Jayalalithaa: 1997ರಲ್ಲಿ ವಶಪಡಿಸಿಕೊಂಡ ಜಯಲಲಿತಾಗೆ ಸೇರಿದ 11,344 ಸೀರೆ, 91 ಕೈಗಡಿಯಾರ, 750 ಅಲಂಕೃತ ಚಪ್ಪಲಿಗಳನ್ನು ಹರಾಜು ಹಾಕುವಂತೆ ಮನವಿ

|

Updated on: Jul 05, 2023 | 12:01 PM

ಸೆಂಬರ್ 1996 ರಲ್ಲಿ DVAC ಆಕೆಯ ಪೋಯಸ್ ಗಾರ್ಡನ್ ನಿವಾಸದಿಂದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಅದರಲ್ಲಿ 30 ಕೆಜಿ ಆಭರಣಗಳನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಮತ್ತು 11,344 ಸೀರೆಗಳು, ಚಿನ್ನದ ಪೆನ್ನು, 91 ಕೈ ಗಡಿಯಾರಗಳು, 700 ಕೆಜಿ ಬೆಳ್ಳಿ, 298 ಪೀಠೋಪಕರಣಗಳು, 750 ಚಪ್ಪಲಿಗಳು, 44 ಎಸಿ ಮತ್ತು ಇತರ ಐಟಂಗಳನ್ನು ಇನ್ನೂ ವರ್ಗಾಯಿಸಬೇಕಾಗಿದೆ.

Jayalalithaa: 1997ರಲ್ಲಿ ವಶಪಡಿಸಿಕೊಂಡ ಜಯಲಲಿತಾಗೆ ಸೇರಿದ 11,344 ಸೀರೆ, 91 ಕೈಗಡಿಯಾರ, 750 ಅಲಂಕೃತ ಚಪ್ಪಲಿಗಳನ್ನು ಹರಾಜು ಹಾಕುವಂತೆ ಮನವಿ
ಜಯಲಲಿತಾಗೆ ಸೇರಿದ 11,344 ಸೀರೆ, 91 ಕೈಗಡಿಯಾರ, 750 ಅಲಂಕೃತ ಚಪ್ಪಲಿಗಳನ್ನು ಹರಾಜು ಹಾಕುವಂತೆ ಮನವಿ
Follow us on

ಚೆನ್ನೈ: ಅಕ್ರಮ ಆಸ್ತಿ (ಡಿಎ) ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ (J Jayalalithaa) ಅವರಿಂದ 1997ರಲ್ಲಿ ವಶಪಡಿಸಿಕೊಂಡಿರುವ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುವುದಕ್ಕಾಗಿ ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (ಡಿವಿಎಸಿ – DVAC Directorate of Vigilance and Anti-Corruption) ಮನವಿ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಮೂಲದ ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹಮೂರ್ತಿ ಅವರು ಡಿವಿಎಸಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದು, ತಮಿಳುನಾಡು ಸಿಎಂ ದಿವಂಗತ ಜಯಲಲಿತಾ ಅವರಿಂದ ತಮ್ಮ ಇಲಾಖೆ ವಶಪಡಿಸಿಕೊಂಡಿರುವ 28 ವಸ್ತುಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಡಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ.

ಜಯಲಲಿತಾಗೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುವ ಪ್ರಕರಣ ಬೆಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಚಿನ್ನ, ವಜ್ರ ಮತ್ತು ಹರಳುಗಳಿಂದ ಹೊದಿಸಲಾದ 30 ಕೆಜಿ ಚಿನ್ನಾಭರಣ ಮಾತ್ರವೇ ರಾಜ್ಯದ ಖಜಾನೆಯಲ್ಲಿ ಇದೆ ಎಂದು ಕರ್ನಾಟಕ ಸರ್ಕಾರ ಹೇಳಿತ್ತು. ಆದ್ದರಿಂದ ಉಳಿದ ವಸ್ತುಗಳು ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದ ತಮಿಳುನಾಡು ಭ್ರಷ್ಟಾಚಾರ ನಿಗ್ರಹ ದಳದ ವಶದಲ್ಲಿದೆ. ಹಾಗಾಗಿ ಅವುಗಳನ್ನು ಆದಷ್ಟು ಬೇಗ ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು” ಎಂದು ನರಸಿಂಹಮೂರ್ತಿ ಕೋರಿದ್ದಾರೆ.

ನರಸಿಂಹ ಮೂರ್ತಿ ಅವರು ಒದಗಿಸಿರುವ ಪಟ್ಟಿಯ (ಅನುಬಂಧ) ಪ್ರಕಾರ ಅಮೂಲ್ಯವಾದ ಕಲ್ಲುಗಳು, 700 ಕೆಜಿ ಬೆಳ್ಳಿ ವಸ್ತುಗಳು, 11,344 ದುಬಾರಿ ಸೀರೆಗಳು, 44 ಎಸಿ ಯಂತ್ರಗಳು, 131 ಸೂಟ್‌ಕೇಸ್‌ಗಳು, 91 ಕೈಗಡಿಯಾರಗಳು, 146 ಅಲಂಕರಿಸಿದ ಕುರ್ಚಿಗಳು, 750 ಅಲಂಕರಿಸಿದ ಚಪ್ಪಲ್‌ಗಳು, 215 ಸ್ಫಟಿಕ-ಕತ್ತರಿಸಿದ 7 ಹರಳುಗಳು, ಗೋಡೆ ಗಡಿಯಾರಗಳು, 86 ಫ್ಯಾನ್‌ಗಳು, 146 ಅಲಂಕಾರಿಕ ಪರಿಕರಗಳು, 81 ಹ್ಯಾಂಗಿಂಗ್ ಲ್ಯಾಂಪ್‌ಗಳು, 20 ಸೋಫಾ ಸೆಟ್‌ಗಳು, 250 ಶಾಲುಗಳು, 12 ರೆಫ್ರಿಜರೇಟರ್‌ಗಳು, 10 ಟಿವಿ ಸೆಟ್‌ಗಳು, 8 CVR ಸೆಟ್‌ಗಳು ಮತ್ತು 140 ವಿಡಿಯೋ ಕ್ಯಾಸೆಟ್‌ಗಳು ಇತ್ಯಾದಿಯನ್ನು ಒಳಗೊಂಡಿವೆ.

ಡಿಸೆಂಬರ್ 1996 ರಲ್ಲಿ DVAC ಆಕೆಯ ಪೋಯಸ್ ಗಾರ್ಡನ್ ನಿವಾಸದಿಂದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಅದರಲ್ಲಿ 30 ಕೆಜಿ ಆಭರಣಗಳನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಮತ್ತು 11,344 ಸೀರೆಗಳು, ಚಿನ್ನದ ಪೆನ್ನು, 91 ಕೈ ಗಡಿಯಾರಗಳು, 700 ಕೆಜಿ ಬೆಳ್ಳಿ, 298 ಪೀಠೋಪಕರಣಗಳು, 750 ಚಪ್ಪಲಿಗಳು, 44 ಎಸಿ ಮತ್ತು ಇತರ ಐಟಂಗಳನ್ನು ಇನ್ನೂ ವರ್ಗಾಯಿಸಬೇಕಾಗಿದೆ.

ಇದರ ಬೆನ್ನಲ್ಲೇ ಜಯಲಲಿತಾ ಅವರಿಂದ ವಶಪಡಿಸಿಕೊಂಡ ವಸ್ತುಗಳನ್ನು ಹರಾಜು ಮಾಡುವ ಮೂಲಕ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಖರ್ಚು ಮಾಡಿದ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ಕೋರಿ ನರಸಿಂಹ ಮೂರ್ತಿ ಅವರು ಬೆಂಗಳೂರು ನಗರ ವಿಶೇಷ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

ವಿಶೇಷ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದ್ದರೂ ಮುನ್ಸಿಪಲ್ ಸಿವಿಲ್ ಸೆಷನ್ಸ್ ನ್ಯಾಯಾಲಯವು ಕರ್ನಾಟಕ ಸರ್ಕಾರ ಮತ್ತು ನ್ಯಾಯಾಂಗ ಇಲಾಖೆಗೆ ತಕ್ಷಣ ವಿಶೇಷ ವಕೀಲರನ್ನು ನೇಮಿಸಬೇಕು, ಆದ್ಯತೆಯನ್ನಾಗಿ ಮೇಲ್ಮನವಿ ಪ್ರಕರಣದಲ್ಲಿ ಎಲ್ಲಾ ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಕ್ರಮಕೈಗೊಳ್ಳುವಂತೆ ಇತ್ತೀಚೆಗೆ ಆದೇಶಿಸಿದೆ. ಅದರ ಆಧಾರದ ಮೇಲೆ, ಕರ್ನಾಟಕ ಸರ್ಕಾರ ಇತ್ತೀಚೆಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಎಸ್ ಜವಳಿ ಅವರನ್ನು ಆಸ್ತಿಗಳ ವಿಲೇವಾರಿ ನಿರ್ವಹಿಸಲು ನೇಮಕ ಮಾಡಿದೆ.