ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಲು ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಕಾರಣ ಎಂದ ತೇಜಸ್ವಿ ಸೂರ್ಯ
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್(Bhupesh Baghel) ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ(Tejasvi Surya) ಗಂಭೀರ ಆರೋಪ ಮಾಡಿದ್ದಾರೆ. ಭೂಪೇಶ್ ಬಾಘೇಲ್ ಅವರು ಇಲ್ಲಿ ಹಣವನ್ನು ಲೂಟಿ ಮಾಡಿ ಕರ್ನಾಟಕಕ್ಕೆ ಕಳುಹಿಸಿದರು, ಅದೇ ಕಾರಣದಿಂದ ಬಿಜೆಪಿಯು ಕರ್ನಾಟಕದಲ್ಲಿ ಸೋತಿದೆ ಎಂದಿದ್ದಾರೆ.
ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್(Bhupesh Baghel) ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ(Tejasvi Surya) ಗಂಭೀರ ಆರೋಪ ಮಾಡಿದ್ದಾರೆ. ಭೂಪೇಶ್ ಬಾಘೇಲ್ ಅವರು ಇಲ್ಲಿ ಹಣವನ್ನು ಲೂಟಿ ಮಾಡಿ ಕರ್ನಾಟಕಕ್ಕೆ ಕಳುಹಿಸಿದರು, ಅದೇ ಕಾರಣದಿಂದ ಬಿಜೆಪಿಯು ಕರ್ನಾಟಕದಲ್ಲಿ ಸೋತಿದೆ ಎಂದಿದ್ದಾರೆ.
ಆದರೆ ಈ ಬಾರಿ ಚತ್ತೀಸ್ಗಢದ ಯುವ ಜನತೆ ಛತ್ತೀಸ್ಗಢವನ್ನು ಭ್ರಷ್ಟಾಚಾರ, ವಂಶರಾಜಕಾರಣದಿಂದ ಮುಕ್ತಗೊಳಿಸಿ ಬಿಜೆಪಿಯನ್ನು ಸ್ಥಾಪಿಸಲು ಸಿದ್ಧವಾಗಿದ್ದಾರೆ ಎಂದು ಸೂರ್ಯ ಹೇಳಿದ್ದಾರೆ. ಛತ್ತೀಸ್‌ಗಢ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ.
ಕಾಂಗ್ರೆಸ್ ಸರ್ಕಾರದ ನೀತಿಗಳಿಂದಾಗಿ ನೊಂದಿರುವ ರಾಜ್ಯದ ಯುವಜನರ ಪರವಾಗಿ ನ್ಯಾಯಕ್ಕಾಗಿ ಹೋರಾಡುವುದಾಗಿ ತೇಜಸ್ವಿ ಸೂರ್ಯ ಪ್ರತಿಜ್ಞೆ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಭರವಸೆ ನೀಡಿದರು.
#WATCH | Raipur, Chhattisgarh: BJP Yuva Morcha National President and MP Tejasvi Surya says, ” Bhupesh Baghel looted money from here and sent it to Karnataka and because of that money we lost the election in Karnataka. But this time in Chhattisgarh, youths have decided that they… pic.twitter.com/QqPQitq7vC
— ANI MP/CG/Rajasthan (@ANI_MP_CG_RJ) October 11, 2023
ಮತ್ತೊಂದೆಡೆ ಚುನಾವಣಾ ಹೊಸ್ತಿಲಿನಲ್ಲಿರುವ ಛತ್ತೀಸ್ಗಢದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಕಾಂಗ್ರೆಸ್ ಸಭೆಯಲ್ಲಿ ಸಿಎಂ ಭೂಪೇಶ್ ಬಾಘೇಲ್ ಕ್ಯಾಂಡಿಕ್ರಶ್ ಆಡಿದ್ದಾರೆ.
ಮತ್ತಷ್ಟು ಓದಿ: ಪತ್ರಿಕೆಯ ನಿಲುವನ್ನು ಪ್ರತಿಧ್ವನಿಸಿದ ವಿಫಲ ಸಚಿವರು; ಕೃಷ್ಣ ಬೈರೇಗೌಡ ಆರೋಪಕ್ಕೆ ತೇಜಸ್ವಿ ಸೂರ್ಯ ದಾಖಲೆ ಸಹಿತ ತಿರುಗೇಟು
ಇದು ಈಗ ಬಿಜೆಪಿಗರ ಅಸ್ತ್ರವಾಗಿದ್ದು ಚಿಂತೆಯೇ ಇಲ್ಲದ ಬಾಘೇಲ್ ಎಂದು ಟೀಕಿಸಿದ್ದಾರೆ. ಹಾಗೆಯೇ ಕ್ಯಾಂಡಿಕ್ರಶ್ ಆಡುತ್ತಿದ್ದ ಬಾಘೇಲ್ ಅವರ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಬಾಘೇಲ್ ಅವರಿಗೆ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದಿದೆ ಹಾಗಾಗಿಯೇ ಆಟವಾಡಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Thu, 12 October 23