ಪತ್ನಿ ಪ್ರಿಯಕರನೊಂದಿಗೆ ಓಡಿಹೋದ್ಲು, ಪ್ರತೀಕಾರವಾಗಿ ಪತಿ ಮಾಡಿದ್ದೇನು ಗೊತ್ತಾ?

|

Updated on: Mar 04, 2023 | 9:24 AM

ತನ್ನ ಪತ್ನಿಯು ಬೇರೊಬ್ಬ ಪುರುಷನೊಂದಿಗೆ ಓಡಿಹೋದಳು ಎನ್ನುವ ಕೋಪಕ್ಕೆ ಆಕೆಯ  ಪ್ರಿಯಕರನ ಪತ್ನಿಯನ್ನೇ ಈತ ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ.

ಪತ್ನಿ ಪ್ರಿಯಕರನೊಂದಿಗೆ ಓಡಿಹೋದ್ಲು, ಪ್ರತೀಕಾರವಾಗಿ ಪತಿ ಮಾಡಿದ್ದೇನು ಗೊತ್ತಾ?
ಮದುವೆ
Follow us on

ತನ್ನ ಪತ್ನಿಯು ಬೇರೊಬ್ಬ ಪುರುಷನೊಂದಿಗೆ ಓಡಿಹೋದಳು ಎನ್ನುವ ಕೋಪಕ್ಕೆ ಆಕೆಯ  ಪ್ರಿಯಕರನ ಪತ್ನಿಯನ್ನೇ ಈತ ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ಬೇರೊಬ್ಬ ಪುರುಷನೊಂದಿಗೆ ಓಡಿಹೋಗಿದ್ದಾಳೆ, ಆಕೆಯ ಪತಿಯು ಪತ್ನಿಯ ಪ್ರಿಯಕರನ ಪತ್ನಿಯನ್ನು ವಿವಾಹವಾಗಿದ್ದಾನೆ.

ETV ಭಾರತ್ ಪ್ರಕಾರ , ರೂಬಿ ದೇವಿ ಎಂಬ ಮಹಿಳೆ 2009 ರಲ್ಲಿ ನೀರಜ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ದಂಪತಿಗೆ ನಾಲ್ಕು ಮಕ್ಕಳಿದ್ದರು. ಆದಾಗ್ಯೂ, ಕೆಲವು ವರ್ಷಗಳ ನಂತರ, ನೀರಜ್ ತನ್ನ ಹೆಂಡತಿ ಮುಖೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾಳೆಂದು ಪತ್ತೆಮಾಡಿದ್ದ.

ಮತ್ತಷ್ಟು ಓದಿ:

ಫೆಬ್ರವರಿ 2022 ರಲ್ಲಿ, ರೂಬಿ ಮತ್ತು ಮುಖೇಶ್ ವಿವಾಹವಾದರು. ರೂಬಿಯ ಪತಿಗೆ ತಿಳಿದಾಗ, ಅವನು ತನ್ನ ಹೆಂಡತಿಯನ್ನು ಅಪಹರಿಸಿದ್ದಕ್ಕಾಗಿ ಮುಖೇಶ್ ವಿರುದ್ಧ ಪೊಲೀಸ್ ದೂರು ದಾಖಲಿಸಿದನು.

ಮುಖೇಶ್ ಕೂಡ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಕುತೂಹಲಕಾರಿಯಾಗಿ, ಅವನ ಹೆಂಡತಿಯ ಹೆಸರು ರೂಬಿ ಎಂದು ತಿಳಿದುಬಂದಿದೆ.

ಸೇಡು ತೀರಿಸಿಕೊಳ್ಳುವ ಸಲುವಾಗಿ, ನೀರಜ್ ಮುಖೇಶ್ ಅವರ ಪತ್ನಿಯನ್ನು ಮದುವೆಯಾಗಲು ನಿರ್ಧರಿಸಿದರು. ಫೆಬ್ರವರಿ 2023 ರಲ್ಲಿ ಇಬ್ಬರು ವಿವಾಹವಾದರು.

ವಿವಾಹಿತರು ಓಡಿಹೋಗುತ್ತಿದ್ದಾರೆ ಮತ್ತು ಇಲ್ಲಿ ನಾನು ಇನ್ನೂ ಒಂಟಿಯಾಗಿದ್ದೇನೆ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಪ್ರತಿಯೊಂದು ಕ್ರಿಯೆಗೂ ಸಮಾನವಾದ ಪ್ರತಿಕ್ರಿಯೆ ಇಂದು ಸಾಬೀತಾಗಿದೆ. LHS =RHS ಎಂದು ಕಮೆಂಟ್ ಮಾಡಿದ್ದಾರೆ. ಅವರ ಮಕ್ಕಳು ತುಂಬಾ ಗೊಂದಲಕ್ಕೊಳಗಾಗಿರಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ