ಆ ವಿಡಿಯೋಗಳ ಬಗ್ಗೆ ಎಚ್ಚರ ವಹಿಸಿ… ಕಾರ್ಯಕರ್ತರಿಗೆ ಸಚಿವ ಕೆಟಿಆರ್ ಖಡಕ್ ಸಂದೇಶ

|

Updated on: Nov 24, 2023 | 2:33 PM

ಈ ಡೀಪ್​​ ಫೇಕ್​​ ವಿಡಿಯೋಗಳು ರಾಜಕೀಯ ರಂಗವನ್ನೂ ಬಿಟ್ಟಿಲ್ಲ. ಅದರಲ್ಲೂ ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಇಂತಹ ಕೆಲವು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಸ್ವತಃ ರಾಜಕಾರಣಿಗಳೇ ಮಾತನಾಡುತ್ತಿರುವಂತೆ, ಹೇಳಿರುವಂತೆ ಮಾಡಿದ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ವಿಡಿಯೋಗಳ ಬಗ್ಗೆ ಎಚ್ಚರದಿಂದಿರಿ ಎಂದು ಸಚಿವ ಕೆಟಿ ರಾಮರಾವ್​​ ಎಚ್ಚರಿಸಿದ್ದಾರೆ.

ಆ ವಿಡಿಯೋಗಳ ಬಗ್ಗೆ ಎಚ್ಚರ ವಹಿಸಿ... ಕಾರ್ಯಕರ್ತರಿಗೆ ಸಚಿವ ಕೆಟಿಆರ್ ಖಡಕ್ ಸಂದೇಶ
ಕಾರ್ಯಕರ್ತರಿಗೆ ಸಚಿವ ಕೆಟಿಆರ್ ಖಡಕ್ ಸಂದೇಶ
Follow us on

ಡೀಪ್ ಫೇಕ್ ವೀಡಿಯೋ Deepfake Video… ಇತ್ತೀಚೆಗೆ ಧುತ್ತನೆ ಎದುರಾಗಿರುವ ಪೆಡಂಭೂತ. ಇದರ ಬಗ್ಗೆ ಬಹಳಷ್ಟು ಚರ್ಚೆಗಳು ಗಿರಕಿ ಹೊಡೆಯುತ್ತಿವೆ. ನಟಿ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ನಕಲಿ ವಿಡಿಯೋ ವೈರಲ್ ಆದ ನಂತರ ಈ ವಿಷಯ ಚರ್ಚೆಗೆ ಬಂದಿದೆ. ಒಬ್ಬ ವ್ಯಕ್ತಿಯ ಮುಖವನ್ನು ಇನ್ನೊಬ್ಬ ವ್ಯಕ್ತಿಯ ದೇಹಕ್ಕೆ ಜೋಡಿಸಿ ರಚಿಸಿದ ವೀಡಿಯೊಗಳು ಆತಂಕ, ಭಯಾನಕತೆ ಸೃಷ್ಟಿಸುತ್ತಿವೆ. ಇದು ಸಾಮಾಜಿಕ ಕ್ಷೇತ್ರದಲ್ಲಿರುವ ಸೆಲೆಬ್ರಿಟಿಗಳಿಗೆ (Social Media Soldiers ) ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಬಗ್ಗೆ ಹಲವು ಚಿತ್ರರಂಗ ಮತ್ತು ರಾಜಕೀಯ ನಾಯಕರು ಕೂಡ ತಮ್ಮ ಅನುಮಾನ, ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಸಂಪೂರ್ಣ, ಸಮಗ್ರವಾಗಿ ಮಾರ್ಪಾಡಾದ ನಕಲಿ ವೀಡಿಯೊಗಳನ್ನು ಪ್ರಧಾನಿ ಮೋದಿಯಾಗಿ ಬಲವಾಗಿ ಖಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಿದೆ. ಇದೀಗ ತೆಲಂಗಾಣ ಪ್ರಭಾವೀ ಸಚಿವ ಕೆಟಿಆರ್ ಕೂಡ ಡೀಪ್ ಫೇಕ್ ವಿಡಿಯೋಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕೆಟಿಆರ್ ಅವರು ರಶ್ಮಿಕಾ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ ಇದೊಂದು ನಾಚಿಕೆಗೇಡಿನ ಕೃತ್ಯ ಎಂದು ಬಣ್ಣಿಸಿದ್ದರು. ತೆಲಂಗಾಣದಲ್ಲಿ ಇಂತಹ ಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

Also Read: ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ: ಆರೋಪಿ ಸೆರೆ

ಇಷ್ಟೆಲ್ಲಾ ನಡೆದಿರುವಾಗ.. ಈ ಡೀಪ್​​ ಫೇಕ್​​ ವಿಡಿಯೋಗಳು ರಾಜಕೀಯ ರಂಗವನ್ನೂ ಬಿಟ್ಟಿಲ್ಲ. ಅದರಲ್ಲೂ ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಸದ್ಯ ಇಂತಹ ಕೆಲವು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಸ್ವತಃ ರಾಜಕಾರಣಿಗಳೇ ಮಾತನಾಡುತ್ತಿರುವಂತೆ, ಹೇಳಿರುವಂತೆ ಮಾಡಿದ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ವಿಡಿಯೋಗಳ ಬಗ್ಗೆ ಎಚ್ಚರದಿಂದಿರಿ ಎಂದು ಸಚಿವ ಕೆಟಿ ರಾಮರಾವ್​​ ಎಚ್ಚರಿಸಿದ್ದಾರೆ. ತಮ್ಮ ಟ್ವಿಟರ್ ವೇದಿಕೆಯ ಮೂಲಕ ಈ ವಿಷಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿಮ ಸಕ್ರಿಯವಾಗಿರುವ ತಮ್ಮ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಚಿವ ಕೆಟಿಆರ್ ಟ್ವೀಟ್ ಮಾಡಿದ್ದು.. ‘ಬಿಆರ್ ಎಸ್ ಪಕ್ಷದ ಕಾರ್ಯಕರ್ತರು, ಪಕ್ಷದ ಸೋಷಿಯಲ್ ಮೀಡಿಯಾ ಸೇನಾನಿಗಳೇ ಅಲರ್ಟ್! ಚುನಾವಣೆಗಳು ಸಮೀಪಿಸುತ್ತಿರುವಂತೆ, ಅನೇಕ ನಕಲಿ/ಆಳವಾದ ನಕಲಿ ವೀಡಿಯೊಗಳು ವೈರಲ್ ಆಗುವ ಸಾಧ್ಯತೆಗಳಿವೆ. ಇಂತಹ ವಂಚನೆಗಳಿಂದ ಮತದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಕೆಟಿ ರಾಮರಾವ್ ಹೇಳಿದ್ದಾರೆ

ಶೀಘ್ರದಲ್ಲೇ ಹೊಸ ನಿಯಮಗಳು..

ಡೀಪ್ ಫೇಕ್ ಪೋಸ್ಟ್​​​ಗಳ ಸಮಸ್ಯೆಯನ್ನು ನಿಯಂತ್ರಿಸಲು ಶೀಘ್ರವೇ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್, ಐಟಿ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ನಕಲಿ ಪೋಸ್ಟ್‌ಗಳನ್ನು ಸೃಷ್ಟಿಸುವವರಿಗೆ ಶಿಕ್ಷೆ ಮತ್ತು ದಂಡ ವಿಧಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಂತಹ ಪೋಸ್ಟ್‌ಗಳು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಮುಂದಿನ 10 ದಿನಗಳಲ್ಲಿ ಡೀಪ್‌ಫೇಕ್‌ಗಳನ್ನು ನಿಯಂತ್ರಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಅವರು ಸೂಚಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ