Bihar Election Results 2025 LIVE: ಬಿಹಾರ ಚುನಾವಣೆಯಲ್ಲಿ ಎನ್​ಡಿಎಗೆ ಐತಿಹಾಸಿಕ ಜಯ; 10ನೇ ಬಾರಿ ಸಿಎಂ ಆಗಲಿದ್ದಾರೆ ನಿತೀಶ್ ಕುಮಾರ್

Bihar Assembly Election Results 2025 LIVE Counting and Updates in Kannada: ಬಿಹಾರಕ್ಕೆ ಇಂದು ನಿರ್ಣಾಯಕ ದಿನ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಿದೆ. ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎಗೆ ಮಹಿಳೆಯರು ಮತ್ತು ಒಬಿಸಿಗಳಿಂದ ಹೆಚ್ಚು ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತವೆ. ಈ ಬಾರಿಯೂ ಬಿಹಾರದಲ್ಲಿ ಎನ್​ಡಿಎ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವಾಗಿದೆ.

Bihar Election Results 2025 LIVE: ಬಿಹಾರ ಚುನಾವಣೆಯಲ್ಲಿ ಎನ್​ಡಿಎಗೆ ಐತಿಹಾಸಿಕ ಜಯ; 10ನೇ ಬಾರಿ ಸಿಎಂ ಆಗಲಿದ್ದಾರೆ ನಿತೀಶ್ ಕುಮಾರ್
ಬಿಹಾರ ಚುನಾವಣೆ ಲೈವ್
Updated By: ಸುಷ್ಮಾ ಚಕ್ರೆ

Updated on: Nov 14, 2025 | 8:23 PM

ಪಾಟ್ನಾ, ನವೆಂಬರ್ 14: ಬಿಹಾರ ವಿಧಾನಸಭೆ (Bihar Assembly Election) ಯ ಎರಡು ಹಂತದ ಚುನಾವಣೆಗಳು ಮುಕ್ತಾಯಗೊಂಡಿದ್ದು, ಇಂದು ಫಲಿತಾಂಶ ಹೊರಬೀಳಲಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಿದೆ. ನಿತೀಶ್ ಕುಮಾರ್ ಒಂದೆಡೆ ವಿಜಯವನ್ನು ಘೋಷಿಸಿದ್ದರೆ, ಮತ್ತೊಂದೆಡೆ ತೇಜಸ್ವಿ ಯಾದವ್ ಕೂಡ ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಆರ್​ಜೆಡಿ ಹೀನಾಯ ಸೋಲನ್ನು ಅನುಭವಿಸುವುದು ಖಚಿತವಾಗಿದೆ.

ಬಿಹಾರದಲ್ಲಿ ಎನ್​ಡಿಎ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಎನ್​ಡಿಎ 207 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎಗೆ ಮಹಿಳೆಯರು ಮತ್ತು ಒಬಿಸಿಗಳಿಂದ ಹೆಚ್ಚು ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತವೆ. ನಿತೀಶ್ ಕುಮಾರ್ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೋ ಅಥವಾ ತೇಜಸ್ವಿ ಯಾದವ್ ಬಿಹಾರದ ಚುಕ್ಕಾಣಿ ಹಿಡಿಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಮೊದಲು ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ.

ಇದಾದ ನಂತರ, ಇವಿಎಂ ಎಣಿಕೆ ಪ್ರಾರಂಭವಾಗುತ್ತದೆ. 243 ಸ್ಥಾನಗಳಲ್ಲಿ 122 ಸ್ಥಾನಗಳ ಬಹುಮತದ ಅಗತ್ಯವಿದೆ. ಮತ ಎಣಿಕೆಗಾಗಿ ಆಡಳಿತವು ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ. ಚುನಾವಣಾ ಆಯೋಗವು ಸಹ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿದೆ.

ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಿತು. ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 18 ಜಿಲ್ಲೆಗಳ 121 ಸ್ಥಾನಗಳು ಮತ್ತು ನವೆಂಬರ್ 11 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ 20 ಜಿಲ್ಲೆಗಳ 122 ಸ್ಥಾನಗಳು ಸೇರಿವೆ. ರಾಜ್ಯದಲ್ಲಿ ಶೇ. 67.13 ರಷ್ಟು ಮತದಾನ ದಾಖಲಾಗಿದ್ದು, ಇದು 1951 ರ ನಂತರದ ಅತ್ಯಧಿಕ ಮತದಾನವಾಗಿದೆ.

ಮಹಿಳಾ ಮತದಾರರ ಸಂಖ್ಯೆ ಶೇ. 71.6 ರಷ್ಟಿದ್ದು, ಇದು ರಾಜ್ಯದಲ್ಲಿ ಇದುವರೆಗಿನ ಅತ್ಯಧಿಕ ಮತದಾನವಾಗಿದೆ. ಈ ಬಾರಿ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ನಂತರ, ಮರು ಮತದಾನದ ಅಗತ್ಯವಿರಲಿಲ್ಲ. ಚುನಾವಣಾ ಆಯೋಗವು ಇದನ್ನು ಪಾರದರ್ಶಕ ಮತ್ತು ನ್ಯಾಯಯುತ ಚುನಾವಣೆಯ ಪುರಾವೆ ಎಂದು ಬಣ್ಣಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

LIVE NEWS & UPDATES

The liveblog has ended.
  • 14 Nov 2025 07:22 PM (IST)

    ಮತ್ತೊಂದು ಬಾರಿ ಎನ್​ಡಿಎ ಸರ್ಕಾರ; ಮೋದಿ

    ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎನ್‌ಡಿಎ ಜನರ ಸೇವಕ. ಹೀಗಾಗಿಯೇ ಜನರು ಮತ್ತೊಂದು ಬಾರಿ ಎನ್​ಡಿಎ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಹುಮತ ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಇಂದು ಎಲ್ಲ ದಾಖಲೆಗಳೂ ಧೂಳೀಪಟವಾಗಿದೆ. ಬಿಹಾರದ ಜನರು ಅಭಿವೃದ್ಧಿಗಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

  • 14 Nov 2025 06:26 PM (IST)

    ಬಿಹಾರದಲ್ಲಿ ಮೋದಿ-ನಿತೀಶ್ ಜೋಡಿ ಹಿಟ್; ಎನ್​ಡಿಎ ಐತಿಹಾಸಿಕ ಗೆಲುವು

    ಬಿಹಾರ ರಾಜ್ಯದಲ್ಲಿ ಅಧಿಕಾರದಲ್ಲಿ ಉಳಿಯಲು ಎನ್ಡಿಎ ಭರ್ಜರಿ ಬಹುಮತ ಗಳಿಸುವ ನಿರೀಕ್ಷೆಯ ನಂತರ ಬಿಹಾರ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಡಿ (ಯು) ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಟ್ಟಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿದೆ.


  • 14 Nov 2025 05:43 PM (IST)

    ಉತ್ತಮ ಆಡಳಿತ, ಅಭಿವೃದ್ಧಿಗೆ ಸಿಕ್ಕ ಗೆಲುವು; ಪ್ರಧಾನಿ ಮೋದಿ

    ಉತ್ತಮ ಆಡಳಿತ ಗೆದ್ದಿದೆ.

    ಅಭಿವೃದ್ಧಿ ಗೆದ್ದಿದೆ.

    ಜನಪರ ಮನೋಭಾವ ಗೆದ್ದಿದೆ.

    ಸಾಮಾಜಿಕ ನ್ಯಾಯ ಗೆದ್ದಿದೆ.

    2025 ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಐತಿಹಾಸಿಕ ಮತ್ತು ಅಪ್ರತಿಮ ಗೆಲುವಿನೊಂದಿಗೆ ಆಶೀರ್ವದಿಸಿದ್ದಕ್ಕಾಗಿ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಕೃತಜ್ಞತೆಗಳು. ಈ ಜನಾದೇಶವು ಜನರಿಗೆ ಸೇವೆ ಸಲ್ಲಿಸಲು ಮತ್ತು ಬಿಹಾರಕ್ಕಾಗಿ ಕೆಲಸ ಮಾಡಲು ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ.

    ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

  • 14 Nov 2025 04:03 PM (IST)

    ಎನ್​ಡಿಎಗೆ 207 ಸ್ಥಾನಗಳ ಮುನ್ನಡೆ; ಮಹಾಘಟಬಂಧನ್​​ಗೆ ಕೇವಲ 29 ಸೀಟ್

    ಎನ್​ಡಿಎ- 207 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಐತಿಹಾಸಿಕ ಜಯ ಸಾಧಿಸುವುದು ಖಚಿತವಾಗಿದೆ.

  • 14 Nov 2025 02:28 PM (IST)

    Bihar Election Results Live: ಚುನಾವಣಾ ಆಯೋಗದ ಫಲಿತಾಂಶಕ್ಕೆ ಕಾಯೋಣವೆಂದ ಶಶಿ ತರೂರ್

    ಚುನಾವಣಾ ಆಯೋಗವು ಅಧಿಕೃತ ಘೋಷಣೆ ಮಾಡುವವರೆಗೆ ಕಾಯೋಣ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

  • 14 Nov 2025 01:47 PM (IST)

    Bihar Election Results Live: ಇಂದು ಪ್ರಧಾನಿ ಮೋದಿ ಭಾಷಣ

    ಬಿಹಾರದಲ್ಲಿ ಚುನಾವಣಾ ಗೆಲುವಿನ ಬಗ್ಗೆ,  ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • 14 Nov 2025 01:45 PM (IST)

    Bihar Election Results Live: ಅಲಿನಗರ ಅಭ್ಯರ್ಥಿ ಮೈಥಿಲಿ ಗೆಲುವು ಬಹುತೇಕ ಖಚಿತ

    ಅಲಿನಗರ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ ಗೆಲುವು ಬಹುತೇಕ ಖಚಿತವಾಗಿದೆ. ಇದು ನನ್ನ ಜಯವಲ್ಲ ನಿಮ್ಮೆಲ್ಲರ ಜಯ, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದ ಎಂದು ಮೈಥಿಲಿ ಹೇಳಿದ್ದಾರೆ.

  • 14 Nov 2025 01:43 PM (IST)

    Bihar Election Results Live: 200ರ ಗಡಿ ದಾಟಿದ ಎನ್​ಡಿಎ

    ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 200ರ ಗಡಿ ದಾಟಿದೆ

  • 14 Nov 2025 01:37 PM (IST)

    Bihar Election Results Live: ನಿತೀಶ್​ ಕುಮಾರ್ ಮತ್ತೆ ಸಿಎಂ ಆಗಲಿದ್ದಾರೆ: ಜೆಡಿಯು

    ಬಿಹಾರ ಚುನಾವಣೆಯಲ್ಲಿ ಜೆಡಿಯು ಅದ್ಭುತ ಪ್ರದರ್ಶನ ನೀಡಿದೆ. ಪಕ್ಷವು 82 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಫಲಿತಾಂಶಗಳಿಂದ ಹರ್ಷಗೊಂಡಿರುವ ಜೆಡಿಯು, ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಸ್ಪಷ್ಟಪಡಿಸಿದೆ.

     

  • 14 Nov 2025 01:10 PM (IST)

    Bihar Election Results Live: 200ರ ಗಡಿ ದಾಟುವ ಹೊಸ್ತಿಲಿನಲ್ಲಿದೆ ಎನ್​ಡಿಎ

    ಬಿಹಾರ ಚುನಾವಣಾ ಫಲಿತಾಂಶ ಕೆಲವೇ ಕ್ಷಣಗಳಲ್ಲಿ ಪ್ರಕಟವಾಗಲಿದೆ, ಎನ್​ಡಿಎ 200ರ ಡಿ ದಾಟುವ ಹೊಸ್ತಿಲಿನಲ್ಲಿದೆ.

  • 14 Nov 2025 12:47 PM (IST)

    Bihar Election Results Live: ತೇಜಸ್ವಿ ಯಾದವ್​ ಮುನ್ನಡೆ

    ಆರು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ, ತೇಜಸ್ವಿ ಯಾದವ್, ಬಿಜೆಪಿಯ ಸತೀಶ್​ ಕುಮಾರ್​ ಅವರನ್ನು ಹಿಂದಿಕ್ಕಿದ್ದಾರೆ.

  • 14 Nov 2025 12:07 PM (IST)

    Bihar Election Results Live: ವೋಟ್ ಚೋರಿ, ಕಾಂಗ್ರೆಸ್ ಪ್ರತಿಭಟನೆ ಶುರು

    ಎನ್​ಡಿಎಗೆ ಬಹುಮತ ಬರುತ್ತಿದ್ದಂತೆಯೇ ಕಾಂಗ್ರೆಸ್ ಪ್ರತಿಭಟನೆ ಶುರು ಮಾಡಿದೆ.

  • 14 Nov 2025 11:53 AM (IST)

    Bihar Election Results Live: ತೇಜಸ್ವಿ 3,000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆ

    ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ರಾಘೋಪುರದಲ್ಲಿ ಹಿನ್ನಡೆಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್ ಕುಮಾರ್ 3,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.

     

  • 14 Nov 2025 11:52 AM (IST)

    Bihar Election Results Live: ಎಲ್ಲೆಲ್ಲೂ ರಾರಾಜಿಸುತ್ತಿವೆ, ಬಿಹಾರ ಎಂದರೆ ನಿತೀಶ್​ ಕುಮಾರ್ ಎಂಬ ಪೋಸ್ಟರ್​ಗಳು

    ಎನ್‌ಡಿಎ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವುದರಿಂದ, ಪಾಟ್ನಾದಲ್ಲಿ ಬಿಹಾರ ಎಂದರೆ ನಿತೀಶ್ ಕುಮಾರ್ ಎಂದು ಬರೆದಿರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಚುನಾವಣಾ ಆಯೋಗದ ಪ್ರಕಾರ, ಶುಕ್ರವಾರ ಬೆಳಗ್ಗೆ ಆರಂಭವಾದ ಆರಂಭಿಕ ಪ್ರವೃತ್ತಿಗಳು ಪ್ರಾರಂಭವಾಗುತ್ತಿದ್ದಂತೆ, ಆಡಳಿತಾರೂಢ ಎನ್‌ಡಿಎ 191 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, 122 ಸ್ಥಾನಗಳ ಬಹುಮತದ ಗಡಿಯನ್ನು ಮೀರಿದೆ.

     

  • 14 Nov 2025 11:23 AM (IST)

    Bihar Election Result: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಹೇಳಿದ್ದೇನು?

  • 14 Nov 2025 11:21 AM (IST)

    Bihar Election Results Live: ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್​ಗೆ ಹಿನ್ನಡೆ

    ರಾಘೋಪುರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಮಹಾಘಟಬಂಧನ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್​ಗೆ ಹಿನ್ನಡೆಯಾಗಿದೆ.

  • 14 Nov 2025 11:05 AM (IST)

    Bihar Election Results Live: ಜೆಡಿಯು ಮಹಾಘಟಬಂಧನ್​ಗಿಂತ ಮುಂದಿದೆ

    ಬಿಹಾರ ಚುನಾವಣೆಗಳು ಮಹಾಮೈತ್ರಿಕೂಟ ಮತ್ತು ಎನ್‌ಡಿಎ ನಡುವಿನ ಸ್ಪರ್ಧೆಯಾಗಿದ್ದವು, ಆದರೆ ಇಲ್ಲಿ ಜೆಡಿಯು ಮಹಾಮೈತ್ರಿಕೂಟಕ್ಕಿಂತ ಹೆಚ್ಚಿನ ಸಾಧನೆ ತೋರುತ್ತಿದೆ. ನಿತೀಶ್ ಕುಮಾರ್ ಅವರ ಪಕ್ಷವು 70 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಮಹಾಮೈತ್ರಿಕೂಟ 57 ಸ್ಥಾನಗಳಲ್ಲಿ ಮುಂದಿದೆ.

     

     

  • 14 Nov 2025 10:48 AM (IST)

    Bihar Election Results Live: ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಲಖಿಸರಾಯ್‌ನಲ್ಲಿ ಹಿನ್ನಡೆ

    ಬಿಹಾರದ ಲಖಿಸರಾಯ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಮರೇಶ್ ಕುಮಾರ್ ಮುನ್ನಡೆಯಲ್ಲಿದ್ದರೆ, ರಾಜ್ಯದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಪ್ರಸ್ತುತ ಹಿನ್ನಡೆಯಲ್ಲಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಅಮರೇಶ್ ಕುಮಾರ್ 2,852 ಮತಗಳಿಂದ ಮುನ್ನಡೆಯಲ್ಲಿದ್ದರೆ, ಸಿನ್ಹಾ 2,773 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

  • 14 Nov 2025 10:23 AM (IST)

    Bihar Election Results Live: ಬಿಹಾರದ ಅಲಿ ನಗರದಲ್ಲಿ ಬಿಜೆಪಿಯ ಮೈಥಿಲಿ ಠಾಕೂರ್ ಮುನ್ನಡೆ

    ಬಿಹಾರದ ಅಲಿ ನಗರದಲ್ಲಿ ಬಿಜೆಪಿ ಮೈಥಿಲಿ ಠಾಖುರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

  • 14 Nov 2025 10:13 AM (IST)

    Bihar Election Results Live: ರಾಘೋಪುರ್‌ನಲ್ಲಿ ತೇಜಸ್ವಿ ಯಾದವ್ ಮತಗಳಿಂದ ಮುನ್ನಡೆ

    ವೈಶಾಲಿಯ ರಾಘೋಪುರ ಕ್ಷೇತ್ರದಲ್ಲಿ, ಆರ್‌ಜೆಡಿಯ ತೇಜಸ್ವಿ ಯಾದವ್ ಮೊದಲ ಸುತ್ತಿನ ಎಣಿಕೆಯಲ್ಲಿ 4,463 ಮತಗಳನ್ನು ಪಡೆದರೆ, ಬಿಜೆಪಿಯ ಸತೀಶ್ ರೈ 3,570 ಮತಗಳನ್ನು ಪಡೆದರು. ಆರ್‌ಜೆಡಿಯ ಭದ್ರಕೋಟೆಯಾದ ತೇಜಸ್ವಿ ಯಾದವ್ ಪ್ರಸ್ತುತ 893 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

  • 14 Nov 2025 10:09 AM (IST)

    Bihar Election Results Live: ಮಹುವಾದಲ್ಲಿ LJP(RV) ಅಭ್ಯರ್ಥಿ ಸಂಜಯ್ ಕುಮಾರ್ ಮುನ್ನಡೆ

    ಮಹುವಾದಲ್ಲಿ LJP(RV) ಅಭ್ಯರ್ಥಿ ಸಂಜಯ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ, 1409 ಮತಗಳ ಮುನ್ನಡೆಯಲ್ಲಿದ್ದಾರೆ ಸಂಜಯ್ ಕುಮಾರ್ ಸಿಂಗ್, 3ನೇ ಸ್ಥಾನದಲ್ಲಿರುವ ತೇಜ್ ಪ್ರತಾಪ್ ಯಾದವ್, ತೇಜ್ ಪ್ರತಾಪ್ ಯಾದವ್, ಜನಶಕ್ತಿ ಜನತಾ ದಳದ ಮುಖ್ಯಸ್ಥರಾಗಿದ್ದಾರೆ.

  • 14 Nov 2025 10:04 AM (IST)

    Bihar Election Results Live: ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದೇನು?

    ಬಿಹಾರದಲ್ಲಿ ಮಹಾ ಮೈತ್ರಿಕೂಟ ಸರ್ಕಾರ ರಚಿಸುತ್ತಿದೆ ಎಂಬುದು ಒಂದು ಅಥವಾ ಎರಡು ಗಂಟೆಗಳಲ್ಲಿ ಸ್ಪಷ್ಟವಾಗುತ್ತದೆ ಎಂಬ ಸಂಪೂರ್ಣ ಭರವಸೆ ಮತ್ತು ವಿಶ್ವಾಸ ನಮಗಿದೆ: ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ

  • 14 Nov 2025 09:39 AM (IST)

    Bihar Election Results Live: ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗ ಏನು ಹೇಳುತ್ತಿದೆ?

    ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಬಿಜೆಪಿ 21 ಸ್ಥಾನಗಳಲ್ಲಿ, ಜೆಡಿಯು 16, ಆರ್‌ಜೆಡಿ 8, ಎಲ್‌ಜೆಪಿ 4, ಕಾಂಗ್ರೆಸ್ 3 ಮತ್ತು ಸಿಪಿಐ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

  • 14 Nov 2025 09:14 AM (IST)

    Bihar Election Results Live: ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನವೀನ್ ಯಾದವ್ ಮುನ್ನಡೆ

    ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನವೀನ್ ಯಾದವ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

     

  • 14 Nov 2025 09:05 AM (IST)

    Bihar Election Results Live: ಪಾಟ್ನಾದಲ್ಲಿರುವ ಸಿಎಂ ನಿತೀಶ್ ಕುಮಾರ್ ನಿವಾಸದೆದುರಿನ ದೃಶ್ಯ

    ಪಾಟ್ನಾದಲ್ಲಿರುವ ಸಿಎಂ ನಿತೀಶ್ ಕುಮಾರ್ ನಿವಾಸದೆದುರಿನ ದೃಶ್ಯ

  • 14 Nov 2025 09:03 AM (IST)

    Bihar Election Results Live: 120 ಕ್ಷೇತ್ರಗಳಲ್ಲಿ ಎನ್​ಡಿಎ ಮುನ್ನಡೆ

    ಬಿಹಾರ ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಶುರುವಾಗಿದೆ, ಎನ್​ಡಿಎ 120 ಕ್ಷೇತ್ರಗಳಲ್ಲಿ ಮುಂದಿದ್ದರೆ, ಮಹಾಘಟಬಂಧನ್ 100 ಕ್ಷೇತ್ರಗಳಲ್ಲಿ ಮುಂದಿದೆ.

  • 14 Nov 2025 08:46 AM (IST)

    Bihar Election Results Live: ಯಾರ್ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ

    ಜೆಡಿಯುನ ಅಭಿಷೇಕ್ ಆನಂದ್ ಚೆರಿಯಾ ಬಾರಿಯಾರ್‌ಪುರದಿಂದ ಮುನ್ನಡೆ
    ಬಚ್ವಾರಾದಲ್ಲಿ ಬಿಜೆಪಿಯ ಸುರೇಂದ್ರ ಮೆಹ್ತಾ ಮುನ್ನಡೆಯಲ್ಲಿದ್ದಾರೆ
    ತೇಗ್ರಾ ಕ್ಷೇತ್ರದಲ್ಲಿ ಬಿಜೆಪಿಯ ರಜನೀಶ್ ಮುನ್ನಡೆ
    ಜೆಡಿಯುನ ರಾಜ್‌ಕುಮಾರ್ ಸಿಂಗ್ ಮತಿಹಾನಿಯಿಂದ ಮುನ್ನಡೆ
    ಎಲ್‌ಜೆಪಿಯ ಸುರೇಂದ್ರ ವಿವೇಕ್ ಸಾಹೇಬ್‌ಪುರ ಕಮಾಲ್‌ನಿಂದ ಮುನ್ನಡೆ
    ಎಲ್‌ಜೆಪಿಯ ಸಂಜಯ್ ಪಾಸ್ವಾನ್ ಬಕ್ರಿಯಿಂದ ಮುನ್ನಡೆ
    ಮಹುವಾ ಕ್ಷೇತ್ರದಲ್ಲಿ ಜೆಜೆಡಿ ಅಭ್ಯರ್ಥಿ ತೇಜ್ ಪ್ರತಾಪ್ ಯಾದವ್ ಮುನ್ನಡೆ
    ಲಖಿಸರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಮುನ್ನಡೆ
    ಛಾಪ್ರಾದಿಂದ ಛೋಟಿ ಕುಮಾರಿ ಮುಂದಿದ್ದರೆ, ಖೇಸರಿ ಲಾಲ್ ಹಿಂದೆ ಇದ್ದಾರೆ.

  • 14 Nov 2025 08:43 AM (IST)

    Bihar Election Results Live: ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನಿಕಟ ಪೈಪೋಟಿ

    ಎನ್​ಡಿಎ ಮತ್ತು ಮಹಾಮೈತ್ರಿಕೂಟದ ನಡುವಿನ ಅಂತರ ಹೆಚ್ಚಾಗಿದೆ. ಎನ್​ಡಿಎ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಮಹಾಮೈತ್ರಿಕೂಟ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದಾಗ್ಯೂ, ಬಿಜೆಪಿ ಮತ್ತು ಆರ್​ಜೆಡಿ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ತಲಾ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

  • 14 Nov 2025 08:13 AM (IST)

    Bihar Election Results Live: ಅಂಚೆ ಮತ ಎಣಿಕೆಯಲ್ಲಿ ಎನ್​ಡಿಎ ಐದು ಕ್ಷೇತ್ರಗಳಲ್ಲಿ ಮುನ್ನಡೆ

    ಅಂಚೆ ಮತ ಎಣಿಕೆಯಲ್ಲಿ ಎನ್​ಡಿಎ ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಜನ್ ಸುರಾಜ್ ಪಕ್ಷ 2 ಕ್ಷೇತ್ರಗಳಲ್ಲಿ ಮುಂದಿದೆ.

  • 14 Nov 2025 07:59 AM (IST)

    Bihar Election Results Live: ಬಿಹಾರ ಚುನಾವಣೆ ಫಲಿತಾಂಶ, 46 ಮತಗಟ್ಟಗಳಲ್ಲಿ ಮತ ಎಣಿಕೆ ಶುರು

    ಬಿಹಾರ ಚುನಾವಣೆ ಫಲಿತಾಂಶ, 46 ಮತಗಟ್ಟಗಳಲ್ಲಿ ಮತ ಎಣಿಕೆ ಶುರುವಾಗಿದೆ.

  • 14 Nov 2025 07:54 AM (IST)

    Bihar Election Results Live: ವೀಣಾ ದೇವಿ ನಿವಾಸದಲ್ಲಿ ರಸಗುಲ್ಲಾ ಹಾಗೂ ಇತರೆ ಸಿಹಿ ತಿನಿಸುಗಳ ಸಿದ್ಧತೆ

    ಆರ್​ಜೆಡಿ ನಾಯಕಿ ವೀಣಾ ದೇವಿ ನಿವಾಸದಲ್ಲಿ ರಸಗುಲ್ಲಾ ಹಾಗೂ ಸಿಹಿ ತಿನಿಸುಗಳ ಸಿದ್ಧತೆ ನಡೆಸಲಾಗುತ್ತಿದೆ.

  • 14 Nov 2025 07:23 AM (IST)

    Bihar Election Results Live: ಬಿಹಾರದಲ್ಲಿ ನಡೆದಿತ್ತು ಎರಡು ಹಂತಗಳ ಚುನಾವಣೆ

    ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಿತು. ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 18 ಜಿಲ್ಲೆಗಳ 121 ಸ್ಥಾನಗಳು ಮತ್ತು ನವೆಂಬರ್ 11 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ 20 ಜಿಲ್ಲೆಗಳ 122 ಸ್ಥಾನಗಳು ಸೇರಿವೆ. ರಾಜ್ಯದಲ್ಲಿ ಶೇ. 67.13 ರಷ್ಟು ಮತದಾನ ದಾಖಲಾಗಿದ್ದು, ಇದು 1951 ರ ನಂತರದ ಅತ್ಯಧಿಕ ಮತದಾನವಾಗಿದೆ. ಮಹಿಳಾ ಮತದಾರರ ಸಂಖ್ಯೆ ಶೇ. 71.6 ರಷ್ಟಿದ್ದು, ಇದು ರಾಜ್ಯದಲ್ಲಿ ಇದುವರೆಗಿನ ಅತ್ಯಧಿಕ ಮತದಾನವಾಗಿದೆ.

  • 14 Nov 2025 07:22 AM (IST)

    Bihar Election Results Live: ಸಚಿವ ಪ್ರೇಮ್ ಕುಮಾರ್ ಹೇಳಿದ್ದೇನು?

    ಬಿಹಾರ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗುವ ಮೊದಲು, ರಾಜ್ಯ ಸಚಿವ ಪ್ರೇಮ್ ಕುಮಾರ್ ಅವರು ಎನ್ಡಿಎ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಬಾರಿ ಬಿಹಾರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬಂದಿದ್ದರು.ಎನ್ಡಿಎ ಎಲ್ಲಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ ಮತ್ತು ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದರು.

  • 14 Nov 2025 07:21 AM (IST)

    Bihar Election Results Live:ಕೆಲವರು ರಾಜಕೀಯವನ್ನು ತಮ್ಮ ಆಸ್ತಿ ಎಂದುಕೊಂಡಿದ್ದಾರೆ: ವಿಜಯ್ ಕುಮಾರ್

    ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಜನರು ನಿರ್ಧರಿಸುತ್ತಾರೆ.ಕುಟುಂಬ ಆಧಾರಿತ ಜನರು ರಾಜಕೀಯವನ್ನು ತಮ್ಮ ಆಸ್ತಿಯೆಂದು ಪರಿಗಣಿಸುತ್ತಾರೆ. ಆದರೆ ಜನರು ಇಂದು ನೀಡುವ ತೀರ್ಪು ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

  • 14 Nov 2025 07:16 AM (IST)

    Bihar Election Result Live: ಸರ್ಕಾರ ರಚಿಸುವುದಾಗಿ ಪೋಸ್ಟರ್​ ಬಿಡುಗಡೆ ಮಾಡಿದ ಆರ್​ಜೆಡಿ

    ಬಿಹಾರದಲ್ಲಿ ಮತ ಎಣಿಕೆ ಪ್ರಾರಂಭವಾಗುವ ಮೊದಲು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಳಗ್ಗೆ ಒಂದು ಪೋಸ್ಟರ್ ಬಿಡುಗಡೆ ಮಾಡಿ, ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ. ಪೋಸ್ಟರ್‌ನಲ್ಲಿ ನವೆಂಬರ್ 14, ಬಿಹಾರದಲ್ಲಿ ತೇಜಸ್ವಿ ಯಾದವ್ ಸರ್ಕಾರ ಎಂಬ ಟ್ಯಾಗ್‌ಲೈನ್ ಇತ್ತು.

  • Published On - 7:14 am, Fri, 14 November 25