ಫೆಬ್ರವರಿಯೊಳಗೆ 8 ಕೋಟಿ ಕೊವಾಕ್ಸಿನ್ ಡೋಸ್‌ಗಳನ್ನು ಪೂರೈಸುವ ಗುರಿ ಹೊಂದಿದ ಭಾರತ್ ಬಯೋಟೆಕ್
ಪ್ರಸ್ತುತ 5-6 ಕೋಟಿ ಡೋಸ್ ಪೂರೈಸುತ್ತಿರುವ ಕಂಪನಿಯು ಫೆಬ್ರವರಿಯಿಂದ ಪ್ರತಿ ತಿಂಗಳು 7-8 ಕೋಟಿ ಡೋಸ್ ಲಸಿಕೆಗಳನ್ನು ಪೂರೈಸಲಿದೆ.
ದೆಹಲಿ: ಸರ್ಕಾರವು ಹದಿಹರೆಯದವರಿಗೆ ವ್ಯಾಕ್ಸಿನೇಷನ್ ಡ್ರೈವ್ (vaccination drive) ಪ್ರಾರಂಭಿಸುವುದರೊಂದಿಗೆ 2022 ರಲ್ಲಿ 100 ಕೋಟಿ ಡೋಸ್ ಕೊವಾಕ್ಸಿನ್ ಅನ್ನು ಮುಟ್ಟುವ ಗುರಿಯೊಂದಿಗೆ, ಭಾರತ್ ಬಯೋಟೆಕ್(Bharat Biotech) ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ಹೊಸ ಯೋಜನೆಯೊಂದಿಗೆ ಸಿದ್ಧವಾಗಿದೆ. ಪ್ರಸ್ತುತ 5-6 ಕೋಟಿ ಡೋಸ್ ಪೂರೈಸುತ್ತಿರುವ ಕಂಪನಿಯು ಫೆಬ್ರವರಿಯಿಂದ ಪ್ರತಿ ತಿಂಗಳು 7-8 ಕೋಟಿ ಡೋಸ್ ಲಸಿಕೆಗಳನ್ನು ಪೂರೈಸಲಿದೆ. ಹೈದರಾಬಾದ್ ಮತ್ತು ಅಂಕಲೇಶ್ವರ ಘಟಕಗಳು ಲಸಿಕೆಗಳನ್ನು ತಯಾರಿಸಿದರೆ, ಬೆಂಗಳೂರು ಮತ್ತು ಪುಣೆ ಘಟಕಗಳು ಲಸಿಕೆಗಳ ಮುಖ್ಯ ಅಂಶವಾಗಿರುವ ಔಷಧಿ ಪದಾರ್ಥ ಅಥವಾ ಸಕ್ರಿಯ ಔಷಧೀಯ ಪದಾರ್ಥಗಳನ್ನು (API ) ತಯಾರಿಸುತ್ತವೆ. “ಹದಿಹರೆಯದವರಿಗೆ ಲಸಿಕೆ ಚಾಲನೆ ಸೇರಿದಂತೆ ಭಾರತದ ವ್ಯಾಕ್ಸಿನೇಷನ್ ಡ್ರೈವ್‌ಗೆ ಕೊಡುಗೆ ನೀಡಲು ಭಾರತ್ ಬಯೋಟೆಕ್ ತನ್ನ ಕಾರ್ಯತಂತ್ರಗಳೊಂದಿಗೆ ಸಿದ್ಧವಾಗಿದೆ ಎಂದು ಕಂಪನಿಯ ವಕ್ತಾರರು ನ್ಯೂಸ್18 ಡಾಟ್ ಕಾಮ್ಗೆ ತಿಳಿಸಿದರು. ಕಂಪನಿಯು ತನ್ನ ಸೌಲಭ್ಯಗಳನ್ನು ಹೂಡಿಕೆ ಮಾಡುವುದು, ನವೀಕರಿಸುವುದು ಮತ್ತು ವಿಸ್ತರಿಸುವುದನ್ನು ಮುಂದುವರೆಸಿದೆ ಎಂದು ಹೇಳಿದೆ.
“ನಾವು ನಮ್ಮ ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ ಮತ್ತು ಈ ಕಾರ್ಯಕ್ರಮವನ್ನು ಬೆಂಬಲಿಸಲು ಸಿದ್ಧರಿದ್ದೇವೆ. ಮೊದಲೇ ಹೇಳಿದಂತೆ, ತೆಲಂಗಾಣದ ಹೈದರಾಬಾದ್, ಕರ್ನಾಟಕದ ಮಾಲೂರು ಮತ್ತು ಗುಜರಾತ್‌ನ ಅಂಕಲೇಶ್ವರ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೈವಿಕ-ಸುರಕ್ಷತಾ ಮಟ್ಟ-3 ಉತ್ಪಾದನಾ ಸೌಲಭ್ಯಗಳಲ್ಲಿ ಬಹುವಿಧದಲ್ಲಿ ಉತ್ಪಾದನಾ ಪ್ರಮಾಣವನ್ನು ಹಂತಹಂತವಾಗಿ ಕೈಗೊಳ್ಳಲಾಗಿದೆ. ಉತ್ಪಾದನೆಗಳು ನಡೆಯುತ್ತಿವೆ. ವಾರ್ಷಿಕವಾಗಿ 1.0 ಬಿಲಿಯನ್ ಡೋಸ್ ಕೊವಾಕ್ಸಿನ್ ಅನ್ನು ಮುಟ್ಟುವ ಗುರಿ ಹೊಂದಿದ್ದಾವೆ ಎಂದು ವಕ್ತಾರರು ಹೇಳಿದರು.
ಹದಿಹರೆಯದವರಿಗೆ 15 ಕೋಟಿ ಡೋಸ್‌ಗಳ ಅಗತ್ಯವಿದೆ ಸುಮಾರು 7.5 ಕೋಟಿ ಜನಸಂಖ್ಯೆಯನ್ನು ಹೊಂದಿರುವ 15-18 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ಭಾರತಕ್ಕೆ ಸುಮಾರು 15 ಕೋಟಿ ಡೋಸ್‌ಗಳು ಬೇಕಾಗುತ್ತವೆ ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ವ್ಯಕ್ತಿಗಳು ಹೇಳಿದ್ದಾರೆ . ಕಳೆದ ವರ್ಷ ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು 15.71 ಕೋಟಿ ಕೊವಾಕ್ಸಿನ್ ಡೋಸ್‌ಗಳನ್ನು ವಯಸ್ಕರಿಗೆ ನೀಡಲಾಗಿದೆ. ಆದಾಗ್ಯೂ, ಕಂಪನಿಯು ಲಸಿಕೆ ಕೇಂದ್ರಗಳಲ್ಲಿ ತಕ್ಷಣದ ದಟ್ಟಣೆ ನಿರೀಕ್ಷಿಸಬಾರದು ಎಂದು ಮೂಲಗಳು ತಿಳಿಸಿವೆ.
“ಅರ್ಹ ಜನಸಂಖ್ಯೆಯ ಶೇ 50 ರಷ್ಟು ಜನರಿಗೆ ಎರಡು ಬಾರಿ ಲಸಿಕೆ ಹಾಕಲು ವಯಸ್ಕ ಲಸಿಕೆ ಕಾರ್ಯಕ್ರಮವನ್ನು ಪೂರ್ಣ ವರ್ಷ ತೆಗೆದುಕೊಂಡಿದೆ. ಮುಂದಿನ 3-4 ತಿಂಗಳ ಅವಧಿಯಲ್ಲಿ ಅರ್ಹ ಮಕ್ಕಳ ಜನಸಂಖ್ಯೆಗೆ ಲಸಿಕೆಯನ್ನು ನೀಡಲಾಗುವ ಮಕ್ಕಳಿಗೆ ಲಸಿಕೆ ಕಾರ್ಯಕ್ರಮವು ಇದೇ ಮಾರ್ಗದಲ್ಲಿ ಮುಂದುವರಿಯುತ್ತದೆ.ಉತ್ಪಾದನಾ ಸಾಮರ್ಥ್ಯವು ಈಗಾಗಲೇ 7-8 ಕೋಟಿ ಡೋಸ್‌ಗಳನ್ನು ತಲುಪಿದೆ. ಆದರೆ ಫೆಬ್ರವರಿ-ಮಾರ್ಚ್‌ನಲ್ಲಿ ಇದು ನೀಡಿಕೆಗೆ ಲಭ್ಯವಾಗಿರುತ್ತದೆ.