Assembly By Elections 2022: ನವೆಂಬರ್ 3ರಂದು ಆರು ರಾಜ್ಯಗಳ ವಿಧಾನಸಭಾ ಉಪಚುನಾವಣೆ , ನ.6ರಂದು ಫಲಿತಾಂಶ ಪ್ರಕಟ
ಮುಂದಿನ ತಿಂಗಳು ಆರು ರಾಜ್ಯಗಳ ವಿಧಾನಸಭಾ ಉಪಚುನಾವಣೆ ನಡೆಲಾಗುವುದು ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ. ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ ನಡೆಸಿ, ನವೆಂಬರ್ 6 ರಂದು ಫಲಿತಾಂಶ ಪ್ರಕಟ ಮಾಡಲಿದೆ.
ಮುಂದಿನ ತಿಂಗಳು ಆರು ರಾಜ್ಯಗಳ ವಿಧಾನಸಭಾ ಉಪಚುನಾವಣೆ (By Poll) ನಡೆಲಾಗುವುದು ಎಂದು ಭಾರತದ ಚುನಾವಣಾ ಆಯೋಗ (Election Commission) ತಿಳಿಸಿದೆ. ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಉಪಚುನಾವಣೆ ನಡೆಸಿ, ನವೆಂಬರ್ 6 ರಂದು ಫಲಿತಾಂಶ ಪ್ರಕಟ ಮಾಡಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರ, ಬಿಹಾರ, ಹರ್ಯಾಣ, ತೆಲಂಗಾಣ, ಉತ್ತರ ಪ್ರದೇಶ, ಒಡಿಶಾ ರಾಜ್ಯಗಳಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಬಿಹಾರದಲ್ಲಿನ ಮೊಕಾಮಾ, ಗೋಪಾಲಗಂಜ್, ಮಹಾರಾಷ್ಟ್ರದ ಅಂಧೇರಿ ಈಸ್ಟ್ , ಹರ್ಯಾಣದ ಅಧಂಪುರ್, ತೆಲಂಗಾಣದ ಮನುಗೋಡ್,ಉತ್ತರಪ್ರದೇಶದ ಗೋಲ ಗೋರಖ್ನಾಥ್ ಮತ್ತು ಒಡಿಶಾದ ಧಾಮ್ ನಗರ್ನಲ್ಲಿ ಉಪಚುನಾವಣೆ ನಡೆಯಲಿದೆ .ಈ ಕ್ಷೇತ್ರದಲ್ಲಿಶಾಸಕ ಸ್ಥಾನ ಖಾಲಿ ಇರುವ ಕಾರಣ ಉಪಚುನಾವಣೆ ನಡೆಸಲಾಗುತ್ತಿದೆ. ಮೊಕಾಮಾದ ಅಂದಿನ ಶಾಸಕ ರಾಷ್ಟ್ರೀಯ ಜನತಾ ದಳದ (RJD) ಅನಂತ್ ಕುಮಾರ್ ಸಿಂಗ್ ಅವರನ್ನು ಪ್ರಕರಣವೊಂದರಲ್ಲಿ ಅಪರಾಧಿ ಎಂದು ಘೋಷಿಸಿದ ನಂತರ ಜುಲೈನಲ್ಲಿ ಅನರ್ಹಗೊಳಿಸಲಾಯಿತು. ಗೋಪಾಲಗಂಜ್ ಕ್ಷೇತ್ರವನ್ನು ಹೊಂದಿದ್ದ ಬಿಜೆಪಿಯ ಸುಭಾಷ್ ಸಿಂಗ್ ಅವರು ಆಗಸ್ಟ್‌ನಲ್ಲಿ ನಿಧನರಾದ ನಂತರ ಅಲ್ಲಿ ಸೀಟು ಖಾಲಿಯಾಗಿ ಉಳಿದಿದೆ.
ಅಂಧೇರಿ ಈಸ್ಟ್ ವಿಧಾನಸಭಾ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ ಶಿವಸೇನಾದ ರಮೇಶ್ ಲಾಟ್ಕೆ ಅವರು ನಿಧನರಾದ ನಂತರ ಸೀಟು ಖಾಲಿಯಾಗಿತ್ತು.ಹರ್ಯಾಣದಲ್ಲಿ ಕುಲದೀಪ್ ಬಿಷ್ಣೋಯಿ ಅವರ ರಾಜೀನಾಮೆಯಿಂದಾಗಿ ಅಧಂಪುರ ಕ್ಷೇತ್ರದಲ್ಲಿ ಸೀಟು ಖಾಲಿ ಉಳಿದಿತ್ತು.
ಏತನ್ಮಧ್ಯೆ, ಚುನಾವಣಾ ಸಮಿತಿಯು ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಉಪಚುನಾವಣೆಯ ಗೆಜೆಟ್ ಅಧಿಸೂಚನೆಯನ್ನು ಅಕ್ಟೋಬರ್ 7 ರಂದು ಹೊರಡಿಸಲಾಗುವುದು ಮತ್ತು ಅಕ್ಟೋಬರ್ 14 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಅಕ್ಟೋಬರ್ 17 ಅಥವಾ ಮೊದಲು ಹಿಂಪಡೆಯಬಹುದು. ಉಪಚುನಾವಣೆಗಳನ್ನು ನವೆಂಬರ್ 7 ರ ಮೊದಲು ಪೂರ್ಣಗೊಳಿಸಬೇಕು.
ಈ ಚುನಾವಣೆಗಳಿಗೆ ವಿದ್ಯುನ್ಮಾನ ಮತಯಂತ್ರಗಳನ್ನು (EVM) ಬಳಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. “ಸಾಕಷ್ಟು ಸಂಖ್ಯೆಯ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು (ಮತದಾರರ ದೃಢೀಕರಿಸಿದ ಪೇಪರ್ ಆಡಿಟ್ ಟ್ರಯಲ್) ಲಭ್ಯಗೊಳಿಸಲಾಗಿದೆ ಮತ್ತು ಈ ಯಂತ್ರಗಳ ಸಹಾಯದಿಂದ ಚುನಾವಣೆಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಸಿಐ ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಹೇಳಿದ್ದಾರೆ.
ಚುನಾವಣಾ ಆಯೋಗ ಪ್ರಕಾರ, ಮತದಾರರ ಗುರುತಿನ ಪರಿಶೀಲನೆಗಾಗಿ ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಅಥವಾ ಮತದಾರರ ಕಾರ್ಡ್ ಪ್ರಾಥಮಿಕ ದಾಖಲೆಯಾಗಿದೆ. ಆದಾಗ್ಯೂ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನಂತಹ ಇತರ ಅಧಿಕೃತ ಗುರುತಿನ ದಾಖಲೆಗಳನ್ನು ಸಹ ಸ್ವೀಕರಿಸಲಾಗುತ್ತದೆ.
Published On - 12:22 pm, Mon, 3 October 22