ಬಿಹಾರ: 138 ಮತದಾರರಿಗೆ ಒಬ್ಬನೇ ತಂದೆ!

|

Updated on: Dec 06, 2024 | 10:36 AM

ಭಾರತದಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಈ ಚುನಾವಣೆಗಳು ವಿವಿಧ ಪ್ರಕಾರಗಳಾಗಿವೆ ಮತ್ತು ವಿವಿಧ ಮತದಾರರ ಪಟ್ಟಿಗಳನ್ನು ಸಹ ತಯಾರಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಅಕ್ರಮಗಳು ಹಾಗೂ ತಪ್ಪುಗಳು ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದಿರುವ ಘಟನೆ ನೋಡಿ ಚುನಾವಣಾ ಸ್ಪರ್ಧಿಗಳು, ಚುನಾವಣಾ ಉಸ್ತುವಾರಿಗಳು ಹಾಗೂ ಮತದಾರರು ಕಂಗಾಲಾಗಿದ್ದಾರೆ

ಬಿಹಾರ: 138 ಮತದಾರರಿಗೆ ಒಬ್ಬನೇ ತಂದೆ!
ಮತದಾರರು
Image Credit source: Business Standard
Follow us on

ಭಾರತದಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಈ ಚುನಾವಣೆಗಳು ವಿವಿಧ ಪ್ರಕಾರಗಳಾಗಿವೆ ಮತ್ತು ವಿವಿಧ ಮತದಾರರ ಪಟ್ಟಿಗಳನ್ನು ಸಹ ತಯಾರಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ಅಕ್ರಮಗಳು ಹಾಗೂ ತಪ್ಪುಗಳು ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದಿರುವ ಘಟನೆ ನೋಡಿ ಚುನಾವಣಾ ಸ್ಪರ್ಧಿಗಳು, ಚುನಾವಣಾ ಉಸ್ತುವಾರಿಗಳು ಹಾಗೂ ಮತದಾರರು ಕಂಗಾಲಾಗಿದ್ದಾರೆ.

ಏಕೆಂದರೆ 138 ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರ ಮುಂದೆ ಒಂದೇ ಹೆಸರನ್ನು ನಮೂದಿಸಲಾಗಿದೆ. ಬಿಹಾರ ವಿಧಾನ ಪರಿಷತ್​ಗೆ ತಿರ್ಹತ್ ಪದವೀಧರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿತ್ತು. ಈ ಬಾರಿಯ ಮತದಾರರ ಪಟ್ಟಿ ಹೊರ ಬಂದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಪಟ್ಟಿಯಲ್ಲಿ 138 ಜನರ ತಂದೆಯ ಹೆಸರನ್ನು ಮುನ್ನಾ ಕುಮಾರ್ ಎಂದು ಬರೆಯಲಾಗಿದೆ.

ನಿಸ್ಸಂಶಯವಾಗಿ ಇದರಲ್ಲಿ ತಪ್ಪಾಗಿದೆ ಎಂದು ಹೇಳಬಹುದು, ಹಲವು ಅಭ್ಯರ್ಥಿಗಳು ಆತಂಕಗೊಂಡಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮತದಾನದ ವೇಳೆ ಇಂಥವರನ್ನು ಮತದಾನ ಮಾಡದಂತೆ ತಡೆದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಅಭ್ಯರ್ಥಿಗಳು.

ಮತ್ತಷ್ಟು ಓದಿ: ದೆಹಲಿ ವಿಧಾನಸಭಾ ಚುನಾವಣೆ, ಯಾರೊಂದಿಗೂ ಮೈತ್ರಿ ಇಲ್ಲ ಎಂದ ಆಮ್ ಆದ್ಮಿ ಪಕ್ಷ

ಪ್ರಕರಣವು ಮುಜಾಫರ್‌ಪುರ ಜಿಲ್ಲೆಯ ಔರೈ ಬ್ಲಾಕ್‌ನ ಬೂತ್ ಸಂಖ್ಯೆ 54ನಲ್ಲಿ ನಡೆದಿದೆ. ಈಗ ಮತದಾರರ ಪಟ್ಟಿಯನ್ನೂ ಪರಿಷ್ಕರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅಭ್ಯರ್ಥಿಗಳು.ಹ ಪರಿಸ್ಥಿತಿಯಲ್ಲಿ, ಅವರು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಯಾವುದೇ ಮತದಾರರನ್ನು ಮತ ಚಲಾಯಿಸುವುದರಿಂದ ತಡೆಯುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಮತದಾರರ ಗುರುತಿನ ಚೀಟಿ ತೋರಿಸಿ ಯಾರೂ ಮತದಾನದಿಂದ ವಂಚಿತರಾಗುವುದಿಲ್ಲ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:36 am, Fri, 6 December 24