ಮಾದಕದ್ರವ್ಯ ಕಳ್ಳಸಾಗಣೆದಾರ ಅಮ್ರಿಕ್ ಸಿಂಗ್ ಪಟಿಯಾಲ ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ ಭಾರತ ಸೇನೆಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ನೀಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಈತನನ್ನು ನೋಡಲು ಆಗಾಗ ಕಾರಾಗೃಹಕ್ಕೆ ಬರುತ್ತಿದ್ದರು ಎನ್ನಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿಯು ಅಮರಿಕ್ ಸಿಂಗ್ನನ್ನು ತನ್ನ ಸೋದರಳಿಯ ಎಂದು ಹೇಳಿದ್ದರು. ಈ ಅಧಿಕಾರಿ ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ನಡುವಿನ ಸಂಬಂಧದ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಪಂಜಾಬ್ ಪೊಲೀಸರು ಇಂದು ಆರೋಪಿಯ ವಿಚಾರಣೆ ನಡೆಸಲಿದ್ದಾರೆ, ಅಮ್ರಿಕ್ ಸಿಂಗ್ ವಿರುದ್ಧ ಪ್ರಕರಣ ದಾಖಲಾದ ನಂತರ ಪೊಲೀಸರು ಜೈಲಿನಲ್ಲಿ ಅವರನ್ನು ಭೇಟಿಯಾದವರ ಬಗ್ಗೆ ಜೈಲು ಆಡಳಿತದಿಂದ ಮಾಹಿತಿ ಕೇಳಿದ್ದು, ಕೆಲ ದಿನಗಳ ಹಿಂದೆ ನಿವೃತ್ತ ಐಎಎಸ್ ಅಧಿಕಾರಿ ಅವರನ್ನು ಭೇಟಿ ಮಾಡಿರುವುದು ಬಹಿರಂಗವಾಗಿದೆ. ಅವರನ್ನು ಭೇಟಿಯಾಗಲು ಬರುವವರನ್ನೂ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಉಪ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಮ್ರಿಕ್ ಸಿಂಗ್ ಕೂಡ ಜೈಲಿನೊಳಗೆ ಮೊಬೈಲ್ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗುತ್ತಿದೆ. ಭಯೋತ್ಪಾದಕರು ಮತ್ತು ಆತನ ಜಾಲವನ್ನು ಬಳಸಿಕೊಂಡು ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಐಎಸ್‌ಐ ಏಜೆಂಟ್ ಶೇರ್ ಖಾನ್‌ಗೆ ರವಾನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತಷ್ಟು ಓದಿ: ಹಿಂಡಲಗಾ ಜೈಲಿನ ಅಕ್ರಮ ಬಯಲು ಮಾಡಿದ ಟಿವಿ9; ಕಾಸಿದ್ರೆ ಜೈಲಲ್ಲೂ ರಾಜನಂತೆ ಮೆರೆಯಬಹುದು
ಮಾದಕವಸ್ತು ಕಳ್ಳಸಾಗಣೆದಾರ ಅಮ್ರಿಕ್ ಸಿಂಗ್ ಕಳೆದ ಒಂದೂವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಜೂನ್ನಲ್ಲಿ ಆತನ ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು. ಈತ ವಾಟ್ಸ್ ಆ್ಯಪ್ ಮೂಲಕ ಐಎಸ್ ಐ ಏಜೆಂಟ್ ಗೆ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಿದ್ದ ಎಂಬುದು ವಿಧಿವಿಜ್ಞಾನ ತನಿಖೆಯಿಂದ ತಿಳಿದುಬಂದಿದೆ.
ಇದಾದ ಬಳಿಕ ಸೆ.1ರಂದು ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿ ಮೊಬೈಲ್ ಫೋನ್ ಹೇಗೆ ಸಿಕ್ಕಿತು, ಐಎಸ್‌ಐ ಸಂಪರ್ಕಕ್ಕೆ ಬಂದಿದ್ದು ಹೇಗೆ ಎಂಬುದರ ಕುರಿತು ಪ್ರಶ್ನೆ ಮಾಡಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Mon, 4 September 23