ಇಂಫಾಲ್: ಈಶಾನ್ಯ ಭಾರತದ ಮಣಿಪುರ್ ರಾಜ್ಯದ ರೈತರಿಗೆ ಮತ್ತೊಂದು ಆದಾಯದ ಮೂಲ ದೊರೆತಿದೆ. ಬಯೋಫ್ಲಾಕ್ (Biofloc) ಮೀನು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಆದಾಯವನ್ನ ವೃದ್ಧಿಸಲು ಮುಂದಾಗಿದ್ದಾರೆ.
ಈ ಬಯೋಫ್ಲಾಕ್ ಮೀನು ಕೃಷಿ ಅಂದರೆ ಏನು?
ಅಂದ ಹಾಗೆ, ಈ ಬಯೋಫ್ಲಾಕ್ ಮೀನು ಕೃಷಿ ಪದ್ಧತಿ ಇಡೀ ವಿಶ್ವದಲ್ಲಿ ಅತ್ಯಂತ ಲಾಭದಾಯಕ ಮೀನು ಕೃಷಿ ಪದ್ಧತಿಯಾಗಿ ಹೊರಹೊಮ್ಮಿದೆ. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆಗೆ ಪರ್ಯಾಯವಾಗಿ ಈ ಆಧುನಿಕ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪರಿಸರ ಸ್ನೇಹಿಯಾಗಿರುವ ಜೊತೆಗೆ ಮೀನು ಕೃಷಿಯಲ್ಲಿ ಬಳಸಲಾಗುವ ನೀರಿನ ಗುಣಮಟ್ಟವನ್ನು ಸಹ ಕಾಪಾಡುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೀನಿನ ಇಳುವರಿ ಸಹ ಅಧಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇತ್ತೀಚೆಗೆ, ಪ್ರಧಾನಿ ಮೋದಿ ಘೋಷಿಸಿದ ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ ಅಡಿಯಲ್ಲಿ ಈ ಪದ್ಧತಿಗೆ ಉತ್ತೇಜನೆ ನೀಡಲು ಸೂಕ್ತ ನೆರವು ಸಹ ನೀಡಲಾಗುತ್ತದೆ.