ಕೋಯಿಕ್ಕೋಡ್, ಕೇರಳ: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತಗಳನ್ನು ಸೆಳೆಯಲು ತೆಲಂಗಾಣದಲ್ಲಿ (Telangana) ತೀವ್ರ ಪ್ರಚಾರದ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಭಾಷಣದ ಅನುವಾದಕರು ಹೇಗೆ ಸವಾಲುಗಳನ್ನು ಎದುರಿಸಿದರು ಎಂಬುದರ ಕುರಿತು ತಮಾಷೆಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಕೇರಳದ (Kerala) ಕೋಯಿಕ್ಕೋಡ್‌ನಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರವರು. ಐಯುಎಂಎಲ್ ಸಂಸದ ಅಬ್ದುಸ್ಸಮದ್ ಸಮದಾನಿ ಅವರು ರಾಹುಲ್ ಭಾಷಣವನ್ನು ಭಾಷಾಂತರಿಸಲು ಬಂದಿದ್ದರು. ಈ ವೇಳೆ ರಾಹುಲ್ ಗಾಂಧಿ, ತಮ್ಮ ಭಾಷಾಂತರಕಾರರಾಗಿರುವುದು ಅಪಾಯಕಾರಿ ಕೆಲಸ ಎಂದು ತಮಾಷೆಯಾಗಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಇತ್ತೀಚೆಗೆ ಮಾಡಿದ ಭಾಷಣವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಕಾಂಗ್ರೆಸ್ ಸಂಸದರು, ಅನುವಾದಕರು “ಬಹಳ ತೊಂದರೆಗೆ ಸಿಲುಕಿದ್ದಾರೆ” ಎಂದು ಹೇಳಿದರು. “ನಾನು ಏನೋ ಹೇಳುತ್ತಿದ್ದೆ. ಆದರೆ ಅವರು(ಅನುವಾದಕ) ಇನ್ನೇನೋ ಹೇಳುತ್ತಿದ್ದರು. ಸ್ವಲ್ಪ ಸಮಯದ ನಂತರ, ನಾನು ನನ್ನ ಮಾತುಗಳನ್ನು ಎಣಿಸಲು ಪ್ರಾರಂಭಿಸಿದೆ. ಅವರು ತೆಲುಗಿನಲ್ಲಿ ಮಾತನಾಡುತ್ತಿದ್ದರು. ಹಾಗಾಗಿ, ನಾನು ಹಿಂದಿಯಲ್ಲಿ ಐದು ಪದಗಳನ್ನು ಹೇಳಿದರೆ, ತೆಲುಗಿನಲ್ಲಿ ಐದು ಅಥವಾ ಏಳು ಪದಗಳಲ್ಲಿ ಭಾಷಾಂತರವಾಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅವರು 20, 25, 30 ಪದಗಳಲ್ಲಿ ಹೇಳುತ್ತಿದ್ದರು.
Lost in Translation 😊😂
Sometimes being my translator
can be a very dangerous job.😂😂– @RahulGandhi pic.twitter.com/GrsH6QE06t
— Ravinder Kapur. (@RavinderKapur2) November 29, 2023
ಕೆಲವೊಮ್ಮೆ ನಾನು ತುಂಬಾ ಬೇಸರದಿಂದ ಏನನ್ನಾದರೂ ಹೇಳುತ್ತೇನೆ, ಆಗ ಪ್ರೇಕ್ಷಕರು ತುಂಬಾ ಉತ್ಸುಕರಾಗುತ್ತಾರೆ. ನಂತರ ನಾನು ರೋಮಾಂಚನಕಾರಿಯಾಗಿ ಏನನ್ನಾದರೂ ಹೇಳುತ್ತೇನೆ ಮತ್ತು ಪ್ರೇಕ್ಷಕರು ಮೌನವಾಗಿರುತ್ತಾರೆ. ಅದೇ ಸಮಯದಲ್ಲಿ, ನಾನು ಕೋಪಗೊಳ್ಳಲು ಸಾಧ್ಯವಿಲ್ಲ. ನಾನು ಸದಾ ಹೊತ್ತು ಕಿರುನಗೆ ಬೀರುತ್ತಿರಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ಆದಾಗ್ಯೂ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನನ್ನ ಭಾಷಣವನ್ನು ಭಾಷಾಂತರಿಸುವಾಗ ಸಹೋದ್ಯೋಗಿ ಸಮದಾನಿ ಅವರಿಗೆ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದು ನನಗೆ ಖಚಿತವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ತೆಲಂಗಾಣ ವಿಧಾನಸಭಾ ಚುನಾವಣೆಯ ಹೈವೋಲ್ಟೇಜ್ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ನವೆಂಬರ್ 30 ರಂದು ಚುನಾವಣೆ ನಡೆಯಲಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸಬಹುದು ಎಂಬ ಸೂಚನೆಗಳ ನಡುವೆಯೇ, ದಕ್ಷಿಣ ರಾಜ್ಯ ಮತ್ತು ಗುಡ್ಡಗಾಡು ಕ್ಷೇತ್ರ ನನಗೆ ಮನೆ ಇದ್ದಂತೆ ಎಂದು ಕಾಂಗ್ರೆಸ್ ಮಾಜಿ ಮುಖ್ಯಸ್ಥರು ಬುಧವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಆರು ತಿಂಗಳಿಗಿಂತ ಕಡಿಮೆ ಸಮಯ ಉಳಿದಿರುವಾಗ, ಕೇರಳ ಮತ್ತು ವಯನಾಡ್‌ಗೆ ಬರುವುದು ನನಗೆ ಕೆಲಸವಲ್ಲ ಎಂದು ಗಾಂಧಿ ಹೇಳಿದರು.
ಇದನ್ನೂ ಓದಿ: ತಮ್ಮ ಭಾಷಣದಲ್ಲಿ ಭಾರತಮಾತೆಯನ್ನು ಅವಮಾನಿಸಿದರೇ ರಾಹುಲ್ ಗಾಂಧಿ? ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್
“ನನ್ನ ಕುಟುಂಬಕ್ಕೆ ಹಿಂತಿರುಗಿ ಮತ್ತು ನನ್ನ ಸ್ನೇಹಿತರನ್ನು ಭೇಟಿ ಮಾಡಿದಂತೆ ನಾನು ಭಾವಿಸುತ್ತೇನೆ. ನಾನು ಕೇರಳ ಮತ್ತು ವಯನಾಡ್‌ಗೆ ಎಷ್ಟು ಹೆಚ್ಚು ಬರುತ್ತೇನೆ, ಅದು ನನ್ನ ಮನೆ ಎಂದು ನಾನು ಭಾವಿಸುತ್ತೇನೆ” ಎಂದು ವಯನಾಡಿನ ಕಾಂಗ್ರೆಸ್ ಸಂಸದರು ಹೇಳಿದ್ದಾರೆ.
ದಿವಂಗತ ಮುಸ್ಲಿಂ ಲೀಗ್ ನಾಯಕ ಪಿ ಸೀದಿ ಹಾಜಿ ಅವರ ಕುರಿತ ಪುಸ್ತಕವನ್ನು ಇಲ್ಲಿ ಬಿಡುಗಡೆಗೊಳಿಸಿದ ನಂತರ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ