ವಿಜಯವಾಡದಲ್ಲಿ ಇಂದು ಬಾಪು ಮ್ಯೂಸಿಯಂ ನೂತನ ಕಟ್ಟಡ ಉದ್ಘಾಟನೆ, ವಿಶೇಷಗಳೇನು?

| Updated By: ಸಾಧು ಶ್ರೀನಾಥ್​

Updated on: Oct 01, 2020 | 12:44 PM

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ನವೀಕರಿಸಿದ ಬಾಪು ವಸ್ತುಸಂಗ್ರಹಾಲಯದ ಹೊಸ ಕಟ್ಟಡವನ್ನು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಇಂದು ಉದ್ಘಾಟಿಸಲಿದ್ದಾರೆ. ಮ್ಯೂಸಿಯಂನಲ್ಲಿ 10 ಲಕ್ಷ ವರ್ಷಗಳ ಹಿಂದಿನ ಪುರಾತನ ವಸ್ತುಗಳಿಂದ ಹಿಡಿದು ತಾಜಾ ಆಗಿ 19ನೇ ಶತಮಾನದವರೆಗಿನ 1,500 ಕಲಾಕೃತಿಗಳನ್ನು  ಇಡಲಾಗಿದೆ. ಅದು ಹೊಸ ಕಟ್ಟಡದ ಏಳು ಗ್ಯಾಲರಿಗಳಲ್ಲಿ ಸಂಗ್ರಹಿಸಿಡಲಾಗಿದೆ. ನಾವು ಇಲ್ಲಿ ಮೌಲ್ಯವರ್ಧಿತ ಮತ್ತು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನಗಳನ್ನು ಬಳಸಿದ್ದೇವೆ ಎಂದು ಪುರಾತತ್ವ ಮತ್ತು ವಸ್ತು ಸಂಗ್ರಹಾಲಯದ ಆಯುಕ್ತೆ ಜಿ ವಾಣಿ ಮೋಹನ್ ತಿಳಿಸಿದ್ದಾರೆ. ರಿಯಾಲಿಟಿ […]

ವಿಜಯವಾಡದಲ್ಲಿ ಇಂದು ಬಾಪು ಮ್ಯೂಸಿಯಂ ನೂತನ ಕಟ್ಟಡ ಉದ್ಘಾಟನೆ, ವಿಶೇಷಗಳೇನು?
Follow us on

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ನವೀಕರಿಸಿದ ಬಾಪು ವಸ್ತುಸಂಗ್ರಹಾಲಯದ ಹೊಸ ಕಟ್ಟಡವನ್ನು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಇಂದು ಉದ್ಘಾಟಿಸಲಿದ್ದಾರೆ.

ಮ್ಯೂಸಿಯಂನಲ್ಲಿ 10 ಲಕ್ಷ ವರ್ಷಗಳ ಹಿಂದಿನ ಪುರಾತನ ವಸ್ತುಗಳಿಂದ ಹಿಡಿದು ತಾಜಾ ಆಗಿ 19ನೇ ಶತಮಾನದವರೆಗಿನ 1,500 ಕಲಾಕೃತಿಗಳನ್ನು  ಇಡಲಾಗಿದೆ. ಅದು ಹೊಸ ಕಟ್ಟಡದ ಏಳು ಗ್ಯಾಲರಿಗಳಲ್ಲಿ ಸಂಗ್ರಹಿಸಿಡಲಾಗಿದೆ. ನಾವು ಇಲ್ಲಿ ಮೌಲ್ಯವರ್ಧಿತ ಮತ್ತು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನಗಳನ್ನು ಬಳಸಿದ್ದೇವೆ ಎಂದು ಪುರಾತತ್ವ ಮತ್ತು ವಸ್ತು ಸಂಗ್ರಹಾಲಯದ ಆಯುಕ್ತೆ ಜಿ ವಾಣಿ ಮೋಹನ್ ತಿಳಿಸಿದ್ದಾರೆ.

ರಿಯಾಲಿಟಿ ಡಿಜಿಟಲ್ ತಂತ್ರಜ್ಞಾನವನ್ನು ಹೆಚ್ಚಿಸಲು ಮ್ಯೂಸಿಯಂಗಾಗಿ 8 ಕೋಟಿ ರೂ. ವೆಚ್ಚವಾಗಿದೆ. ನವೀಕರಿಸಿದ ವಸ್ತುಸಂಗ್ರಹಾಲಯವನ್ನು ಡಿಸೆಂಬರ್ 31, 2018 ರ ಮೊದಲು ಉದ್ಘಾಟಿಸಲು ಪ್ರಸ್ತಾಪಿಸಲಾಗಿತ್ತು. ನಂತರ ಕಾರಣಾಂತರಗಳಿಂದ ಮಾರ್ಚ್ 5, 2019 ಕ್ಕೆ ಡೆಡ್ ಲೈನ್ ನೀಡಲಾಯಿತು. ಆದರೆ, ಕಾಮಗಾರಿಗಳು ವಿಳಂಬದ ಕಾರಣ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ್ದರಿಂದ ಉದ್ಘಾಟನೆಯನ್ನು ಏಪ್ರಿಲ್‌ಗೆ ಮತ್ತು ನಂತರ ಜುಲೈಗೆ ಮುಂದೂಡಲಾಯಿತು. ಪ್ರಸ್ತುತ ಇಂದು ಸಿಎಂ ಜಗನ್ ಮೋಹನ್ ರೆಡ್ಡಿ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.