ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ವಿಶ್ವದರ್ಜೆಯ ಈ ಸೆಂಟರ್​ನ ವಿಶೇಷತೆಗಳೇನು?

Yashobhoomi Features: ವಿಶ್ವದರ್ಜೆಯ ಕನ್ವೆನ್ಷನ್ ಮತ್ತು ಎಕ್ಸ್​ಪೋ ಕೇಂದ್ರವಾದ ಯಶೋಭೂಮಿಯ ಮೊದಲ ಹಂತದ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಉದ್ಘಾಟನೆ ಮಾಡಿದ್ದಾರೆ. 5,400 ಕೋಟಿ ರೂ ಅಂದಾಜು ವೆಚ್ಚದ ಈ ಕಟ್ಟಡಕ್ಕೆ ಹಲವು ವಿಶೇಷತೆಗಳಿವೆ. ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ನಡೆಸಲು ಅನುಕೂಲವಾಗುವಷ್ಟು ಬೃಹತ್ ಜಾಗದಲ್ಲಿ ಭವ್ಯವಾದ ಯಶೋಭೂಮಿಯನ್ನು ನಿರ್ಮಿಸಲಾಗಿದೆ.

ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ವಿಶ್ವದರ್ಜೆಯ ಈ ಸೆಂಟರ್​ನ ವಿಶೇಷತೆಗಳೇನು?
ಯಶೋಭೂಮಿ
Follow us
|

Updated on: Sep 17, 2023 | 12:31 PM

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನವಾದ (PM Narendra Modi birthday) ಇಂದು ವಿಶ್ವದರ್ಜೆಯ ಪ್ರದರ್ಶನ ಕೇಂದ್ರದ ಉದ್ಘಾಟನೆ ಆಗಿದೆ. ರಾಷ್ಟ್ರರಾಜಧಾನಿಯ ದ್ವಾರಕಾ ಪ್ರದೇಶದಲ್ಲಿ ಪ್ರಧಾನಿಯವರು ತಮ್ಮ ಜನ್ಮದಿನದಂದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಎಕ್ಸ್​ಪೋ ಸೆಂಟರ್​ನ (IICC) ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಯಶೋಭೂಮಿ ಎಂದು ಕರೆಯಲಾಗುವ ಈ ಎಕ್ಸ್​ಪೋ ಸೆಂಟರ್​ಗೆ ಎಕ್ಸ್​ಪ್ರೆಸ್​ವೆ ಕನೆಕ್ಟಿವಿಟಿ ಕೂಡ ನೀಡಲಾಗಿದೆ. ದ್ವಾರಕಾ ಸೆಕ್ಟರ್ 21ನಲ್ಲಿರುವ ಏರ್ಪೋರ್ಟ್ ಮೆಟ್ರೋ ಎಕ್ಸ್​ಪ್ರೆಸ್ ಲೈನ್ ಅನ್ನು ಯಶೋಭೂಮಿ ಮೆಟ್ರೋ ಸ್ಟೇಷನ್​ವರೆಗೂ ವಿಸ್ತರಿಸಲಾಗಿದೆ. ಯಶೋಭೂಮಿ ಮೆಟ್ರೋಸ್ಟೇಷನ್ ಸ್ಥಳವು ದ್ವಾರಕಾ ಸೆಕ್ಟರ್ 25ರಲ್ಲಿ ಇದೆ.

ನರೇಂದ್ರ ಮೋದಿ ಅವರು ಏರ್​ಪೋರ್ಟ್ ಲೈನ್ ವಿಸ್ತರಣೆಗೆ ಚಾಲನೆ ಕೊಟ್ಟ ಬಳಿಕ ಮೆಟ್ರೋ ರೈಲಿನಲ್ಲಿ ಸಾಮಾನ್ಯ ಜನರ ಜೊತೆ ಕುಳಿತು ಪ್ರಯಾಣಿಸಿದರು.

ಯಶೋಭೂಮಿ ವಿಶೇಷತೆಗಳೇನು?

  • ಯಶೋಭೂಮಿ ಎಂಬುದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್​ಪೋ ಸೆಂಟರ್ (ಐಐಸಿಸಿ). ಅಂತಾರಾಷ್ಟ್ರೀಯ ಸಭೆ, ಸಮಾರಂಭ, ಪ್ರದರ್ಶನಗಳನ್ನು ಆಯೋಜಿಸಲು ಇರುವ ಬೃಹತ್ ಕೇಂದ್ರವಾಗಿದೆ. ಇಂಥ ಸೌಲಭ್ಯ ಹೊಂದಿರುವ ವಿಶ್ವದ ಬೃಹತ್ ಕಟ್ಟಡಗಳ ಪೈಕಿ ಯಶೋಭೂಮಿ ಒಂದೆನಿಸಿದೆ.

ಇದನ್ನೂ ಓದಿ: PM Modi Birthday: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ, ರಾಷ್ಟ್ರಪತಿ ಮುರ್ಮು ಹಾಗೂ ಕೇಂದ್ರ ಸಚಿವರಿಂದ ಶುಭಾಶಯ

    • ಯಶೋಭೂಮಿಯ ಒಟ್ಟು ಯೋಜನಾ ಸ್ಥಳ ಬರೋಬ್ಬರಿ 8.9 ಲಕ್ಷ ಚದರ ಮೀಟರ್ ವಿಸ್ತೀರ್ಣದ್ದಾಗಿದೆ. ಇದರಲ್ಲಿ ಕಟ್ಟಡ ನಿರ್ಮಾಣ ಪ್ರದೇಶ 1.8 ಲಕ್ಷ ಚದರ ಮೀಟರ್ ವಿಸ್ತೀರಣದ್ದಾಗಿದೆ.

  • ಯಶೋಭೂಮಿ ನಿರ್ಮಾಣಕ್ಕೆ ಅಂದಾಜು 5,000 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗುತ್ತಿದೆ.
  • ಯಶೋಭೂಮಿಯ ಕನ್ವೆನ್ಷನ್ ಸೆಂಟರ್ ಅನ್ನು 73,000 ಚದರ ಮೀಟರ್ ಜಾಗದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯ ಆಡಿಟೋರಿಯಂ, 13 ಮೀಟಿಂಗ್ ರೂಮ್ ಸೇರಿದಂತೆ 15 ಕನ್ವೆನ್ಷನ್ ರೂಮ್​ಗಳು ಒಳಗೊಂಡಿವೆ.

ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ; ಒಂದು ವರ್ಷದಲ್ಲಿ ಭಾರತೀಯ ಷೇರುಮಾರುಕಟ್ಟೆ ಅಮೋಘ ಬೆಳವಣಿಗೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಯಾವ್ಯಾವ ಸೂಚ್ಯಂಕಗಳು ಹೆಚ್ಚಿರುವುದೆಷ್ಟು? ಇಲ್ಲಿದೆ ಮಾಹಿತಿ

  • ಯಶೋಭೂಮಿಯಲ್ಲಿ ಪರಿಸರಸ್ನೇಹಿ ಎನಿಸುವ ಹಲವು ಫೀಚರ್​ಗಳಿವೆ. ತ್ಯಾಜ್ಯನೀರು ನಿರ್ವಹಣೆ ವ್ಯವಸ್ಥೆ ಇದೆ. ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಇದೆ. ಮೇಲ್ಚಾವಣಿ ಸೌರ ಫಲಕಗಳಿವೆ. ಈ ಕಟ್ಟಡಗಳ ಸಂಕೀರ್ಣಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್​ನಿಂದ ಅತ್ಯುಚ್ಚವೆನಿಸುವ ಪ್ಲಾಟಿನಂ ಪ್ರಮಾಣಪತ್ರ ಕೊಡಲಾಗಿದೆ.
  • ಯಶೋಭೂಮಿ ಸಂಕೀರ್ಣದಲ್ಲಿರುವ ಪ್ರಮುಖ ಆಡಿಟೋರಿಯಂ ಅಥವಾ ಸಭಾಂಗಣವನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಶಬ್ದದ ನಿರ್ವಹಣೆ ಉತ್ತಮವಾಗಿರುವಂತೆ ನಿರ್ಮಿಸಲಾಗಿದೆ. ವಿಶ್ವದರ್ಜೆ ಮಟ್ಟದ ಆಡಿಟೋರಿಯಂ ಇದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ