ಸಂಸತ್ತಿನೊಳಗೆ ನಡೆದ ಹೊಗೆ ದಾಳಿ ಹಿಂದಿರುವ ಮಾಸ್ಟರ್ ಮೈಂಡ್ ಲಲಿತ್ ಅಲ್ಲ, ಮತ್ಯಾರು? ಇಲ್ಲಿದೆ ಮಾಹಿತಿ
ಸಂಸತ್ ಭವನದೊಳಗೆ ಅಶ್ರುವಾಯು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಲಿತ್ ಝಾ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಈ ದಾಳಿಯ ಮಾಸ್ಟರ್ ಮೈಂಡ್ ಅವರೇ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಹೇಶ್ ಕುಮಾವತ್ ಎಂಬ ವ್ಯಕ್ತಿಯೇ ಮಾಸ್ಟರ್ ಮೈಂಡ್.
ಸಂಸತ್( Parliament) ಭವನದೊಳಗೆ ಅಶ್ರುವಾಯು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಂದು ಲಲಿತ್ ಝಾ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಈ ದಾಳಿಯ ಮಾಸ್ಟರ್ ಮೈಂಡ್ ಅವರೇ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಹೇಶ್ ಕುಮಾವತ್ ಎಂಬ ವ್ಯಕ್ತಿಯೇ ಮಾಸ್ಟರ್ ಮೈಂಡ್.
ಮಹೇಶ್ನನ್ನು ಪೊಲೀಸರು ಬಂಧಿಸಿದ್ದಾರೆ, ರಾಜಸ್ಥಾನದಲ್ಲಿ ಆತ ಕೆಲಸ ಮಾಡುತ್ತಿದ್ದ, ಮಹೇಶ್ ಕೂಡ ಭಗತ್ ಸಿಂಗ್ ಅಭಿಮಾನಿಗಳ ಸಂಘದೊಂದಿಗೆ ಸಂಬಂಧ ಹೊಂದಿದ್ದಾನೆ. ಆರೋಪಿ ಲಲಿತ್ ಝಾ ಅವರನ್ನು ತಡರಾತ್ರಿ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಡಿಸಿಪಿ ಮತ್ತು ಹೆಚ್ಚುವರಿ ಸಿಪಿ ಸೇರಿದಂತೆ ವಿಶೇಷ ಸೆಲ್‌ನ ಹಲವು ಇನ್ಸ್‌ಪೆಕ್ಟರ್‌ಗಳು ಅವರನ್ನು ವಿಚಾರಣೆ ನಡೆಸಿದರು. ಮೂಲಗಳ ಪ್ರಕಾರ, ಆರೋಪಿ ಲಲಿತ್ ಝಾ ವಿಶೇಷ ಸೆಲ್ ಅಧಿಕಾರಿಗಳಿಗೆ ಸಂಪೂರ್ಣ ಕಥೆಯನ್ನು ಹೇಳಿದ್ದಾನೆ.
ಮೂಲಗಳ ಪ್ರಕಾರ, ಹಲವು ತಿಂಗಳ ಹಿಂದೆಯೇ ಸಿದ್ಧತೆಗಳು ನಡೆದಿವೆ. ಸಂಸತ್ತಿಗೆ ಪ್ರವೇಶಿಸಲು ಪಾಸ್ ಅನಿವಾರ್ಯವಾಗಿತ್ತು, ಆದ್ದರಿಂದ ಅದು ಲಭ್ಯವಿರಲಿಲ್ಲ. ಮಹೇಶ್ ರಾಜಸ್ಥಾನದಲ್ಲಿ ನಮ್ಮ ಗುಂಪಿನ ಎಲ್ಲ ಸದಸ್ಯರ ಮೊಬೈಲ್ ಅನ್ನು ಸುಟ್ಟು ಹಾಕಿದ್ದ. ಆತ ತನ್ನ ಫೋನ್‌ನಿಂದ ನಿರಂತರವಾಗಿ ವಿಡಿಯೋ ಮಾಡುತ್ತಿದ್ದ. ಆದರೆ ರಾಜಸ್ಥಾನಕ್ಕೆ ಹೋದ ನಂತರ ಎಲ್ಲ ಫೋನ್ ಗಳನ್ನು ನಾಶಪಡಿಸಿದ್ದ ಎನ್ನಲಾಗಿದೆ.
ಮತ್ತಷ್ಟು ಓದಿ: ಸಂಸತ್ ಭದ್ರತೆ ಉಲ್ಲಂಘನೆ: ಆರೋಪಿ ಸಾಗರ್ ಶರ್ಮಾ ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ?
ಲಲಿತ್ಗಾಗಿ ನಿರಂತರವಾಗಿ ಹುಡುಕಾಟ ನಡೆಸಲಾಗುತ್ತಿತ್ತು, ಆತನಿದ್ದ ಸ್ಥಳಕ್ಕೆ ಪೊಲೀಸರು ತಲುಪುವಷ್ಟರಲ್ಲಿ ಲಲಿತ್ ಝಾ ಪರಾರಿಯಾಗಿದ್ದ, ಝಾ ನಾಗೌರ್ಗೆ ಆಗಮಿಸಿ ಇಬ್ಬರು ಸ್ನೇಹಿತರನ್ನು ಭೇಟಿಯಾಗಿ ರಾತ್ರಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದ. ಎಲ್ಲಾ ಆರೋಪಿಗಳನ್ನು ದೆಹಲಿ ಪೊಲೀಸರು ನ್ಯೂ ಫ್ರೆಂಡ್ಸ್ ಕಾಲೋನಿಯ ಕಚೇರಿಯಲ್ಲಿ ಇರಿಸಲಾಗಿದೆ. ನಿರಂತರ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಇಡೀ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ