Breaking News: ಗುರುಗ್ರಾಮ​ದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 03, 2022 | 11:37 AM

ಗುರುಗ್ರಾಮ್ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಗುರುಗ್ರಾಮ್ ಕಟ್ಟಡ ಕೆಡವುವ ವೇಳೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

Breaking News: ಗುರುಗ್ರಾಮ​ದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು
Big Breaking: Two workers killed in Gurugram building collapse
Follow us on

ಗುರುಗ್ರಾಮ್: ಗುರುಗ್ರಾಮ್ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಗುರುಗ್ರಾಮ್ ಕಟ್ಟಡ ಕೆಡವುವ ವೇಳೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಗುರುಗ್ರಾಮ್‌ನ ಹಳೆಯ ಕಾರ್ಖಾನೆಯನ್ನು ಕೆಡವುವ ಸಮಯದಲ್ಲಿ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಉದ್ಯೋಗ್ ವಿಹಾರ್ ಹಂತ 1ರಲ್ಲಿ ಸುಮಾರು 8 ಗಂಟೆಗೆ ಹನ್ನೆರಡು ಕಾರ್ಮಿಕರು ಹಳೆಯ ಕಾರ್ಖಾನೆಯ ಕಟ್ಟಡವನ್ನು ಕೆಡವುವ ಕೆಲಸವನ್ನು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸೆಪ್ಟೆಂಬರ್ 26 ರಿಂದ ಸೈಟ್‌ನಲ್ಲಿ ನೆಲಸಮ ಕಾರ್ಯ ನಡೆಯುತ್ತಿದ್ದು, ಇಂದಿನವರೆಗೂ ಮೂರು ಅಂತಸ್ತಿನ ಕಾರ್ಖಾನೆಯ ಎರಡು ಮಹಡಿಗಳನ್ನು ಕೆಡವುವ ಕೆಲಸ ಮಾಡಲಾಗಿದೆ. ಕಟ್ಟಡದ ಅಂತಿಮ ಮಹಡಿ ಕುಸಿದಾಗ ಕೆಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು.

ಒಟ್ಟು ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕುಸಿದು ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಸಾವನ್ನಪ್ಪಿದ್ದಾರೆ.

ಹೆಚ್ಚಿನ ಮಾಹಿತಿ ನೀಡಲಾಗುವುದು

Published On - 11:22 am, Mon, 3 October 22