ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. 2024ರ ಜನವರಿ ಮೊದಲ ವಾರದೊಳಗೆ ಎರಡನೇ ಮಹಡಿಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಈ ನಡುವೆ ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಮ ಮಂದಿರ ಕಟ್ಟಿದರೆ ರಾಮನಾಗುವುದಿಲ್ಲ, ರಾಮನ ಹಾದಿಯಲ್ಲಿ ಸಾಗುವವರೇ ರಾಮ ಎಂದು ಹೇಳಿದ್ದಾರೆ.
ಮೋದಿ ಸ್ವತಃ ಸನಾತನಿ ಅಲ್ಲ ಮತ್ತು ಅವರೇ ಸನಾತನವಲ್ಲದಿದ್ದರೆ ಅವರು ಸನಾತನ ಧರ್ಮವನ್ನು ಹೇಗೆ ರಕ್ಷಿಸುತ್ತಾರೆ. ಸೂಟು ಬೂಟು ಅಲ್ಲ ಸತ್ಯದ ಆಧಾರದಲ್ಲಿ ನಡೆದು ಹೋಗುತ್ತಿದ್ದ ಗಾಂಧೀಜಿಯೇ ನಿಜವಾದ ಸನಾತನಿ, ಸನಾತನ ಧರ್ಮದವರು ಕಟ್ಟಡಗಳನ್ನು ಕೆಡಗುವುದಿಲ್ಲ, ಬಿಜೆಪಿಯವರಿಗೆ ಸನಾತನದ ಅರ್ಥವೇ ಗೊತ್ತಿಲ್ಲ ಎಂದು ಕಡಿಕಾರಿದ್ದಾರೆ.
ಈ ಮೊದಲು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ಮಾತನಾಡಿ, ಸೈನಿಕರು ಹುತಾತ್ಮರಾದಾಗ ಸನಾತನಿಗಳು ಸಂಭ್ರಮಿಸುವುದಿಲ್ಲ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಉತ್ತರ ನೀಡಿದ್ದ ಪ್ರಧಾನಿ ಮೋದಿ ಪ್ರತಿಪಕ್ಷಗಳು ಸನಾತನ ಧರ್ಮವನ್ನು ನಾಶಪಡಿಸಲು ಪ್ರಯತ್ನಿಸುತ್ತಿವೆ , ದೇಶದ ಸನಾತನ ಸಂಪ್ರದಾಯದ ಮೇಲೆ ದಾಳಿ ಮಾಡಲು ಉಪಾಯ ಮಾಡುತ್ತಿವೆ ಎಂದು ಕಿಡಿ ಕಾರಿದ್ದರು.
ಮತ್ತಷ್ಟು ಓದಿ: ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ವಿಶ್ವದರ್ಜೆಯ ಈ ಸೆಂಟರ್ನ ವಿಶೇಷತೆಗಳೇನು?
ಇದಕ್ಕೂ ಮುನ್ನ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಹಾಗೂ ಕೊರೊನಾಗೆ ಹೋಲಿಕೆ ಮಾಡಿದ್ದರು.
#WATCH | Delhi: On giving a suggestion to Prime Minister Narendra Modi on his 73rd birthday, Rajya Sabha MP Kapil Sibal says “Become a Sanatani.” pic.twitter.com/OtSWEZJ9d9
— ANI (@ANI) September 17, 2023
ಈ ರೋಗಗಳ ವಿರುದ್ಧ ಹೇಗೆ ನಮಗೆ ಹೋರಾಡಲು ಸಾಧ್ಯವಿಲ್ಲವೋ ಹಾಗೆಯೇ ಸನಾತನ ಧರ್ಮದ ವಿರುದ್ಧವೂ ಹೋರಾಡಿ ಪ್ರಯೋಜನವಿಲ್ಲ ಅದನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಾದ ಬಳಿಕ ಸನಾತನ ಧರ್ಮದ ವಿಚಾರವಾಗಿ ಸಾಕಷ್ಟು ರಾಜಕೀಯ ನಾಯಕರು ಪರ, ವಿರೋಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ