ಅಯೋಧ್ಯೆ ರಾಮಮಂದಿರಕ್ಕೆ ಕಾಶಿ ಮತ್ತು ಪ್ರಯಾಗ್ ರಾಜ್ ಭಿಕ್ಷುಕರಿಂದ 4 ಲಕ್ಷ ದೇಣಿಗೆ

|

Updated on: Dec 29, 2023 | 8:15 PM

ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ನಿಧಿ ಅಭಿಯಾನದಲ್ಲಿ ಪ್ರಯಾಗ್‌ರಾಜ್ ಮತ್ತು ಕಾಶಿಯಿಂದ 300ಕ್ಕೂ ಹೆಚ್ಚು ಭಿಕ್ಷುಕರು ಭಾಗವಹಿಸಿದ್ದರು. ಈ ಭಿಕ್ಷುಕರು ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ 4 ಲಕ್ಷರೂ ದೇಣಿಗೆ ನೀಡಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಕಾಶಿ ಮತ್ತು ಪ್ರಯಾಗ್ ರಾಜ್ ಭಿಕ್ಷುಕರಿಂದ 4 ಲಕ್ಷ ದೇಣಿಗೆ
ಅಯೋಧ್ಯೆ ರಾಮ ಮಂದಿರ
Follow us on

ದೆಹಲಿ ಡಿಸೆಂಬರ್ 29: ಅಯೋಧ್ಯೆಯಲ್ಲಿ (Ayodhya) ಭವ್ಯವಾದ ರಾಮಮಂದಿರ (Ram Mandir) ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿಗೆ ವಿಶ್ವಾದ್ಯಂತ ಭಕ್ತರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಅವರಲ್ಲಿ ಕಾಶಿ ಮತ್ತು ಪ್ರಯಾಗ್‌ರಾಜ್‌ನ (Prayagraj) ಭಿಕ್ಷುಕರು ದೇವಾಲಯದ ನಿರ್ಮಾಣಕ್ಕೆ 4 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ನಿಧಿ ಅಭಿಯಾನದಲ್ಲಿ ಪ್ರಯಾಗ್‌ರಾಜ್ ಮತ್ತು ಕಾಶಿಯಿಂದ 300ಕ್ಕೂ ಹೆಚ್ಚು ಭಿಕ್ಷುಕರು ಭಾಗವಹಿಸಿದ್ದರು. ಶ್ಲಾಘನೆಯ ಸಂಕೇತವಾಗಿ, ಮುಂಬರುವ ರಾಮಲಲ್ಲಾ ಪ್ರತಿಷ್ಠಾಪನೆಸಮಾರಂಭದಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗುತ್ತದೆ.

ಕೆಲ ಸಮಯದ ಹಿಂದೆ ಟ್ರಸ್ಟ್‌ಗೆ ಮಾಸಿಕ 1 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ಬಂದಿದೆ. ರಾಮಮಂದಿರ ಟ್ರಸ್ಟ್ ತನ್ನ ನವದೆಹಲಿಯ ಬ್ಯಾಂಕ್ ಖಾತೆಯಲ್ಲಿ ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ದೇಣಿಗೆಯನ್ನು ಸ್ವೀಕರಿಸಿದೆ. ಯುಎಇಯ ಭಕ್ತರೊಬ್ಬರು 11,000 ರೂ., ಆಸ್ಟ್ರೇಲಿಯಾದ ಇನ್ನೊಬ್ಬರು 21,000 ರೂ. ನೀಡಿದ್ದಾರೆ.

ಅಯೋಧ್ಯೆಯಲ್ಲಿರುವ ಮೂರು ಬ್ಯಾಂಕ್ ಖಾತೆಗಳಲ್ಲಿ ಟ್ರಸ್ಟ್ 3500 ಕೋಟಿ ರೂಪಾಯಿಗಳನ್ನು ಹೊಂದಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಖಚಿತಪಡಿಸಿದ್ದಾರೆ. ಈ ವರ್ಷದ ಫೆಬ್ರವರಿವರೆಗೆ ದೇಶಾದ್ಯಂತ ದೇಣಿಗೆಗಳ ಮೂಲಕ ಈ ಮಹತ್ವದ ಮೊತ್ತವನ್ನು ಸಂಗ್ರಹಿಸಲಾಗಿದೆ.

2024 ರ ಅಯೋಧ್ಯೆಯಲ್ಲಿ ರಾಮಮಂದಿರದ ಬಜೆಟ್ ಅನ್ನು 18,000 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಮತ್ತು ಯಾವುದೇ ವೆಚ್ಚವಿಲ್ಲದೆ ನಿರ್ಮಾಣ ಯೋಜನೆಯನ್ನು ಎಲ್ & ಟಿ ಕೈಗೆತ್ತಿಕೊಂಡಿದ, ರಾಮಮಂದಿರವು ಜನವರಿ 24, 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ.

ಕಾಶಿ ಮತ್ತು ಪ್ರಯಾಗರಾಜ್‌ನ ವ್ಯಕ್ತಿಗಳು ಸಮರ್ಪಣಾ ನಿಧಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇತ್ತೀಚಿನ ಬೆಳವಣಿಗೆಯಲ್ಲಿ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಅಯೋಧ್ಯೆಯ ರಾಮ್‌ಕೋಟ್‌ನಲ್ಲಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಕಚೇರಿಗೆ ಭೇಟಿ ನೀಡಿದರು.

ಇದನ್ನೂ ಓದಿ:ಪ್ರಧಾನಿ ರ‍್ಯಾಲಿ ನಡೆಯಲಿರುವ ಅಯೋಧ್ಯೆಯ ಮೈದಾನ ಪರಿಶೀಲಿಸಿ ಸೆಲ್ಫಿ ಕ್ಲಿಕ್ ಮಾಡಿದ ಯೋಗಿ ಆದಿತ್ಯನಾಥ್

ಪ್ರಧಾನಿ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಸಮಯದಲ್ಲಿ ಅವರು ನವೀಕರಿಸಿದ ಅಯೋಧ್ಯೆ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಹಿಂದೆ ಅಧಿಕಾರಿಗಳು ಖಚಿತಪಡಿಸಿದಂತೆ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಿಎಂ ಮೋದಿ ಅವರು ಆಗಸ್ಟ್ 5, 2020 ರಂದು ದೇವಾಲಯದ ಶಂಕುಸ್ಥಾಪನೆ ಮಾಡಿದ್ದು ಶ್ರೀರಾಮನ ವಿಗ್ರಹವನ್ನು ಜನವರಿ 22, 2024 ರಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ