Bizarre News: ಹಾವನ್ನು ಕಚ್ಚಿ ಸಾಯಿಸಿದ ಮೂರು ವರ್ಷದ ಬಾಲಕ!

Uttara Pradesh: ಆಟವಾಡುತ್ತಿದ್ದಲ್ಲಿಗೆ ಬಂದ ಹಾವನ್ನು ಮೂರು ವರ್ಷದ ಬಾಲಕನೊಬ್ಬ ಕಚ್ಚಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ನಂತರ ಮನೆಯವರು ಗಾಬರಿಗೊಂಡು ಬಾಲಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Bizarre News: ಹಾವನ್ನು ಕಚ್ಚಿ ಸಾಯಿಸಿದ ಮೂರು ವರ್ಷದ ಬಾಲಕ!
ಉತ್ತರ ಪ್ರದೇಶದಲ್ಲಿ ಬಾಲಕನೊಬ್ಬ ಹಾವನ್ನು ಕಚ್ಚಿ ಸಾಯಿಸಿದ ಘಟನೆ ನಡೆದಿದೆImage Credit source: Times Internet Network
Follow us
Rakesh Nayak Manchi
|

Updated on: Jun 05, 2023 | 9:36 PM

ಕಾನ್ಪುರ (ಉತ್ತರ ಪ್ರದೇಶ): ಆಟವಾಡುತ್ತಿದ್ದಲ್ಲಿಗೆ ಬಂದ ಹಾವನ್ನು ಮೂರು ವರ್ಷದ ಬಾಲಕನೊಬ್ಬ ಕಚ್ಚಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದ (Uttara Pradesh) ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಂತರ ಮನೆಯವರು ಗಾಬರಿಗೊಂಡು ಬಾಲಕನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ ಅಕ್ಷಯ್ ಮನೆ ಮುಂದೆ ಆಡುತ್ತಿದ್ದಾಗ ಸಣ್ಣ ಹಾವು ಎದುರಿಗೆ ಬಂದಿದೆ. ಇದನ್ನು ನೋಡಿದ ಅಕ್ಷಯ್, ಕೈಯಲ್ಲಿ ಹಿಡಿದು ಬಾಯಿಗೆ ಹಾಕಿ ಕಚ್ಚಿದ್ದಾನೆ. ನಂತರ ಜೋರಾಗಿ ಅಳ ತೊಡಗಿದ್ದಾನೆ. ಏನಾಯ್ತು ಎಂದು ಅಜ್ಜಿ ಮನೆಯೊಳಗಿಂದ ಬಂದು ನೋಡಿದಾಗ ಅಕ್ಷಯ್ ಬಾಯಲ್ಲಿ ಹಾವು ಕಂಡು ಆಘಾತಗೊಂಡಿದ್ದಾರೆ.

ಕೂಡಲೇ ಎಚ್ಚೆತ್ತ ಅಜ್ಜಿ, ಹಾವನ್ನು ತೆಗೆದು ಎಸೆದ ನಂತರ ಬಾಲಕನ ಬಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಾಲಕನ ಅಜ್ಜಿ ಸುನೀತಾ, ಅಕ್ಷಯ್ ಬಾಯಿಯಿಂದ ಹಾವನ್ನು ಹೊರತೆಗೆದೆ. ನಂತರ ಆತನ ಬಾಯಿಯನ್ನು ನೀರಿನಿಂದ ತೊಳೆದು ಪೋಷಕರಿಗೆ ತಿಳಿಸಿದೆ. ಗಾಬರಿಗೊಂಡ ಪೋಷಕರು ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದರು.

ಇದನ್ನೂ ಓದಿ: Bizarre news: ವಿಶ್ವದ ಅಪಾಯಕಾರಿ ಬುಡಕಟ್ಟು ಮುರ್ಸಿ, ಅನುಮತಿ ಇಲ್ಲದೆ ಇಲ್ಲಿಗೆ ಹೋದರೆ ಕೊಂದೇ ಬಿಡುತ್ತಾರೆ

ಘಟನೆಯನ್ನು ವಿವರಿಸಲು ಹಾಗೂ ಹಾವಿನ ಬಗ್ಗೆ ತಿಳಿಸಲು ಬ್ಯಾಗ್​ನಲ್ಲಿ ಹಾವನ್ನು ಹಾಕಿ ವೈದ್ಯರ ಬಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಾಲಕನಿಗೆ ಅಗತ್ಯ ಔಷಧಿ ನೀಡಲಾಗಿದೆ. ಜೀವಕ್ಕೆ ಯಾವುದೇ ಅಪಾಯವಿಲ್ಲ. ಆರೋಗ್ಯವಾಗಿದ್ದಾನೆ. ಹೀಗಾಗಿ ತಪಾಸಣೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯ ಮೊಹಮ್ಮದ್ ಸಲೀಂ ಅನ್ಸಾರಿ ಹೇಳಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!