ಹೈದರಾಬಾದ್: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಜತೆಗೆ ಲಸಿಕೆ ಅಭಾವವೂ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿ ಇಡೀ ವ್ಯವಸ್ಥೆಯನ್ನೇ ಹೈರಾಣಾಗಿಸಿಬಿಟ್ಟಿದೆ. ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಹಾಗೂ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಗಳ ಪೂರೈಕೆಯಲ್ಲಿ ಕೊರತೆ ಕಂಡುಬಂದಿದ್ದರಿಂದ ಹಲವೆಡೆ ಜನರು ಎರಡನೇ ಡೋಸ್ ಲಸಿಕೆ ಪಡೆಯುವುದಕ್ಕೆ ಪರದಾಡುವಂತಾಗಿತ್ತು. ಇದೀಗ ಹಂತಹಂತವಾಗಿ ಈ ಸಮಸ್ಯೆಯನ್ನು ನಿವಾರಿಸಲು ಲಸಿಕೆ ಉತ್ಪಾದಕಾ ಸಂಸ್ಥೆಗಳು ಪ್ರಯತ್ನಿಸುತ್ತಿದ್ದು, ಅವಶ್ಯಕತೆಗೆ ಅನುಗುಣವಾಗಿ ಲಸಿಕೆ ಒದಗಿಸಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆಯ ಸಹ ಸಂಸ್ಥಾಪಕಿ ಸುಚಿತ್ರಾ ಎಲ್ಲಾ ಟ್ವೀಟ್ ಮೂಲಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, 30 ದಿನಗಳೊಳಗೆ 30 ನಗರಗಳಿಗೆ ಕೊವ್ಯಾಕ್ಸಿನ್ ಲಸಿಕೆ ತಲುಪಿಸಿರುವುದಾಗಿ ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು 30 ದಿನಗಳೊಳಗೆ ದೇಶದ30 ನಗರಗಳಿಗೆ ತಲುಪಿಸಲಾಗಿದೆ. ಕೊರೊನಾ ಕಾರಣದಿಂದ ಅನೇಕ ಉದ್ಯೋಗಿಗಳು ರಜೆಯಲ್ಲಿದ್ದರೂ ಲಸಿಕೆ ಉತ್ಪಾದನೆಗೆ ತಡೆ ಉಂಟಾಗದಂತೆ ಕಾರ್ಯ ನಿರ್ವಹಿಸಲಾಗಿದೆ. ನಮ್ಮ ಸಂಸ್ಥೆಯ ಸಿಬ್ಬಂದಿ ಕೆಲಸಕ್ಕೆ ಬದ್ಧರಾಗಿ ಲಾಕ್ಡೌನ್ ನಡುವೆಯೂ ಅಹರ್ನಿಶಿ ದುಡಿಯುತ್ತಿದ್ದಾರೆ. ಆ ಮೂಲಕ ದೇಶದಲ್ಲಿ ಹೆಚ್ಚೆಚ್ಚು ಲಸಿಕೆ ವಿತರಣೆ ಆಗುವಂತೆ ಪ್ರಯತ್ನಿಸುತ್ತಿದ್ದಾರೆ. ಇವರಿಗೂ ಮನೆ, ಕುಟುಂಬ ಇವೆ. ಕೆಲವರು ಕ್ವಾರಂಟೈನ್ ಆಗಿದ್ದಾರೆ, ಇನ್ನು ಕೆಲವರು ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಪ್ರಾರ್ಥನೆ ಅವರೊಂದಿಗಿರಲಿ ಎಂದು ಸುಚಿತ್ರಾ ಎಲ್ಲಾ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.
ಕಳೆದೊಂದು ವಾರದಲ್ಲಿ ಭಾರತ್ ಬಯೋಟೆಕ್ ಗುಜರಾತ್ನಲ್ಲಿರುವ ತನ್ನ ಇನ್ನೊಂದು ಘಟಕದ ಸಹಾಯದೊಂದಿಗೆ 20 ಕೋಟಿ ಡೋಸ್ ಹೆಚ್ಚುವರಿ ಲಸಿಕೆ ಉತ್ಪಾದಿಸಿರುವುದಾಗಿ ತಿಳಿಸಿದೆ. ಕರ್ನಾಟಕದಲ್ಲಿ ಮೈಸೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಒಟ್ಟು 30 ನಗರಗಳಿಗೆ ಭಾರತ್ ಬಯೋಟೆಕ್ ಸಂಸ್ಥೆ ಕಳೆದ 30 ದಿನಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಪೂರೈಸಿದೆ.
COVAXIN reaches 30 cities within 30 day??All Our employees are committed, working 24×7 thru lockdowns for the country’s immunisation – pls send your prayers to their families,Some are still quarantined & off work. ???????↔️5️⃣ft. pic.twitter.com/dfmnNGREbo
— suchitra ella (@SuchitraElla) May 25, 2021
ಇದನ್ನೂ ಓದಿ:
ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ ಭಾರತ್ ಬಯೋಟೆಕ್
WHO ಪಟ್ಟಿಯಲಿಲ್ಲ ಕೊವ್ಯಾಕ್ಸಿನ್.. ಲಸಿಕೆಗೆ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ, ಭಾರತ್ ಬಯೋಟೆಕ್ ಸರ್ಕಸ್