Narendra Modi: ದಿನಪೂರ್ತಿ ರಾಜಕೀಯದಲ್ಲೇ ಉಸಿರಾಡುವ ಜನನಾಯಕನ ಪ್ರಕೃತಿ ಹಾಗೂ ಪ್ರಾಣಿ ಪ್ರೇಮ

ದಿನದ 24 ಗಂಟೆಯೂ ಪ್ರಧಾನಿ ನರೇಂದ್ರ ಮೋದಿ ರಾಜಕೀಯದಲ್ಲೇ ಇರುತ್ತಾರೆ. ಅವರ ಉಸಿರು ಹಾಗೂ ಆಹಾರ ಕೂಡ ರಾಜಕೀಯ ಎಂದು ಕೆಲವರು ಹೇಳುವುದು ಇದೆ. ಅಂದ್ಹಾಗೆ ದಿನದ 18 ಗಂಟೆ ಕೆಲಸ ಮಾಡುವ ಪ್ರಧಾನಿ, ರಾಜಕೀಯ ಹೊರತಾದ ಕೆಲಸದಲ್ಲೂ ಆಗಾಗ ಕಾಣಿಸಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಆಸಕ್ತಿಯನ್ನು ದೇಶದ ಜನರಿಗೆ ತಿಳಿಸುವ ಕೆಲಸ ಮಾಡುತ್ತಾರೆ. ಅದು ಕೆಲವೊಮ್ಮೆ ಟಿವಿ ಕಾರ್ಯಕ್ರಮ, ಸಂದರ್ಶನ ಅಥವಾ ಮನ್‌ ಕೀ ಬಾತ್‌ನಲ್ಲಿ ಪ್ರಚಾರಕ್ಕೆ ಬರುತ್ತದೆ. ಇಂತಹ ಅವರ ಆಸಕ್ತಿಗಳಲ್ಲಿ ಒಂದು ಪ್ರಕೃತಿ ಹಾಗೂ ಪ್ರಾಣಿ ಪ್ರೇಮ.

Narendra Modi: ದಿನಪೂರ್ತಿ ರಾಜಕೀಯದಲ್ಲೇ ಉಸಿರಾಡುವ ಜನನಾಯಕನ ಪ್ರಕೃತಿ ಹಾಗೂ ಪ್ರಾಣಿ ಪ್ರೇಮ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Sep 17, 2023 | 11:40 AM

ದಿನದ 24 ಗಂಟೆಯೂ ಪ್ರಧಾನಿ ನರೇಂದ್ರ ಮೋದಿ(Narendra Modi) ರಾಜಕೀಯದಲ್ಲೇ ಇರುತ್ತಾರೆ. ಅವರ ಉಸಿರು ಹಾಗೂ ಆಹಾರ ಕೂಡ ರಾಜಕೀಯ ಎಂದು ಕೆಲವರು ಹೇಳುವುದು ಇದೆ. ಅಂದ್ಹಾಗೆ ದಿನದ 18 ಗಂಟೆ ಕೆಲಸ ಮಾಡುವ ಪ್ರಧಾನಿ, ರಾಜಕೀಯ ಹೊರತಾದ ಕೆಲಸದಲ್ಲೂ ಆಗಾಗ ಕಾಣಿಸಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಆಸಕ್ತಿಯನ್ನು ದೇಶದ ಜನರಿಗೆ ತಿಳಿಸುವ ಕೆಲಸ ಮಾಡುತ್ತಾರೆ. ಅದು ಕೆಲವೊಮ್ಮೆ ಟಿವಿ ಕಾರ್ಯಕ್ರಮ, ಸಂದರ್ಶನ ಅಥವಾ ಮನ್‌ ಕೀ ಬಾತ್‌ನಲ್ಲಿ ಪ್ರಚಾರಕ್ಕೆ ಬರುತ್ತದೆ. ಇಂತಹ ಅವರ ಆಸಕ್ತಿಗಳಲ್ಲಿ ಒಂದು ಪ್ರಕೃತಿ ಹಾಗೂ ಪ್ರಾಣಿ ಪ್ರೇಮ.

ಪ್ರಧಾನಿ ಮೋದಿಯವರ ಪ್ರಾಣಿಗಳ ಮೇಲಿನ ಪ್ರೇಮದ ನಂಟು ಬಾಲ್ಯದಿಂದಲೇ ಆರಂಭವಾಗಿದೆ. ಅವರಿಗೆ ಕೇವಲ ಹತು ವರ್ಷವಾಗಿದ್ದಾಗ ಗುಜರಾತ್‌ನ ಶರ್ಮಿಷ್ಟಾ ಕೆರೆಯಲ್ಲಿ ಮೊಸಳೆ ಮರಿಯೊಂದನ್ನು ರಕ್ಷಿಸಿದ್ದರು. ಇದಾದ ಬಳಿಕ ಸಣ್ಣ ವಯಸ್ಸಿನಲ್ಲೇ ಕುಟುಂಬದಿಂದ ದೂರವಾಗಿ ಹಿಮಾಲಯದತ್ತ ಮೋದಿ ಮುಖ ಮಾಡಿದ್ದರು. ಇದರ ಪರಿಣಾಮವಾಗಿ ಹಿಮಾಲಯದ ತಪ್ಪಲಲ್ಲಿ ಸಾಕಷ್ಟು ವಿಸ್ಮಯಗಳಿಗೆ ಅವರು ಸಾಕ್ಷಿಯಾದರು. ಇದು ಅವರಿಗೆ ಪ್ರಕೃತಿ ಹಾಗೂ ಪ್ರಾಣಿಗಳ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗಲು ಕಾರಣವಾಯಿತು.

ಗುಜರಾತ್‌ನ ಗಿರ್‌ ಅಭಯಾರಣ್ಯವು ದೇಶದಲ್ಲೇ ಅತಿ ಹೆಚ್ಚು ಸಿಂಹಗಳನ್ನು ಹೊಂದಿರುವುದು ಎಲ್ಲರಿಗೂ ತಿಳಿದಿ ವಿಚಾರ. ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಸಿಂಹಗಳ ಸಂಖ್ಯೆ ಇಳಿಕೆ ಆಗುತ್ತಿತ್ತು. ಅವರು ಮುಖ್ಯಮಂತ್ರಿಯಾದ ಬಳಿಕ ಸಿಂಹಗಳ ರಕ್ಷಣೆಗೆ ಒಂದಿಷ್ಟು ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ, ಇಂದು ಸಂಖ್ಯೆ ಹೆಚ್ಚಾಗಲು ಕಾರಣವಾಯಿತು. ಹಾಗೆಯೇ ನಮೀಬಿಯಾದಿಂದ ಚೀತಾವನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅಭಯಾರಣ್ಯಕ್ಕೆ ತಂದಿದ್ದು, ಬೀರ್‌ ಗ್ರಿಲ್ಲಿಸ್‌ ಅವರ ಮ್ಯಾನ್‌ vs ವೈಲ್ಡ್‌ ಎಪಿಸೋಡ್‌ನಲ್ಲಿ ಬಾಗಿಯಾದದ್ದು ಕೂಡ ಅವರ ಪ್ರಾಣಿ ಪ್ರೀತಿಗೆ ಒಂದು ನಿದರ್ಶನವಾಗಿದೆ.

ಇತ್ತೀಚೆಗೆ ಕರ್ನಾಟಕದ ಬಡೀಪುರ, ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಣಾ ಅಭಯರಾಣ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾವುತರು ಹಾಗೂ ಸ್ಥಳೀಯರೊಂದಿಗೆ ಪ್ರಧಾನಿ ಚರ್ಚೆ ನಡೆಸಿದ್ದರು. ಆಸ್ಕರ್‌ ಪ್ರಶಸ್ತಿ ವಿಜೇತ ʼದಿ ಎಲಿಫಮಟ್‌ ವಿಸ್ಪರರ್‌ʼ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡವರ ಜತೆಗೂ ಈ ಸಂದರ್ಭದಲ್ಲಿ ಮೋದಿ ಮಾತನಾಡಿದ್ದರು. ಇದು ಪ್ರಾಣಿ ಪ್ರಿಯರ ಪ್ರಶಂಸೆಗೂ ಕಾರಣವಾಗಿತ್ತು.

ಮತ್ತಷ್ಟು ಓದಿ: ಸಂವಿಧಾನ ಶಿಲ್ಪಿ ಬಿಆರ್​ ಅಂಬೇಡ್ಕರ್​ ಕನಸು ನನಸು ಮಾಡುತ್ತಿರುವ ಪ್ರಧಾನಿ ಮೋದಿ

ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲೂ ಪರಿಸರ ಹಾಗೂ ಪ್ರಾಣಿ ಸಂರಕ್ಷನೆ ಬಗ್ಗೆ ಮೋದಿ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಹುಲಿ ಸಂರಕ್ಷಣೆ, ಪ್ರಕೃತಿ ವೈವಿದ್ಯತೆ ಬಗ್ಗೆ ಈ ಕಾರ್ಯಕ್ರಮದಲ್ಲಿ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಭಾರತೀಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕೂಡ ಪ್ರಸ್ತಾಪಿಸಿದ್ದರು. ಹಾಗೆಯೇ ಕಾಡು ಪ್ರಾಣಿಗಳ ಹತ್ಯೆಯ ಬಗ್ಗೆ ಆಸ್ಸಾಂ ಸರ್ಕಾರ ತೆಗೆದುಕೊಂಡ ಪರಿಣಾಮಕಾರಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು.

ಇತ್ತೀಚೆಗೆ ವಿಡಿಯೋ ಒಂದರಲ್ಲಿ ಪ್ರಧಾನಿ ಮೋದಿಯು ತಮ್ಮ ನಿವಾಸದ ಬಳಿ ರಾಷ್ಟ್ರೀಯ ಪಕ್ಷಿ ನವಿಲಿಗೆ ಆಹಾರ ಹಾಕುತ್ತಿರುವುದು ಎಲ್ಲರ ಗಮನ ಸೆಳೆದಿತ್ತು. ಇದಲ್ಲದೇ ವಿದೇಶಗಳಿಗೆ ಭೇಟಿ ನೀಡಿದಾಗ ಅಥವಾ ಅವಕಾಶ ಸಿಕ್ಕಾಗೆಲಲ್ಲ ಸ್ಥಳೀಯ ಕೆರೆ, ಮೃಗಾಲಯಗಳಿಗೆ ಭೇಟಿ ನೀಡಿ ಆಹಾರ ನೀಡುವುದು ಸಾಮಾನ್ಯ ಕಾರ್ಯಕ್ರಮ ಆಗಿರುತ್ತದೆ. ಪ್ರಧಾನಿಯ ಕನಸಿನ ಯೋಜನೆಯಾದ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಮೂರ್ತಿ ಬಳಿ ಚಿಟ್ಟೆ ಪಾರ್ಕ್‌ ಸೇರಿ ಇತರ ಪ್ರಕೃತಿ ಸಂರಕ್ಷಣೆ ಕುರಿತ ಥೀಮ್‌ ಆಧರಿಸಿ ಯೋಜನೆ ರೂಪಿಸಲಾಗಿರುವುದು ಅವರ ದೂರದೃಷ್ಟಿಯ ಪ್ರತೀಕವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:38 am, Sun, 17 September 23

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ