ಬಿಹಾರ: ಕೋರ್ಟ್​ ಮುಂದೆ ಸಿನಿ ರೀತಿಯಲ್ಲಿ ಫೈರಿಂಗ್, ಓರ್ವ ಸಾವು, ಒಬ್ಬ ಕೈದಿಗೆ ಗಾಯ

|

Updated on: Dec 15, 2023 | 4:58 PM

ಬಿಹಾರದ ಧನಾಪುರ ಕೋರ್ಟ್​ನಲ್ಲಿ ಪೊಲೀಸರ ಮುಂದೆಯೇ ಅಪರಿಚಿತ ವ್ಯಕ್ತಿಗಳು ಫೈರಿಂಗ್ ನಡೆಸಿದ್ದಾರೆ. ಇಬ್ಬರು ಕೈದಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವು, ಮತ್ತೊಬ್ಬ ಕೈದಿ ಗಾಯಗೊಂಡಿದ್ದಾರೆ.

ಬಿಹಾರ: ಕೋರ್ಟ್​ ಮುಂದೆ ಸಿನಿ ರೀತಿಯಲ್ಲಿ ಫೈರಿಂಗ್, ಓರ್ವ ಸಾವು, ಒಬ್ಬ ಕೈದಿಗೆ ಗಾಯ
ಸಾಂದರ್ಭಿಕ ಚಿತ್ರ
Follow us on

ಪಟ್ನಾ, ಡಿ.15: ಬಿಹಾರದ ಧನಾಪುರ ಕೋರ್ಟ್​ನ ಬಳಿ (Danapur court) ಪೊಲೀಸರ ಮುಂದೆಯೇ ಅಪರಿಚಿತ ವ್ಯಕ್ತಿಗಳು ಫೈರಿಂಗ್ ನಡೆಸಿದ್ದಾರೆ. ಇಬ್ಬರು ಕೈದಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವು, ಮತ್ತೊಬ್ಬ ಕೈದಿ ಗಾಯಗೊಂಡಿದ್ದಾರೆ. ಪೊಲೀಸರು ವಿಚಾರಣೆಗೆಂದು ಕೋರ್ಟ್​​​ಗೆ ಕರೆದುಕೊಂಡು ಬರುತ್ತಿರುವಾಗ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ. ಇದರಲ್ಲಿ ಓರ್ವ ಕೈದಿ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಕೈದಿಯನ್ನು ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ.

ಬಲಿಯಾದ ಕೈದಿಯನ್ನು ಅಭಿಷೇಕ್ ಕುಮಾರ್ ಅಕಾ ಚೋಟೆ ಸರ್ಕಾರ್ ಎಂದು ಗುರುತಿಸಲಾಗಿದೆ. ಇತನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಭಿಷೇಕ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಗುಂಡಿನ ದಾಳಿ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಅಭಿಷೇಕ್ ಕುಮಾರ್ ಅಕಾ ಚೋಟೆ ಸರ್ಕಾರ್ ಮೇಲೆ ಇಬ್ಬರು ವ್ಯಕ್ತಿಗಳು ದಾನಪುರ ನ್ಯಾಯಾಲಯದಲ್ಲಿ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ದಾಳಿಯಲ್ಲಿ ಅಭಿಷೇಕ್ ಕುಮಾರ್ ಮೃತಪಟ್ಟಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಾಟ್ನಾ ಸಿಟಿ ಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ 

Published On - 4:26 pm, Fri, 15 December 23