ರಾಜಮಾತೆ ಸ್ಮರಣಾರ್ಥ ಇಂದು ಬಿಡುಗಡೆಯಾಗಲಿದೆ 100 ರೂ ನಾಣ್ಯ..
ದೆಹಲಿ: ರಾಜಮಾತೆ ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸ್ಮರಣಾರ್ಥ ಇಂದು ಪ್ರಧಾನಿ ನರೇಂದ್ರ ಮೋದಿ 100 ರೂ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಲಾಗುತ್ತೆ. ಈ ಮೂಲಕ ರಾಜಮಾತೆಗೆ ಗೌರವ ಸಮರ್ಪಣೆ ಮಾಡಲಾಗುತ್ತೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯರಾಜೇ ಸಿಂಧಿಯಾ ಅವರು ಗ್ವಾಲಿಯರ್‌ನ ರಾಜಮಾತಾ ಎಂದೇ ಜನಪ್ರಿಯರು. ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ. […]
ದೆಹಲಿ: ರಾಜಮಾತೆ ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸ್ಮರಣಾರ್ಥ ಇಂದು ಪ್ರಧಾನಿ ನರೇಂದ್ರ ಮೋದಿ 100 ರೂ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಾಣ್ಯ ಬಿಡುಗಡೆ ಮಾಡಲಾಗುತ್ತೆ. ಈ ಮೂಲಕ ರಾಜಮಾತೆಗೆ ಗೌರವ ಸಮರ್ಪಣೆ ಮಾಡಲಾಗುತ್ತೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಿಜಯರಾಜೇ ಸಿಂಧಿಯಾ ಅವರು ಗ್ವಾಲಿಯರ್‌ನ ರಾಜಮಾತಾ ಎಂದೇ ಜನಪ್ರಿಯರು. ವಿಜಯರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ಸಂಭ್ರಮಾಚರಣೆಯ ಅಂಗವಾಗಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಹಣಕಾಸು ಸಚಿವಾಲಯ ಮುದ್ರಿಸಿದ್ದು, ದಿವಂಗತ ವಿಜಯರಾಜೇ ಸಿಂಧಿಯಾ ಕುಟುಂಬ ಸದಸ್ಯರು ಮತ್ತು ಇತರ ಗಣ್ಯರು ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ದೇಶದ ವಿವಿಧ ಸ್ಥಳಗಳಿಂದ ಸಮಾರಂಭಕ್ಕೆ ಸೇರಲಿದ್ದಾರೆ. ವಿಜಯರಾಜೇ ಸಿಂಧಿಯಾ ಅವರು ಲೋಕಸಭೆಗೆ 7 ಬಾರಿ ಮತ್ತು ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.
Tomorrow, 12th October is the Jayanti of Rajmata Vijaya Raje Scindia. On this special day, commemorative coin of Rs. 100 would be released at 11 AM. This is a part of her birth centenary celebrations and is yet another occasion to pay tributes to her great personality.
— Narendra Modi (@narendramodi) October 11, 2020
Published On - 7:46 am, Mon, 12 October 20