ಮುಂಬೈ: 365 ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಕಿ ಎಂಬ ಪೊಲೀಸ್ ಶ್ವಾನ ಇಂದು ಅಸುನೀಗಿದೆ. ಮಹಾರಾಷ್ಟ್ರ ಪೊಲೀಸ್ನ ಬೀಡ್ ನಗರದ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕಿಗೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಬೀಳ್ಕೊಡುಗೆ ಮಾಡಲಾಯಿತು. ಡಾಬರ್ಮನ್ ತಳಿಗೆ ಸೇರಿದ್ದ ರಾಕಿಗೆ ಹಿರಿಯ ಅಧಿಕಾರಿಗಳು ಹೂಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು. ಬಳಿಕ ರಾಕಿಯ ಮೃತದೇಹ ಹೊತ್ತ ವಾಹನವನ್ನ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ತೇರಿನಂತೆ ಹಗ್ಗದ ಮೂಲಕ ಎಳೆದು ಶ್ವಾನದ […]
Ad
Follow us on
ಮುಂಬೈ: 365 ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಕಿ ಎಂಬ ಪೊಲೀಸ್ ಶ್ವಾನ ಇಂದು ಅಸುನೀಗಿದೆ.
ಮಹಾರಾಷ್ಟ್ರ ಪೊಲೀಸ್ನ ಬೀಡ್ ನಗರದ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕಿಗೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಬೀಳ್ಕೊಡುಗೆ ಮಾಡಲಾಯಿತು. ಡಾಬರ್ಮನ್ ತಳಿಗೆ ಸೇರಿದ್ದ ರಾಕಿಗೆ ಹಿರಿಯ ಅಧಿಕಾರಿಗಳು ಹೂಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದರು.
ಬಳಿಕ ರಾಕಿಯ ಮೃತದೇಹ ಹೊತ್ತ ವಾಹನವನ್ನ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು ತೇರಿನಂತೆ ಹಗ್ಗದ ಮೂಲಕ ಎಳೆದು ಶ್ವಾನದ ಕರ್ತವ್ಯ ನಿಷ್ಠೆಗೆ ತಮ್ಮ ಅಂತಿಮ ಗೌರವ ಸಲ್ಲಿಸಿದರು.