತಿ/ರಮ್ಜಾನ್-ಈದ್ (ಈದ್-ಉಲ್-ಫಿತ್ರ್)/ ಬಸವ ಜಯಂತಿ/ ಅಕ್ಷಯ ತೃತೀಯ
ಮೇ 26: ಬುದ್ಧ ಪೌರ್ಣಮಿ

ವಾರಾಂತ್ಯ ರಜಾಗಳು
ಮೇ 2: ಭಾನುವಾರ
ಮೇ 8: ಎರಡನೇ ಶನಿವಾರ
ಮೇ 9: ಭಾನುವಾರ
ಮೇ 16: ಭಾನುವಾರ
ಮೇ 22: ನಾಲ್ಕನೇ ಶನಿವಾರ
ಮೇ 23: ಭಾನುವಾರ
ಮೇ 30: ಭಾನುವಾರ

ಮೇ 1, 7, 13, 14 ಮತ್ತು 26ರಂದು ಈ ಕೆಳಕಂಡ ರಾಜ್ಯಗಳಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುತ್ತವೆ:
ಅಗರ್ತಲಾ, ಅಹ್ಮದಾಬಾದ್, ಐಜ್​ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಕ್, ಜೈಪುರ್, ಜಮ್ಮು, ಕಾನ್ಪುರ್, ಲಖನೌ, ನವದೆಹಲಿ, ರಾಯ್​ಪುರ್, ರಾಂಚಿ, ಶಿಲ್ಲಾಂಗ್​, ಶಿಮ್ಲಾ ಮತ್ತು ಶ್ರೀನಗರ್​ನಲ್ಲಿ ಮೇ 1ರಂದು ಬ್ಯಾಂಕ್​ಗಳು ಕಾರ್ಯ ನಿರ್ವಹಿಸುತ್ತವೆ. ಜಮ್ಮು ಮತ್ತು ಶಿಮ್ಲಾದ ಬ್ಯಾಂಕ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲಿ ಬ್ಯಾಂಕ್​ಗಳು ಸಾರ್ವಜನಿಕ ಸೇವೆಗೆ ಲಭ್ಯ ಇವೆ.

ಮೇ 13ರಂದು ಬೆಲಾಪುರ್, ಜಮ್ಮು, ಕೊಚ್ಚಿ, ಮುಂಬೈ, ನಾಗ್​ಪುರ್, ಶ್ರೀನಗರ್, ತಿರುವನಂತಪುರದಲ್ಲಿ ಮಾತ್ರ ರಜಾ ಇದೆ. ಮೇ 14ರಂದು ಬಹುತೇಕ ರಾಜ್ಯಗಳಲ್ಲಿ ರಜಾ ಇದೆ. ಬೆಲಾಪುರ್, ಜಮ್ಮು, ಕೊಚ್ಚಿ, ಮುಂಬೈ, ನಾಗ್​ಪುರ್, ಶ್ರೀನಗರ್ ಮತ್ತು ತಿರುವನಂಪುರದಲ್ಲಿ ರಜಾ ಇರುವುದಿಲ್ಲ. ಅದೇ ರೀತಿ ಬುದ್ಧ ಪೌರ್ಣಮಿಯಂದು (ಮೇ 26) ಅಹ್ಮದಾಬಾದ್, ಐಜ್​ವಾಲ್, ಬೆಂಗಳೂರು, ಭುವನೇಶ್ವರ್, ಚೆನ್ನೈ, ಗ್ಯಾಂಗ್ಟಕ್, ಗುವಾಹತಿ, ಹೈದರಾಬಾದ್, ಇಂಫಾಲ, ಜೈಪುರ್, ಕೊಚ್ಚಿ, ಪಣಜಿ, ಪಾಟ್ನಾ, ಶಿಲ್ಲಾಂಗ್ ಮತ್ತು ತಿರುವನಂತಪುರದಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುತ್ತವೆ.

ಇದನ್ನೂ ಓದಿ: RBI guidelines | ಖಾಸಗಿ ಬ್ಯಾಂಕ್​ಗಳ MD, CEOಗಳ ಗರಿಷ್ಠ ಅಧಿಕಾರಾವಧಿ 15 ವರ್ಷಕ್ಕೆ ನಿಗದಿ

(Bank holidays for the month of May 2021. Here is the list of holidays)

Published On - 6:13 pm, Tue, 27 April 21