ನೋಡ ನೋಡ್ತಿದ್ದಂತೆ ಕುಸಿಯಿತು ಗುಡ್ಡ! ಎಲ್ಲಿ?
ಉತ್ತರಾಖಂಡ್ನಲ್ಲಿ ವರುಣನ ಆರ್ಭಟ ಮಿತಿ ಮೀರಿದೆ. ಭಾರಿ ಮಳೆಯಿಂದಾಗಿ ಚಮೋಲಿಯಲ್ಲಿರುವ ಭದ್ರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ಅದೃಷ್ಟವಶಾತ್ ಕೆಳಗಿದ್ದವರು ಬಚಾವ್ ಆಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಗುಡ್ಡ ಕುಸಿತದಿಂದಾಗಿ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. 50 ಸಾವಿರ ಗಡಿ ಸಮೀಪಿಸಿದ ಸಾವು! ಇಡೀ ಜಗತ್ತನ್ನೇ ನಡುಗಿಸ್ತಿರೋ ಕಿಲ್ಲರ್ ಕೊರೊನಾ ಭಾರತದಲ್ಲೂ ಡೆಡ್ಲಿ ದಾಳಿ ಮಾಡುತ್ತಿದೆ. ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 50ಸಾವಿರ ಗಡಿ ಸಮೀಪಿಸಿದೆ. ಅಂದ್ರೆ 49ಸಾವಿರದ 980 ಜನರ […]
ಉತ್ತರಾಖಂಡ್ನಲ್ಲಿ ವರುಣನ ಆರ್ಭಟ ಮಿತಿ ಮೀರಿದೆ. ಭಾರಿ ಮಳೆಯಿಂದಾಗಿ ಚಮೋಲಿಯಲ್ಲಿರುವ ಭದ್ರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ. ಅದೃಷ್ಟವಶಾತ್ ಕೆಳಗಿದ್ದವರು ಬಚಾವ್ ಆಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಗುಡ್ಡ ಕುಸಿತದಿಂದಾಗಿ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.
50 ಸಾವಿರ ಗಡಿ ಸಮೀಪಿಸಿದ ಸಾವು! ಇಡೀ ಜಗತ್ತನ್ನೇ ನಡುಗಿಸ್ತಿರೋ ಕಿಲ್ಲರ್ ಕೊರೊನಾ ಭಾರತದಲ್ಲೂ ಡೆಡ್ಲಿ ದಾಳಿ ಮಾಡುತ್ತಿದೆ. ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 50ಸಾವಿರ ಗಡಿ ಸಮೀಪಿಸಿದೆ. ಅಂದ್ರೆ 49ಸಾವಿರದ 980 ಜನರ ಉಸಿರು ನಿಲ್ಲಿಸಿದ್ದು, 50 ಸಾವಿರಕ್ಕೆ ಇನ್ನು ಇಪ್ಪತ್ತಷ್ಟೇ ಬಾಕಿ ಇದೆ. ಸದ್ಯ ದೇಶದಲ್ಲಿ 25ಲಕ್ಷದ 89ಸಾವಿರದ 682 ಜನರ ಮೇಲೆ ವೈರಸ್ ದಾಳಿ ಮಾಡಿದೆ.
ಒಂದೇ ದಿನ 63,490 ಕೇಸ್ ದೇಶದಲ್ಲಿ ಮಿತಿ ಮೀರಿ ಆರ್ಭಟಿಸುತ್ತಿರೋ ಡೆಡ್ಲಿ ವೈರಸ್ ಮತ್ತೊಂದು ದಾಖಲೆ ನಿರ್ಮಿಸಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 63ಸಾವಿರದ 490 ಜನರಿಗೆ ಕೊರೊನಾ ವಕ್ಕರಿಸಿದೆ. ಇದ್ರ ಜೊತೆಗೆ ಒಂದೇ ದಿನದಲ್ಲಿ 944 ಜನರ ತೆಗೆದಿರೋ ವೈರಸ್, ಕ್ಷಣ ಕ್ಷಣಕ್ಕೂ ಭೀತಿ ಹುಟ್ಟಿಸುತ್ತಿದೆ.
ಪಂಜಾಬ್ ಸಚಿವರಿಗೆ ವೈರಸ್ ಪಂಜಾಬ್ ಸರ್ಕಾರದ ಕಂದಾಯ ಸಚಿವ ಗುರುಪ್ರೀತ್ ಸಿಂಗ್ಗೆ ಕೊರೊನಾ ವಕ್ಕರಿಸಿದೆ. ನಿನ್ನೆ ಭಟಿಂಡಾದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ್ರು. ಇದ್ರ ಬೆನ್ನಲ್ಲೇ ವರದಿ ಪಾಸಿಟಿವ್ ಬಂದಿದ್ದು, ಈಗ ಭಟಿಂಡಾ ಜಿಲ್ಲೆಯ ಸ್ವಾಗ್ರಾಮ ಮನ್ಸಾದಲ್ಲಿ ಐಸೋಲೇಷನ್ಗೆ ಒಳಗಾಗಿದ್ದಾರೆ. ಇದ್ರಿಂದಾಗಿ ನಿನ್ನೆ ಸಚಿವರ ಜೊತೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದವರಿಗೂ ಕೊರೊನಾ ಭೀತಿ ಕಾಡುತ್ತಿದೆ.
ಮಹಾರಾಷ್ಟ್ರದಲ್ಲಿ 4 ನಿಮಿಷಕ್ಕೊಂದು ಸಾವು! ಇಡೀ ದೇಶದಲ್ಲೇ ಕೊರೊನಾದಿಂದ ಸದ್ದು ಮಾಡಿರೋ ಮಹಾರಾಷ್ಟ್ರ ಈಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗ್ತಿದೆ. ಮಹಾರಾಷ್ಟ್ರದಲ್ಲಿ ಪ್ರತಿ 4 ನಿಮಿಷಕ್ಕೆ ಒಬ್ರು ಕೊರೊನಾದಿಂದ ಮೃತಪಡುತ್ತಿದ್ದಾರೆ ಅನ್ನೋ ಸಂಗತಿ ಬಯಲಾಗಿದೆ. ಅಲ್ದೆ, ಪ್ರತಿ ಒಂದು ಗಂಟೆಗೆ ಸರಾಸರಿ 526 ಕೇಸ್ಗಳು ಪತ್ತೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಒಟ್ಟು 5ಲಕ್ಷದ 84 ಸಾವಿರದ 754 ಜನರಿಗೆ ಕೊರೊನಾ ವಕ್ಕರಿಸಿದೆ.
ಸ್ವರ‘ಬ್ರಹ್ಮ’ ಆರೋಗ್ಯದಲ್ಲಿ ಚೇತರಿಕೆ ಸ್ವರಬ್ರಹ್ಮ ಎಸ್.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಚೆನ್ನೈನ ಎಂಜಿಎಮ್ ಹೆಲ್ತ್ ಕೇರ್ನಲ್ಲಿ ಎಸ್ಪಿಬಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಇಂದು ಬೆಳಗ್ಗೆ ಕಣ್ಣು ಬಿಟ್ಟು ನೋಡಿದ್ದಾರೆ ಎನ್ನಲಾಗಿದೆ. ಸದ್ಯ ಅವರಿಗೆ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿದ್ರಿಂದ ಎಕ್ಮೊ ಮಷಿನ್ ಅಳವಡಿಸಿ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಅಲ್ದೆ, ಮೂರನೇ ಮಹಡಿಯಿಂದ 6ನೇ ಮಹಡಿಯ ತೀವ್ರ ನಿಗಾ ವಾರ್ಡ್ಗೆ ಶಿಫ್ಟ್ ಮಾಡಿ ಟ್ರೀಟ್ಮೆಂಟ್ ನೀಡಲಾಗ್ತಿದೆ.
ಪ್ರಣಬ್ ಮುಖರ್ಜಿ ಗಂಭೀರ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೆಹಲಿಯಲ್ಲಿರುವ ಆರ್ಮಿಯ ಆರ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ವೆಂಟಿಲೇಟರ್ ಮೂಲಕ ಟ್ರೀಟ್ಮೆಂಟ್ ನೀಡಲಾಗ್ತಿದೆ. ಪ್ರಣಬ್, ಕೋಮಾರ್ಬಿಡಿಟಿ ಸಮಸ್ಯೆಗಳಿಂದ ಬಳಲುತ್ತಿದ್ದು, ತಜ್ಞ ವೈದ್ಯರು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿ ಅಂತಾ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಒಡಿಶಾದಲ್ಲಿ ಭೀಕರ ಪ್ರವಾಹ ಒಡಿಶಾದಲ್ಲಿ ಬಿಟ್ಟೂ ಬಿಡದೇ ಮಳೆ ಆರ್ಭಟಿಸುತ್ತಿದೆ. ಇದ್ರಿಂದಾ ಮಲ್ಕನ್ಗಿರಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಸೇತುವೆಗಳು ಸಂಪೂರ್ಣ ಮುಳುಗಡೆ ಆಗಿದ್ದು, ರಸ್ತೆ ಮೇಲೆ ಎರಡ್ಮೂರು ಅಡಿ ನೀರು ಹರಿಯುತ್ತಿದೆ. ಇದ್ರ ಮಧ್ಯೆಯೇ ಟ್ರಕ್ವೊಂದು ದಾಟಲು ಹರಸಾಹಸ ಪಟ್ಟಿತು.. ಮತ್ತೊಂದೆಡೆ, ಜಮೀನುಗಳೆಲ್ಲಾ ಜಲಾವೃತಗೊಂಡಿವೆ.