Bihar Train Accident: ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು ಅಪಘಾತ !

|

Updated on: Oct 12, 2023 | 12:33 AM

ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ಬುಧವಾರ ರಾತ್ರಿ 9:35ರ ಸುಮಾರಿಗೆ  ಈಶಾನ್ಯ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿತಪ್ಪಿದ್ದು, ಈವರೆಗೆ ಯಾವುದೆ ಸಾವು-ನೋವು ಸಂಭವಿಸಿಲ್ಲವೆಂದು ರೈಲ್ವೆ ಇಲಾಖೆ ತಿಳಿಸಿದೆ.  

Bihar Train Accident: ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು ಅಪಘಾತ !
ಈಶಾನ್ಯ ಎಕ್ಸಪ್ರೆಸ್​ ರೈಲು ಅಪಘಾತ
Follow us on

ಪಾಟ್ನಾ ಅ.12: ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ಬುಧವಾರ ರಾತ್ರಿ 9:35ರ ಸುಮಾರಿಗೆ  ಈಶಾನ್ಯ ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿತಪ್ಪಿದ್ದು, ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ ಮತ್ತು ಯಾವುದೇ ಸಾವು ಸಂಭವಿಸಿಲ್ಲವೆಂದು ರೈಲ್ವೆ ಇಲಾಖೆ ತಿಳಿಸಿದೆ.  ದೆಹಲಿಯ ಆನಂದ್ ವಿಹಾರ್‌ನಿಂದ ಬರುತ್ತಿದ್ದ ರೈಲು ಅಸ್ಸಾಂನ ಗುವಾಹಟಿಯ ಕಾಮಾಖ್ಯ ಜಂಕ್ಷನ್‌ಗೆ ತೆರಳುತ್ತಿರುವ ಅವಘಡ ಸಂಭವಿಸಿದೆ. ಎರಡರಿಂದ ಮೂರು ಎಸಿ ಬೋಗಿಗಳು ಪಲ್ಟಿಯಾಗಿ ಟ್ರ್ಯಾಕ್ ಮೇಲೆ ಬಿದ್ದಿವೆ ಎಂದು ವರದಿಯಾಗಿದೆ.

ರೈಲ್ವೆ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಆ ಪ್ರದೇಶದಲ್ಲಿನ ಇತರ ವೈದ್ಯಕೀಯ ಆಸ್ಪತ್ರೆಗಳಿಗೆ ಅಲರ್ಟ್ ಮಾಡಲಾಗಿದೆ.

ಬಕ್ಸರ್ ಸಂಸದರೂ ಆಗಿರುವ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರೈಲು ಹಳಿತಪ್ಪಿದ ಬಗ್ಗೆ ಮಾಹಿತಿ ಪಡೆದಿದ್ದು, ರಘುನಾಥಪುರಕ್ಕೆ ತೆರಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಅವರು ಮಾತನಾಡಿದ್ದಾರೆ ಎಂದು ANI ವರದಿ ಮಾಡಿದೆ.

ರೈಲ್ವೆ ಸಹಾಯವಾಣಿ ಸಂಖ್ಯೆ

ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್ ಹಳಿತಪ್ಪಿದ ಘಟನೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಭಾರತೀಯ ರೈಲ್ವೇ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.

ಪಾಟ್ನಾ ಸಹಾಯವಾಣಿ: 9771449971

ಡಣಾಪುರ ಸಹಾಯವಾಣಿ: 8905697493

ವಾಣಿಜ್ಯ ನಿಯಂತ್ರಣ: 7759070004

ARA: 8306182542

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್: 97948 49461, 8081206628

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಾಣಿಜ್ಯ ನಿಯಂತ್ರಣ: 8081212134

Published On - 12:26 am, Thu, 12 October 23