Birbhum Violence: ಇಬ್ಬರು ಶೇಖ್​ಗಳ ನಡುವಿನ ಹಗೆತನ ಬಂಗಾಳದ ಬೊಗ್ಟುಯಿ ಗ್ರಾಮದ ಹತ್ಯಾಕಾಂಡಕ್ಕೆ ಹೇಗೆ ಕಾರಣವಾಯಿತು ಗೊತ್ತಾ?

| Updated By: ಸುಷ್ಮಾ ಚಕ್ರೆ

Updated on: Mar 24, 2022 | 6:55 PM

ಈ ವಾರ ಪಶ್ಚಿಮ ಬಂಗಾಳದ ರಾಮ್‌ಪುರಹತ್‌ನಲ್ಲಿ ನಡೆದ ಹಿಂಸಾಚಾರಕ್ಕೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಡುವಿನ ರಾಜಕೀಯ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಯಾರಿಗೂ ಇನ್ನೂ ಖಚಿತವಾಗಿಲ್ಲ.

Birbhum Violence: ಇಬ್ಬರು ಶೇಖ್​ಗಳ ನಡುವಿನ ಹಗೆತನ ಬಂಗಾಳದ ಬೊಗ್ಟುಯಿ ಗ್ರಾಮದ ಹತ್ಯಾಕಾಂಡಕ್ಕೆ ಹೇಗೆ ಕಾರಣವಾಯಿತು ಗೊತ್ತಾ?
ರಾಮ್​ಪುರಹತ್​ ಹಿಂಸಾಚಾರದ ದೃಶ್ಯ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬೀರ್​​ಭೂಮ್ ಜಿಲ್ಲೆಯ ರಾಮ್​ಪುರಹತ್​ನಲ್ಲಿ (Rampurhat) ನಡೆದ ಹಿಂಸಾಚಾರದಲ್ಲಿ ಸಜೀವದಹನವಾದ 8 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ಘಟನೆ ನಡೆದ ಸ್ಥಳಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಭೇಟಿ ನೀಡಿದ್ದಾರೆ. ಬಿರ್ಬುಮ್ ಜಿಲ್ಲೆಯ ರಾಮ್​ಪುರಹತ್​ನ ಬರೋಸಾಲ್ ಗ್ರಾಮದ ಉಪ ಪ್ರಧಾನ್ ಹಾಗೂ ಟಿಎಂಸಿಯವರಾದ ಭದು ಶೇಖ್ ಎಂಬುವವರ ಹತ್ಯೆಯ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಈ ವಾರ ಪಶ್ಚಿಮ ಬಂಗಾಳದ ರಾಮ್‌ಪುರಹತ್‌ನಲ್ಲಿ ನಡೆದ ಹಿಂಸಾಚಾರಕ್ಕೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಡುವಿನ ರಾಜಕೀಯ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಯಾರಿಗೂ ಇನ್ನೂ ಖಚಿತವಾಗಿಲ್ಲ. ಇಬ್ಬರು ವ್ಯಕ್ತಿಗಳ ನಡುವಿನ ಜಗಳ ಇದೀಗ ಈ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಕಥಾವಸ್ತುವಿನ ಎರಡು ಪ್ರಮುಖ ಪಾತ್ರಗಳು ಬೊಗ್ಟುಯಿ ಗ್ರಾಮದ ಭದು ಶೇಖ್ ಮತ್ತು ಸೋನಾ ಶೇಖ್. ಅವರ ನಡುವಿನ ಗಲಾಟೆ ಬಹಳ ಹಳೆಯದು. ಅದೀಗ ಈ ದುರಂತದಲ್ಲಿ ಮುಖ್ಯ ಪಾತ್ರ ವಹಿಸಿದೆ.

ಗ್ರಾಮದ ಉಪ ಪಂಚಾಯತ್ ಮುಖ್ಯಸ್ಥರಾದ ಭದು ಶೇಖ್ ಅವರು ಸ್ಥಳೀಯ ಯುವಕನಾಗಿದ್ದು, ಪೋಲೀಸ್ ಜೀಪ್​ಗಳನ್ನು ಓಡಿಸುವ ವೃತ್ತಿ ಮಾಡುತ್ತಿದ್ದರು. ಅದೇ ಸಮಯದಲ್ಲಿ ಅವರ ನೆರೆಯವರಾದ ಮತ್ತು ಪ್ರತಿಸ್ಪರ್ಧಿಯಾದ ಸೋನಾ ಶೇಖ್ ಕೂಡ ಇದೇ ರೀತಿಯ ಕೆಲಸವನ್ನು ಮಾಡುತ್ತಿದ್ದರು. ಪೊಲೀಸ್ ವಾಹನಗಳನ್ನು ಓಡಿಸುವುದು ಪ್ರಭಾವಿ ವ್ಯಕ್ತಿಗಳಿಗೆ ಹತ್ತಿರವಾಗಲು ಸಹಾಯ ಮಾಡಿತು. “ಸ್ಥಳೀಯ ಕಲ್ಯಾಣ ತೆರಿಗೆ” ಎಂದು ಕರೆದು ಮರಳು ಲಾರಿಗಳಿಂದ ಹಣ ಸಂಗ್ರಹಿಸಲು ಪ್ರಾರಂಭಿಸಿದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕ್ರಮೇಣ ಭದು ಶೇಖ್ ಅದೃಷ್ಟ ಬದಲಾಯಿತು. ಆದರೆ ಸುಮಾರು ಒಂದು ವರ್ಷದ ಹಿಂದೆ, ಅವರ ಹಿರಿಯ ಸಹೋದರ ಬಾಬರ್ ಶೇಖ್ ಕೊಲೆಯಾಗಿತ್ತು. ಇದರ ಹಿಂದೆ ಸೋನಾ ಮತ್ತು ಅವರ ಕೆಲವು ಸಂಬಂಧಿಕರ ಕೈವಾಡವಿದೆ ಎಂಬ ಮಾತುಗಳು ಬಂದವು. ಇದರಿಂದ ಭದು ಮತ್ತು ಸೋನಾಳ ನಡುವಿನ ಪೈಪೋಟಿ ಹೆಚ್ಚಾಯಿತು. ಕಳೆದ ಸೋಮವಾರ ಭದು ಶೇಖ್ ಅವರ ಕೊಲೆಯಾಯಿತು. ಇದರ ಬೆನ್ನಲ್ಲೇ ಗುಂಪೊಂದು ಅಕ್ಕಪಕ್ಕದ ಹಲವು ಮನೆಗಳಿಗೆ ಬೆಂಕಿ ಹಚ್ಚಿದೆ. ಸೋನಾ ಶೇಖ್ ಅವರ ಮನೆಯಲ್ಲಿ 7 ಸುಟ್ಟ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭದು ಶೇಖ್‌ನನ್ನು ಕೊಂದವರು ಯಾರು ಎಂಬ ಬಗ್ಗೆ ಮತ್ತು ಆ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಭದುವಿನ ರಾಜಕೀಯ ವರ್ಚಸ್ಸು ಬೆಳೆದಂತೆ ಅವರ ಸಂಪತ್ತು ಕೂಡ ಹೆಚ್ಚಾಯಿತು. ಅವರು 4 ಅಂತಸ್ತಿನ ಮನೆ ಖರೀದಿಸಿ, ಎಲ್ಲೆಂದರಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ

ಅಂದಹಾಗೆ, ಸಿಎಂ ಮಮತಾ ಬ್ಯಾನರ್ಜಿ ಇಂದು ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿ 8 ಜನರನ್ನು ಸುಟ್ಟುಹಾಕಿದ ಗ್ರಾಮಕ್ಕೆ ಭೇಟಿ ನೀಡಿದರು. ತಪ್ಪಿತಸ್ಥರು ಶರಣಾಗದಿದ್ದರೆ ಶಂಕಿತರನ್ನು ಬೇಟೆಯಾಡಲಾಗುವುದು ಎಂದು ಹೇಳಿದ್ದಾರೆ. “ಆಧುನಿಕ ಬಂಗಾಳದಲ್ಲಿ ಅಮಾನುಷವಾಗಿ ಇಂಥದ್ದೆಲ್ಲ ಸಂಭವಿಸಬಹುದು ಎಂದು ನಾನು ಎಂದಿಗೂ ನಂಬಿರಲಿಲ್ಲ. ನಮ್ಮ ರಾಜ್ಯದಲ್ಲಿ ತಾಯಂದಿರು ಮತ್ತು ಮಕ್ಕಳನ್ನು ಕೊಲ್ಲಲಾಯಿತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ರಾಮ್‌ಪುರಹತ್ ಹತ್ಯಾಕಾಂಡಕ್ಕೆ ಕಾರಣರಾದ ಅಪರಾಧಿಗಳಿಗೆ ಕಟ್ಟುನಿಟ್ಟಿನ ಶಿಕ್ಷೆಯನ್ನು ನೀಡಲಾಗುವುದು ಎಂದ ಮಮತಾ ಬ್ಯಾನರ್ಜಿ ಅಲ್ಲಿಯೇ ಉನ್ನತ ಪೊಲೀಸ್ ಅಧಿಕಾರಿಯನ್ನು ಕರೆಸಿದರು. ದೂರುಗಳಿಗೆ ಪ್ರತಿಕ್ರಿಯಿಸುವಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸರನ್ನು ಶಿಕ್ಷಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: Birbhum Violence ಬಿರ್‌ಭೂಮ್​​ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ

Birbhum Violence ಪಶ್ಚಿಮ ಬಂಗಾಳ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇನೆ: ನರೇಂದ್ರ ಮೋದಿ