Biporjoy Cyclone: 58 ವರ್ಷಗಳಲ್ಲಿ ಜೂನ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಅತಿದೊಡ್ಡ ಚಂಡಮಾರುತ ಬಿಪರ್‌ಜೋಯ್ ಗುಜರಾತ್​ನತ್ತ

|

Updated on: Jun 14, 2023 | 7:56 AM

ಅರಬ್ಬೀ ಸಮುದ್ರ ಬಿಪರ್‌ಜೋಯ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಪಥ ಬದಲಾಯಿಸಿ ಗುಜರಾತ್​​ನತ್ತ ತೆರಳುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಗಳ ಪ್ರಕಾರ ಚಂಡಮಾರುತ ಜೂನ್ 15 ರ ಸಂಜೆಯ ವೇಳೆಗೆ ಕಛ್​ ಜಿಲ್ಲೆಗೆ ಅಪ್ಪಳಿಸಲಿದೆ.

Biporjoy Cyclone: 58 ವರ್ಷಗಳಲ್ಲಿ ಜೂನ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಅತಿದೊಡ್ಡ ಚಂಡಮಾರುತ ಬಿಪರ್‌ಜೋಯ್ ಗುಜರಾತ್​ನತ್ತ
ಸಾಂದರ್ಭಿಕ ಚಿತ್ರ
Follow us on

ಅಹಮದಾಬಾದ್​: ಅರಬ್ಬೀ ಸಮುದ್ರ (Arabian Sea) ಬಿಪರ್‌ಜೋಯ್ ಚಂಡಮಾರುತದ (Biperjoy Cyclone) ಅಬ್ಬರ ಜೋರಾಗಿದ್ದು, ಪಥ ಬದಲಾಯಿಸಿ ಗುಜರಾತ್​​ನತ್ತ (Gujurat) ತೆರಳುತ್ತಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಮಾಹಿತಿಗಳ ಪ್ರಕಾರ ಚಂಡಮಾರುತ ಜೂನ್ 15 ರ ಸಂಜೆಯ ವೇಳೆಗೆ ಕಛ್​ ಜಿಲ್ಲೆಗೆ ಅಪ್ಪಳಿಸಲಿದೆ. 58 ವರ್ಷಗಳಲ್ಲಿ ಜೂನ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಅತಿದೊಡ್ಡ ಹಾಗೂ ಗುಜರಾತ್​​ ಅಪ್ಪಿಳಿಸುತ್ತಿರುವ ಮೊದಲ ಚಂಡಮಾರುತ ಇದಾಗಿದೆ. ಈ ಹಿನ್ನೆಲೆ ಮುಂಬೈ, ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೌರಾಷ್ಟ್ರ, ಕಛ್ ಪ್ರದೇಶಗಳು ಮತ್ತು ಪಾಕಿಸ್ತಾನದ ಕರಾವಳಿ ಪ್ರದೇಶಗಳನ್ನು ದಾಟಲಿದೆ. ಕಛ್, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರ ಜಿಲ್ಲೆಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆ ಪಡಿತರ ಮತ್ತು ಊಟದ ವ್ಯವಸ್ಥೆಗಳೊಂದಿಗೆ ಜನರಿಗೆ ತಾತ್ಕಾಲಿಕ ಆಶ್ರಯ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 69 ರೈಲುಗಳನ್ನು ರದ್ದು ಮಾಡಲಾಗಿದೆ. ಕಾಂಡ್ಲಾ ಬಂದರಿನಲ್ಲಿ ಕಾರ್ಯಚರಣೆ ಬಂದ್ ಮಾಡಲಾಗಿದೆ.

ಇದನ್ನೂ ಓದಿ: ಗುರುವಾರ ಅಪ್ಪಳಿಸಲಿದೆ ಬಿಪೋರ್​​ಜಾಯ್ ಚಂಡಮಾರುತ; ಮುನ್ನೆಚ್ಚರಿಕೆಗಳೇನು?

ಎನ್‌ಡಿಆರ್‌ಎಫ್ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್‌ನ ಘಟಕಗಳು ಮತ್ತು ಸ್ವತ್ತುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಹಾಯಕ್ಕಾಗಿ ನಿಯೋಜಿಸಲಾಗಿದೆ. ಕಚ್ ಜಿಲ್ಲೆಯ ಕರಾವಳಿ ಗ್ರಾಮಗಳಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಅನೇಕ ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ಸಾಮಾನುಗಳನ್ನು ಬಿಡಲು ಹಿಂದೇಟು ಹಾಕುತ್ತಿದ್ದಾರೆ.

ಕಛ್ ಜಿಲ್ಲೆಯ ಕರಾವಳಿಯಿಂದ 5 ಕಿ.ಮೀ ದೂರದಲ್ಲಿರುವ ಆಶಿರ್ವಾಡ ಗ್ರಾಮದ ಜನರನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮನವೊಲಿಸಲಿಸಿದ ಬಳಿಕ ಕೆಲ ಜನರು ಗ್ರಾಮ ತೊರೆಯಲು ಒಪ್ಪಿಕೊಂಡಿದ್ದಾರೆ. ಆದರೆ ಸುಮಾರು ಅರ್ಧದಷ್ಟು ನಿವಾಸಿಗಳು ಗ್ರಾಮದಲ್ಲಿ ಉಳಿಯಲು ನಿರ್ಧರಿಸಿದ್ದಾರೆ.

ಸೌರಾಷ್ಟ್ರ-ಕಳ್ ಕರಾವಳಿಗಳ ಮಾಂಡವಿ-ಜಖಾವು ಬಂದರು ಸಮೀಪ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ಜೂನ್ 14ರಂದಿಲೇ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ್, ರಾಜ್ ಕೋಟ್, ಜುನಾಗಢ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಚಂಡಮಾರುತದ ಹಾವಳಿಗೆ ಒಳಗಾಗಲಿವೆ.

ಅರಬ್ಬೀ ಸಮುದ್ರದ ತೀರ ಪ್ರದೇಶಗಳ ರಾಜ್ಯಗಳಾದ ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲೂ ಹೈ ಅಲರ್ಟ್ ಇದ್ದು ಸಮುದ್ರ ತೀರಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಸರಾಸರಿ 125ರಿಂದ 135 ಕಿಮೀ ವೇಗದ ಸುಳಿಗಾಳಿ ಗಂಟೆಗೆ ಗರಿಷ್ಠ 150 ಕಿಮೀವರೆಗೂ ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 am, Wed, 14 June 23