AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ: ಆರೋಪಿ ಸೆರೆ

Rashmika Mandanna: ಕೆಲವು ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋವನ್ನು ತಿದ್ದಿ ವೈರಲ್ ಮಾಡಿದ್ದ ಆರೋಪಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ: ಆರೋಪಿ ಸೆರೆ
ರಶ್ಮಿಕಾ ಮಂದಣ್ಣ
Follow us
ಮಂಜುನಾಥ ಸಿ.
|

Updated on: Nov 16, 2023 | 9:36 PM

ಕೆಲವು ದಿನಗಳ ಹಿಂದೆ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣರ (Rashmika Mandanna) ನಕಲಿ ವಿಡಿಯೋ ಸಿನಿಮಾ ಸೆಲೆಬ್ರಿಟಿಗಳ ಆತಂಕಕ್ಕೆ ಕಾರಣವಾಗಿತ್ತು. ಥೇಟ್ ರಶ್ಮಿಕಾರನ್ನೇ ಹೋಲುವಂತೆ ವಿಡಿಯೋವನ್ನು ತಿದ್ದಿ ಹರಿಬಿಡಲಾಗಿತ್ತು. ವಿಡಿಯೋ ನೋಡಿದವರು ಇದು ರಶ್ಮಿಕಾರದ್ದೇ ವಿಡಿಯೋ ಎಂಬಂತಿತ್ತು ಆ ವಿಡಿಯೋ. ರಶ್ಮಿಕಾರ ಡೀಪ್​ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ದಿಗ್ಗಜ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ರಶ್ಮಿಕಾಗೆ ಬೆಂಬಲ ವ್ಯಕ್ತಪಡಿಸುವ ಜೊತೆಗೆ ಆರೋಪಿಯನ್ನು ಬಂಧಿಸುವಂತೆ, ನಕಲಿ ವಿಡಿಯೋ ಹಾವಳಿಯನ್ನು ತಡೆಗಟ್ಟುವಂತೆ ಮನವಿ ಮಾಡಿದ್ದರು. ಇದೀಗ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.

ರಶ್ಮಿಕಾರ ಡೀಪ್​ಫೇಕ್ ವಿಡಿಯೋ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು 19 ವರ್ಷದ ಬಿಹಾರ ಯುವಕನ್ನು ಬಂಧಿಸಿದ್ದಾರೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿದೆ. ಬಂಧಿತ ಯುವಕ ರಶ್ಮಿಕಾರ ನಕಲಿ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದ ಎನ್ನಲಾಗುತ್ತಿದೆ. ಅದೇ ಯುವಕ ರಶ್ಮಿಕಾರ ವಿಡಿಯೋವನ್ನು ವೈರಲ್ ಮಾಡುವ ಉದ್ದೇಶದಿಂದ ತನ್ನ ಆಪ್ತರಿಗೂ ಕಳಿಸಿಕೊಟ್ಟಿದ್ದ ಎನ್ನಲಾಗುತ್ತಿದೆ.

ಯುವಕನ ಮೇಲೆ ಪೊಲೀಸರು ಐಪಿಸಿ 465, 469 ಮಾನಹಾನಿ ಮಾಡುವ ಉದ್ದೇಶದಿಂದ ಫೋರ್ಜರಿ ಮಾಡಿರುವುದು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಸಿ ಮತ್ತು ಇ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಯುವಕನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಜನರೆಲ್ಲ ರಶ್ಮಿಕಾ ಮಂದಣ್ಣ ಅಂತ ನಂಬಿಕೊಂಡಿದ್ದ ಹುಡುಗಿ ಇವರೇ ನೋಡಿ..

ಕಳೆದ ವಾರ ರಶ್ಮಿಕಾರದ್ದು ಎನ್ನಲಾದ ನಕಲಿ ವಿಡಿಯೋ ವೈರಲ್ ಆಗಿತ್ತು. ಕಪ್ಪು ಬಣ್ಣದ ಈಜುಡುಗೆ ಧರಿಸಿದ ಯುವತಿಯೊಬ್ಬರ ವಿಡಿಯೋಕ್ಕೆ ರಶ್ಮಿಕಾರ ಮುಖವನ್ನು ಸೇರಿಸಿ ಎಡಿಟ್ ಮಾಡಿ, ವಿಡಿಯೋವನ್ನು ಹರಿಬಿಡಲಾಗಿತ್ತು. ಏಐ (ಕೃತಕ ಬುದ್ಧಿಮತ್ತೆ) ಸೃಷ್ಟಿಸಲಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ನೋವಿನಿಂದ ಸ್ಪಷ್ಟನೆ ನೀಡಿದ್ದ ರಶ್ಮಿಕಾ, ಬೆಂಬಲ ವ್ಯಕ್ತಪಡಿಸಿದವರಿಗೆ ಧನ್ಯವಾದ ಹೇಳಿದ ಜೊತೆಗೆ, ಯಾರೋ ಕಾಲೇಜಿಗೆ ಹೋಗುವ ಯುವತಿಗೆ ಹೀಗೆ ಆದರೆ ಆಕೆ ಏನು ಮಾಡುತ್ತಾಳೆ ಎಂದು ಮೌಲಿಕ ಪ್ರಶ್ನೆಯನ್ನು ಇಟ್ಟಿದ್ದರು.

ರಶ್ಮಿಕಾರ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಮಿತಾಬ್ ಬಚ್ಚನ್, ನಟಿ ಮೃಣಾಲ್ ಠಾಕೂರ್, ನಾಗ ಚೈತನ್ಯ, ನಟ ರಕ್ಷಿತ್ ಶೆಟ್ಟಿ, ನಟಿಯರಾದ ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಇನ್ನೂ ಹಲವರು ಘಟನೆಯನ್ನು ಖಂಡಿಸಿದ್ದರು. ಅಪರಾಧಿಗಳನ್ನು ಶೀಘ್ರವೇ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸುವಂತೆ ಹಾಗೂ ಎಐ ಮೇಲೆಯೂ ನಿಯಂತ್ರಣ ಹೇರುವಂತೆಯೂ ಕೆಲವರು ಒತ್ತಾಯಿಸಿದ್ದರು.

ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ರಣ್​ಬೀರ್ ಕಪೂರ್ ಜೊತೆ ನಟಿಸಿರುವ ‘ಅನಿಮಲ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದರ ಜೊತೆಗೆ ಇನ್ನೂ ಕೆಲವು ತೆಲುಗು, ಹಿಂದಿ ಹಾಗೂ ಒಂದು ತಮಿಳು ಸಿನಿಮಾಗಳನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ