ವಲಸೆ ಕಾಮಿರ್ಕರಿಗೆ ಉತ್ತಮ ವೇದಿಕೆ ಒದಗಿಸಲು ಇದೀಗ ಹಣಕಾಸು ಸಚಿವಾಲಯ ಮುಂದಾಗಿದೆ. ವಲಸೆ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಮೊದಲ ರಾಷ್ಟ್ರೀಯ ದತ್ತಾಂಶ ಸಂಗ್ರಹಣೆ (ಡಾಟಾಬೇಸ್) ಮಾಡಲು ಮತ್ತು ಸರ್ಕಾರದ ನಿರ್ದಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನ್ಯಾಷನಲ್ ಡಾಟಾಬೇಸ್ ಆಫ್ ಅನ್ ಆರ್ಗನೈಸ್ಡ್ ವರ್ಕಸ್ (ಎನ್ ಡಿ ಯು ಡಬ್ಲು- NDUW) ಅನ್ನು ಅಭಿವೃದ್ದಿಪಡಿಸುವ ಮೂಲಕ ವಲಸೆ ಕಾರ್ಮಿಕರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರ ಮಾಹಿತಿಗಳನ್ನು ಇದು ದಾಖಲಿಸುತ್ತದೆ. ಇದು ತಮ್ಮ ತಮ್ಮ ಸಾಮರ್ಥ್ಯವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಸಹಾಯಕವಾಗಿದೆ. ಇದರಿಂದ ಉದ್ಯೋಗ ನೀಡುವವರು ಸೂಕ್ತ ವ್ಯಕ್ತಿಯನ್ನು ಹುಡುಕಲು ಸುಲಭವಾಗುತ್ತದೆ. ಈ ಯೋಜನೆಯು ಜಾರಿಪಡಿಸುವುದಕ್ಕಾಗಿ ಸುಮಾರು 650 ಕೋಟಿ ರೂ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.
ಕಾರ್ಮಿಕರ ಕುರಿತು ಯಾವುದೇ ಡೇಟಾಬೇಸ್ ಇಲ್ಲದಿರುವುದರಿಂದ ಕೋವಿಡ್ ಸಮಯದಲ್ಲಿ ದೊಡ್ಡ ಸಮಸ್ಯೆಯುಂಟಾಗಿತ್ತು. ದಾಖಲೆಗಳಿಲ್ಲದ ಕಾರ್ಮಿಕರು ಕೊರೊನಾ ವೇಳೆ ತಮ್ಮ ರಾಜ್ಯಗಳಿಗೆ ಹಿಂದಿರುಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಡಾಟಾಬೇಸ್ ರಚನೆಯಿಂದ ಹೆಚ್ಚು ಉಪಯೋಗ ಆಗುವುದರಲ್ಲಿ ಬೇರೆ ಮಾತಿಲ್ಲ. ಈ ಯೋಜನೆ ಬಹು ಮುಖ್ಯವಾಗಿ ಕಾರ್ಮಿಕರು ಆರೋಗ್ಯ, ಸುರಕ್ಷತೆ ಹಾಗೂ ಸರ್ಕಾರಿ ಸಂಬಂಧಿತ ಯೋಜನೆಗಳನ್ನು ಪಡೆಯಲು ಸೂಕ್ತವಾಗಿದೆ.
Published On - 5:40 pm, Wed, 11 November 20