ಒಬ್ಬ ಅದ್ಭುತ ಬ್ಯಾಟ್ಸ್ಮನ್ ಆಗಿ ಕ್ರಿಕೆಟ್ ಲೋಕದಲ್ಲಿ ನವಜೋತ್ ಸಿಂಗ್ ಸಿದ್ದು ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಉಣಬಡಿಸಿದವರೇ. ಸ್ಪಿನ್ ವಿರುದ್ಧ ಬ್ಯಾಟ್ ಎತ್ತಿದರೆ ರನ್ ಹೊಳೆಯೇ ಹರಿಯುತ್ತಿತ್ತು. ಕ್ರಿಕೆಟ್ ಪ್ರವಾಸದ ಮಧ್ಯೆ ಸ್ವದೇಶಕ್ಕೆ ವಾಪಸಾದವರು. ರೋಡ್ ರೇಗಣ್ಣ ಸಹ. ಹಾಸ್ಯದ ಹೊನಲನ್ನೂ ಹರಿಸಿದ ಕಲಾಕಾರ. ಇದೆಲ್ಲದರ ಜೊತೆಗೆ ಕ್ರಿಕೆಟ್ ಸೆಳೆತವೋ ಅಥವಾ ಪ್ರಧಾನಿ ಮೋದಿಯ ವಿರುದ್ಧ ಅಸಮಾಧಾನವೋ.. ಭಾರತ ನೆರೆ‘ಹೊರೆ’ಯಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ರನ್ನು ಕಂಡರೆ ಈ ಸಿದ್ದುಗೆ ಎಲ್ಲಿಲ್ಲದೆ ಪ್ರೀತಿ.
ಹೀಗಿರುವ ನವಜೋತ್ ಸಿಂಗ್ ಸಿದ್ದು ಶಾಸಕರಾಗಿಯೂ ಅಮೃತಸರದಲ್ಲಿ ವಾಸವಾಗಿದ್ದಾರೆ. ಇರಲಿ ಬಿಡಿ ಅವರ ಮನೆಯಲ್ಲಿ ಅವರು ವಾಸವಾಗಿರಲಿ ನಮದೇನೂ ಅಭ್ಯಂತರವಿಲ್ಲ. ಆದ್ರೆ ಬಿಹಾರ ರಾಜ್ಯದ ಪೊಲೀಸರು ಒಂದು ವಾರದಿಂದ ಅವರ ಮನೆಯ ಮುಂದೆ ಚೇರು ಹಾಕಿಕೊಂಡು ಕುಳಿತುಬಿಟ್ಟಿದ್ದಾರೆ. ಆದ್ರೆ ಈ ಪುಣ್ಯಾತ್ಮ ಮಾತ್ರ ಮನೆಯಿಂದ ಹೊರಕ್ಕೆ ಇಣುಕಿ ನೋಡಿಲ್ಲ. ಯಾಕೆ ಅಂಥಾದ್ದು ಏನು ಮಾಡಿದ್ದಾರೆ ಸಿದ್ದು ಅಂತ ನೋಡುವುದಾದ್ರೆ..
2019ರ ಚುನಾವಣಾ ಭಾಷಣದಲ್ಲಿ ಬಿಹಾರದ ಕಟಿಹಾರ್ ಬಳಿ ಮಾತಿನ ಮಲ್ಲ ಸಿದ್ದು ಟೀಕಾಪ್ರವಾಹವನ್ನೇ ಹರಿಸಿದ್ದರು. ಈ ಸಂಬಂಧ ಆತನ ವಿರುದ್ಧ ಕೇಸ್ ರಿಜಿಸ್ಟರ್ ಆಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ಬಾಂಡ್ ಪೇಪರ್ ಮೇಲೆ ಸಿದ್ದು ಒಂದು ಸೈನ್ ಮಾಡಲೇಬೇಕಿದೆ. ಆದ್ರೆ ಇವಯ್ಯ ಜಪ್ಪಯ್ಯ ಅಂದ್ರೂ ಮನೆಯಿಂದ ಹೊರಬಂದು ಶಿಸ್ತಿನ ಪ್ರಜೆಯಾಗಿ ಕಾನೂನಾತ್ಮಕ ಸಹಿ ಹಾಕುವುದಕ್ಕೆ ಒಪ್ಪುತ್ತಿಲ್ಲ.
ಅತ್ತ ಬಿಹಾರದಿಂದ ಪೊಲೀಸರೂ ಬಿಡುತ್ತಿಲ್ಲ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ.. ಅದಕ್ಕಾಗಿ ಹೀಗೆ ಒಂದು ವಾರದಿಂದ ಸಿದ್ದು ಮನೆಯ ಮುಂದೆ ಚಳಿಗಾಳಿ ಮಳೆ ಬಿಸಿಲು ಅನ್ನದೆ ಕಾಯುತ್ತಿದ್ದಾರೆ.. ಸಿದ್ದು ಮಾತ್ರ ಮನೆಯೊಳಗಿಂದ ಇವರನ್ನು ನೋಡುತ್ತಾ ಮುಸಿಮುಸಿ ಅನ್ನುತ್ತಿದ್ದಾರೆ.
We've been sitting outside MLA Navjot Singh Sidhu's residence since June 18 to get his signature on a bail bond paper in a case that was registered against him for his remarks at a poll rally in Katihar in 2019. He is not ready to meet us: Bihar Police SI Janardan Ram in Amritsar pic.twitter.com/BMxVU1HAvq
— ANI (@ANI) June 22, 2020
Published On - 11:00 am, Tue, 23 June 20