ನೀಟ್​ ಪೇಪರ್​ ಸೋರಿಕೆ ಮಾಸ್ಟರ್​ಮೈಂಡ್​ಗೆ ತೇಜಸ್ವಿ ಯಾದವ್ ಆಪ್ತ ಕಾರ್ಯದರ್ಶಿ ಕೊಠಡಿ ಕಾಯ್ದಿರಿಸಿದ್ದರು: ವಿಜಯ್ ಸಿನ್ಹಾ

|

Updated on: Jun 20, 2024 | 2:40 PM

ನೀಟ್​ ಪೇಪರ್ ಸೋರಿಕೆಗೆ ಸಂಬಂಧಿಸಿದ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಟ್ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ ಬಿಹಾರ ಉಪ ಮುಖ್ಯಮಂತ್ರಿ ವಿಜಯ್ ಸಿನ್ಹಾ, ತೇಜಸ್ವಿ ಯಾದವ್ ಅವರ ಉಪ ಕಾರ್ಯದರ್ಶಿ ಪ್ರೀತಮ್ ಯಾದವ್ ಅವರು ನೀಟ್ ಪೇಪರ್ ಸೋರಿಕೆ ಪ್ರಕರಣದ ಆರೋಪಿ ಸಿಕಂದರ್‌ಗೆ ಪಾಟ್ನಾದಲ್ಲಿ ಅತಿಥಿ ಗೃಹವನ್ನು ಕಾಯ್ದಿರಿಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಪಡಿಸಿದ್ದಾರೆ.

ನೀಟ್​ ಪೇಪರ್​ ಸೋರಿಕೆ ಮಾಸ್ಟರ್​ಮೈಂಡ್​ಗೆ ತೇಜಸ್ವಿ ಯಾದವ್ ಆಪ್ತ ಕಾರ್ಯದರ್ಶಿ ಕೊಠಡಿ ಕಾಯ್ದಿರಿಸಿದ್ದರು: ವಿಜಯ್ ಸಿನ್ಹಾ
ತೇಜಸ್ವಿ, ವಿಜಯ್ ಸಿನ್ಹಾ
Follow us on

ನೀಟ್​-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್(Tejashwi Yadav) ಆಪ್ತ ಕಾರ್ಯದರ್ಶಿ ಪ್ರೀತಮ್ ಯಾದವ್ ಅವರ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ನೀಟ್​ ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ತೇಜಸ್ವಿ ಯಾದವ್ ಆಪ್ತ ಪ್ರಶ್ನೆಪತ್ರಿಕೆ ಸೋರಿಕೆಯ ಮಾಸ್ಟರ್​ಮೈಂಡ್​ಗಾಗಿ ಅತಿಥಿಗೃಹದಲ್ಲಿ ರೂಂ ಬುಕ್​ ಮಾಡಿರುವುದು ತಿಳಿದುಬಂದಿದೆ.

ಈ ಕುರಿತು ಬಿಹಾರ ಉಪ ಮುಖ್ಯಮಂತ್ರಿ ವಿಜಯ್​ ಸಿನ್ಹಾ ಪತ್ರಿಕಾಗೋಷ್ಠಿ ನಡೆಸಿ ಕೆಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮಾಸ್ಟರ್​ಮೈಂಡ್​ ಸಿಕಂದರ್​ಗೆ ತೇಜಸ್ವಿ ಯಾದವ್ ಆಪ್ತ ಕೊಠಡಿ ಕಾಯ್ದಿರಿಸಿದ್ದರು ಎಂದು ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಆರೋಪಿಸಿದ್ದಾರೆ.
ನೀಟ್​-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆ ಪ್ರಸ್ತುತ ಸುಪ್ರೀಂಕೋರ್ಟ್​ನಲ್ಲಿದೆ. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ.

ಪೇಪರ್​ ಸೋರಿಕೆ ಮಾಡಿದ್ದವರು ಪಾಟ್ನಾದ ಅತಿಥಿಗೃಹದಲ್ಲಿ ತಂಗಿದ್ದರು ಮತ್ತು ಅದರ ಬುಕಿಂಗ್​ ಅನ್ನು ತೇಜಸ್ವಿ ಯಾದವ್ ಅವರ ಆಪ್ತ ಕಾರ್ಯದರ್ಶಿ ಮಾಡಿದ್ದಾರೆ ಎಂದು ದೂರಿದ್ದಾರೆ.

ಮತ್ತಷ್ಟು ಓದಿ: NEET-UG 2024: ನೀಟ್ ಅಕ್ರಮ: 3 ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತಡೆ

ಇಷ್ಟೇ ಅಲ್ಲ, ಬುಕಿಂಗ್ ಮಾಡುವಾಗ ತೇಜಸ್ವಿ ಯಾದವ್​ಗೆ ಮಂತ್ರಿ ಪದವನ್ನು ಬಳಸಲಾಗಿದೆ ಎಂದರು.
ಈ ಬಗ್ಗೆ ವಿಜಯ್ ಸಿನ್ಹಾ ಪತ್ರಿಕಾಗೋಷ್ಠಿ ನಡೆಸಿ ವಿವರವಾದ ಆರೋಪ ಮಾಡಿದ್ದಾರೆ. ವಿಜಯ್ ಸಿನ್ಹಾ ಅವರು ಕರೆ ವಿವರ ಸೇರಿದಂತೆ ಹಲವು ದಾಖಲೆಗಳನ್ನು ತೋರಿಸಿ ಮೇ 1 ರಂದು ತೇಜಸ್ವಿ ಅವರ ಆಪ್ತ ಕಾರ್ಯದರ್ಶಿ ಪ್ರೀತಮ್ ಕುಮಾರ್ ಅವರ ಮೊಬೈಲ್​ ಸಂಖ್ಯೆಯಿಂದ ರಸ್ತೆ ನಿರ್ಮಾಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಕುಮಾರ್ ಮೊಬೈಲ್​ಗೆ ರಾತ್ರಿ 9.07ಕ್ಕೆ ಕರೆ ಮಾಡಲಾಗಿತ್ತು. ಸಿಕಂದರ್ ಕುಮಾರ್ ಅವರಿಗೆ ಕೊಠಡಿ ಕಾಯ್ದಿರಿಸುವ ಉದ್ದೇಶದಿಂದಲೇ ಈ ಕರೆ ಮಾಡಲಾಗಿದೆ ಎಂದರು.
ಈ ಬಗ್ಗೆ ಪ್ರದೀಪ್ ಗಮನಹರಿಸಿರಲಿಲ್ಲ, ನಂತರ ಮೇ 4ರಂದು ಬೆಳಗ್ಗೆ 8 ಗಂಟೆಗೆ ಪ್ರೀತಮ್​ಗೆ ಮತ್ತೊಮ್ಮೆ ಕರೆ ಮಾಡಿದ್ದರು.

ಪೇಪರ್ ಸೋರಿಕೆ ಆರೋಪಗಳನ್ನು ಬಿಹಾರದ ಆರ್ಥಿಕ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ. ಈ ಪ್ರಕರಣದ ತನಿಖೆಯಲ್ಲಿ ಇದುವರೆಗೆ ಪೇಪರ್ ಸೋರಿಕೆ ಶಂಕೆ ಹೆಚ್ಚಿದೆ. ಅನುರಾಗ್ ಯಾದವ್ ಹಾಗೂ ಇತರೆ ಮೂವರಿಗೆ ಈ ಅತಿಥಿಗೃಹದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಗೆಸ್ಟ್​ ಹೌಸ್​ನಿಂದ ಸಿಕ್ಕಿಬಿದ್ದವರೊಂದಿಗೆ ಸಂಬಂಧ ಹೊಂದಿರುವವರಲ್ಲಿ ಪ್ರೀತಮ್ ಕೂಡ ಒಬ್ಬರು. ಈ ಪ್ರಕರಣದಲ್ಲಿ ರೀನಾ ಯಾದವ್ ಮತ್ತು ಅನುರಾಗ್ ಯಾದವ್ ಅವರನ್ನೂ ಬಂಧಿಸಲಾಗಿದೆ. ವಿಜಯ್ ಸಿನ್ಹಾ ಅವರು ಬಿಹಾರದಲ್ಲಿ ರಸ್ತೆ ನಿರ್ಮಾಣ ವಿಭಾಗದ ಹೊಣೆಯನ್ನೂ ಹೊತ್ತಿದ್ದಾರೆ. ಎನ್‌ಎಚ್‌ಎಐ ಗೆಸ್ಟ್ ಹೌಸ್ ಬುಕ್ಕಿಂಗ್ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಅವರು ಹೇಳಿದ್ದಾರೆ.

67 ನೀಟ್ ಅಭ್ಯರ್ಥಿಗಳು 720 ಅಂಕಗಳಿಗೆ 720 ಅಂಕಗಳನ್ನು ಪಡೆದಿದ್ದಾರೆ. ಈ ಪರೀಕ್ಷೆಯನ್ನು ನಡೆಸುವ ಸಂಸ್ಥೆಯಾದ ಎನ್‌ಟಿಎಗೆ ಈ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಗ್ರೇಸ್​ ಮಾರ್ಕ್ಸ್​ ನೀಡಲಾಗಿತ್ತು ಎಂದು ಎನ್​ಟಿಎ ಹೇಳಿತ್ತು.

ಟಾಪ್ 67 ಅಭ್ಯರ್ಥಿಗಳ ಪೈಕಿ 44 ಅಭ್ಯರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಇದರ ನಂತರ, ಎನ್‌ಟಿಎ ಈ ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್‌ಗಳನ್ನು ರದ್ದುಪಡಿಸಿ ಜೂನ್ 23 ರಂದು ಮರು ಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ತಮ್ಮ ಹಳೆಯ ಅಂಕಗಳೊಂದಿಗೆ ಮುಂದುವರಿಯಲು ಬಯಸುವ ಅಭ್ಯರ್ಥಿಗಳು ಹಾಗೆ ಮಾಡಬಹುದು. ಆದರೆ ಅವರ ಸ್ಕೋರ್ ಕಾರ್ಡ್‌ನಿಂದ ಗ್ರೇಸ್ ಮಾರ್ಕ್‌ಗಳನ್ನು ತೆಗೆದುಹಾಕಲಾಗುತ್ತದೆ ಎಂದು ಕೂಡ ಹೇಳಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ