Kajol Viral Video: ಕ್ಯಾಮೆರಾ ಎದುರಲ್ಲೇ ಡ್ರೆಸ್ ಚೇಂಜ್ ಮಾಡಿದ್ರಾ ಕಾಜೋಲ್? ನೆಟ್ಟಿಗರ ದಾರಿ ತಪ್ಪಿಸಿದ ಡೀಪ್ಫೇಕ್ ವಿಡಿಯೋ
Kajol Deepfake Video: ರಶ್ಮಿಕಾ ಮಂದಣ್ಣ ಅವರ ಬಳಿಕ ನಟಿ ಕಾಜೋಲ್ ಅವರಿಗೆ ಡೀಪ್ಫೇಕ್ ವಿಡಿಯೋದಿಂದ ಕಿರಿಕಿರಿ ಉಂಟಾಗಿದೆ. ಇಂತಹ ಡೀಪ್ಫೇಕ್ ವಿಡಿಯೋಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ರೀತಿಯ ಸೈಬರ್ ಕ್ರೈಮ್ ವಿರುದ್ಧ ಶೀಘ್ರವೇ ಕಠಿಣ ಕಾನೂನು ಜಾರಿ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಸೆಲೆಬ್ರಿಟಿಗಳಿಗೆ ಡೀಪ್ಫೇಕ್ (Deepfake) ಎಂಬುದು ನಿಜಕ್ಕೂ ತಲೆ ನೋವಾಗಿದೆ. ಯಾರದ್ದೋ ವಿಡಿಯೋಗೆ ನಟಿಯರ ಮುಖವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ವೈರಲ್ ಆಗಿತ್ತು. ಈಗ ನಟಿ ಕಾಜೋಲ್ (Kajol) ಅವರಿಗೆ ಈ ಸಮಸ್ಯೆ ಎದುರಾಗಿದೆ. ಕ್ಯಾಮೆರಾ ಎದುರಿನಲ್ಲಿ ಕಾಜೋಲ್ ಡ್ರೆಸ್ ಚೇಂಜ್ ಮಾಡುತ್ತಿರುವ ರೀತಿಯಲ್ಲಿ ಈ ಡೀಪ್ಫೇಕ್ ವಿಡಿಯೋ (Kajol Deepfake Video) ಮಾಡಲಾಗಿದೆ. ಅದನ್ನು ನೋಡಿ ಅನೇಕರು ಇದು ನಿಜವಾಗಿಯೂ ಕಾಜೋಲ್ ಎಂದು ನಂಬಿದ್ದಾರೆ. ಕೆಲವರು ನಟಿಯನ್ನು ಟೀಕಿಸಿದ್ದಾರೆ. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ ಅದು ಡೀಪ್ಫೇಕ್ ವಿಡಿಯೋ ಎಂಬುದು ಗೊತ್ತಾಗಿದೆ.
ಅಂದಹಾಗೆ, ಇದು ಇಂಗ್ಲಿಷ್ ಸೋಶಿಯಲ್ ಮೀಡಿಯಾ ಇನ್ಫ್ಲೂಯನ್ಸರ್ ರೋಸಿ ಬ್ರೀನ್ ಎಂಬುವವರ ಒರಿಜಿನಲ್ ವಿಡಿಯೋ. ಕೆಲವೇ ದಿನಗಳ ಹಿಂದೆ ಟಿಕ್ಟಾಕ್ನಲ್ಲಿ ಅವರು ಈ ವಿಡಿಯೋ ಅಪ್ಲೋಡ್ ಮಾಡಿದ್ದರು. ‘ಗೆಟ್ ರೆಡಿ ವಿತ್ ಮೀ’ ಟ್ರೆಂಡ್ನ ಅಂಗವಾಗಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಅದನ್ನೇ ಇಟ್ಟುಕೊಂಡು ಕಿಡಿಗೇಡಿಗಳು ಡೀಪ್ಫೇಕ್ ವಿಡಿಯೋ ಮಾಡಿದ್ದಾರೆ. ರೋಸಿ ಬ್ರೀನ್ ಅವರ ದೇಹಕ್ಕೆ ಕೋಜೋಲ್ ಅವರ ಮುಖವನ್ನು ಅಂಟಿಸಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ಫೇಕ್ ವಿಡಿಯೋ ನೋಡಿ ವಿಜಯ್ ದೇವರಕೊಂಡ ಗರಂ; ನಟ ಹೇಳಿದ್ದೇನು?
ಡೀಪ್ಫೇಕ್ ವಿಡಿಯೋಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಆಗುತ್ತಿದೆ. ಇಂತಹ ಸೈಬರ್ ಕ್ರೈಮ್ ವಿರುದ್ಧ ಶೀಘ್ರವೇ ಕಠಿಣ ಕಾನೂನು ಜಾರಿ ಆಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಫೇಮಸ್ ಸೆಲೆಬ್ರಿಟಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಡೀಪ್ಫೇಕ್ ವಿಡಿಯೋ ಕ್ರಿಯೇಟ್ ಮಾಡಲಾಗುತ್ತಿದೆ. ಈ ಬಗ್ಗೆ ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ, ನಾಗ ಚೈತನ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಡೀಪ್ಫೇಕ್ ಹಾವಳಿ ಇನ್ನಷ್ಟು ಹೆಚ್ಚಾಗಬಹುದು.
ಕೃತಕ ಬುದ್ಧಿಮತ್ತೆಯ ಬಗ್ಗೆ ಹಲವು ಸಂಶೋಧನೆಗಳು ನಡೆಯುತ್ತಿವೆ. ಅದರ ಭಾಗವಾಗಿ ಡೀಪ್ಫೇಕ್ ರೀತಿಯ ತಂತ್ರಜ್ಞಾನ ಕೂಡ ಬೆಳೆಯುತ್ತಿದೆ. ಆದರೆ ಇದನ್ನ ದುರುದ್ದೇಶದ ಕೆಲಸಕ್ಕೆ ಕೆಲವು ಕಿಡಿಗೇಡಿಗಳು ಬಳಸುತ್ತಿದ್ದಾರೆ. ಸೆಲೆಬ್ರಿಟಿಗಳ ತೇಜೋವಧೆ ಮಾಡಲು ಈ ರೀತಿ ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕತ್ರಿನಾ ಕೈಫ್ ಅವರ ಎಡಿಟೆಡ್ ಇಮೇಜ್ ಕೂಡ ವೈರಲ್ ಆಗಿತ್ತು. ಇಂಥ ಕೃತ್ಯಕ್ಕೆ ಸೆಲೆಬ್ರಿಟಿಗಳಿಂದ ಮತ್ತು ಜನ ಸಾಮಾನ್ಯರಿಂದಲೂ ಖಂಡನೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:37 pm, Fri, 17 November 23